☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

BBK 13: ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಗಾನವಿ ಗೌಡ ಧಮಾಕಾ; ಶಾಸ್ತ್ರಿ-ಯಶಸ್ ವಿಮಾನಕ್ಕೆ ಹೈಜಾಕ್

BBK 13: Ghanavi Hijacks Shastri, Yashas

BBK 13: ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋ ಈಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಮೂವರು ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಅವರಲ್ಲಿ ‘ಘಾಟಿ’ ಗಾನವಿ ಗೌಡ ಅವರು ಮನೆಗೆ ಕಾಲಿಡುತ್ತಿದ್ದಂತೆಯೇ ಬಿಗ್ ಬಾಸ್ ಆಟದ ಕಥೆಯೇ ಬದಲಾಗಿದೆ. ಅವರು ಒಳಗಿದ್ದ ಯಶಸ್ ಹಾಗೂ ಕಿರಣ್ ಶಾಸ್ತ್ರಿಗೆ (Kiran Shastri) ದೊಡ್ಡ ಶಾಕ್ ನೀಡಿದ್ದಾರೆ.

ಮನೆಯೊಳಗೆ ಆರಾಮಾಗಿದ್ದ ಈ ಇಬ್ಬರೂ ಸ್ಪರ್ಧಿಗಳನ್ನು ಗಾನವಿ ವಾಪಸ್ ವಿಮಾನಕ್ಕೆ ಕಳುಹಿಸಿದ್ದಾರೆ. ಇವರಿಗೆ ಬಿಗ್ ಬಾಸ್ ಮನೆಯಲ್ಲಿ ಇರಲು ಅರ್ಹತೆ ಇಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.

ಹೈಜಾಕರ್ ಆಗಿ ಗಾನವಿ ನೀಡಿದ ಕಾರಣಗಳು

ಗಾನವಿ ಗೌಡ (Ganavi Gowda) ಅವರು ಹೈಜಾಕರ್ ಆಗಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಶಾಸ್ತ್ರಿ ಮತ್ತು ಯಶಸ್ ಅವರನ್ನು ಹೈಜಾಕ್ ಮಾಡಲು ಅವರು ಸ್ಪಷ್ಟ ಕಾರಣ ಕೊಟ್ಟಿದ್ದಾರೆ.

ಶಾಸ್ತ್ರಿ ಅತಿಯಾಗಿ ನಾಟಕ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ‘ಅಕ್ಕ ಅಕ್ಕ’ ಎನ್ನುತ್ತಲೇ ಜೊತೆಗಿದ್ದು ಮೋಸ ಮಾಡುತ್ತೀರಿ. ನಿಮ್ಮ ವ್ಯಕ್ತಿತ್ವ ಇಷ್ಟವಿಲ್ಲ, ನೀವು ಬಿಗ್ ಬಾಸ್‌ಗೆ ಅನರ್ಹ ಎಂದಿದ್ದಾರೆ.

ಯಶಸ್ ಅವರ ಕೊಡುಗೆ ಈ ಶೋನಲ್ಲಿ ಎಲ್ಲೂ ಕಾಣಿಸುತ್ತಿಲ್ಲ. ಅವರಲ್ಲಿ ಸಾಮರ್ಥ್ಯ ಇದ್ದರೂ ಬೇರೆ ಸ್ಪರ್ಧಿಗಳಿಗೆ ಹೋಲಿಸಿದರೆ ಅರ್ಹರಲ್ಲ ಎಂದು ಗಾನವಿ ತಿಳಿಸಿದ್ದಾರೆ.

BBK 13: ಗಾನವಿ – ಶಾಸ್ತ್ರಿ ನಡುವೆ ಬಿಸಿಬಿಸಿ ಮಾತಿನ ಚಕಮಕಿ

ಗಾನವಿ ಅವರ ಮಾತಿಗೆ ಕಿರಣ್ ಶಾಸ್ತ್ರಿ ತಿರುಗೇಟು ನೀಡಲು ಪ್ರಯತ್ನಿಸಿದರು. ‘ನಿಮಗೆ ನನ್ನನ್ನು ಕಂಡರೆ ಭಯ, ಅದಕ್ಕೇ ಹೀಗೆ ಮಾಡುತ್ತಿದ್ದೀರಿ’ ಎಂದು ಶಾಸ್ತ್ರಿ ಹೇಳಿದರು.

ಅದಕ್ಕೆ ಉತ್ತರಿಸಿದ ಗಾನವಿ, ‘ನಿಮ್ಮನ್ನು ಕಂಡರೆ ಭಯವಿಲ್ಲ, ಕಿರಿಕಿರಿ ಆಗುತ್ತದೆ’ ಎಂದರು. ಹೊರಗಿನಿಂದ ನಿಮ್ಮ ಆಟವನ್ನು ನೋಡಿಕೊಂಡೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಖಡಕ್ ಆಗಿ ಹೇಳಿದರು.

ಇದರಿಂದಾಗಿ ಇಬ್ಬರೂ ಸ್ಪರ್ಧಿಗಳು ಬಿಗ್ ಬಾಸ್ ಆದೇಶ ಬರುವವರೆಗೆ ವಿಮಾನದಲ್ಲೇ ಕಾಲ ಕಳೆಯಬೇಕಾಗಿದೆ.