☔ Weather
Bengaluru: ☁️ 22°C | AQI 53
Mysore: ☁️ 22°C | AQI 55
Mangalore: ☁️ 26°C | AQI 87
Bengaluru: ☁️ 22°C | AQI 53

RSS : ಬೆಂಗಳೂರಿನಿಂದಲೇ ಆರ್‌ಎಸ್‌ಎಸ್‌ ನ ತೊಲಗಿಸಬೇಕು..! – ಬಿಕೆ ಹರಿಪ್ರಸಾದ್ ಹೇಟ್ ಸ್ಪೀಚ್ !

ಬೆಂಗಳೂರು : ಆರ್‌ಎಸ್‌ಎಸ್ (RSS) ಮತ್ತು ಬಿಜೆಪಿಯನ್ನು (Bjp) ಬೆಂಗಳೂರಿಂದ ಓಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ವಂದೇ ಮಾತರಂ ನಮ್ಮ ಆಸ್ತಿ ಎಂದು ಹೇಳಿದರು. ಖಾಕಿ ಚಡ್ಡಿ ಹಾಕಿ ಕೈಯಲ್ಲಿ ದೊಣ್ಣೆ ಹಿಡಿದು ಸಂಜೆ ಶಾಖೆಗೆ ಹೋಗುವವರಿಗೆ ದೇಶಭಕ್ತಿ ಗೊತ್ತಿಲ್ಲ, ಬಿಜೆಪಿ ಶಾಸಕರು ಬೋಗಸ್, ನೋಡಿಕೊಂಡು ಕೂಡ ವಂದೇ ಮಾತರಂ ಹೇಳಲು ಅವರಿಗೆ ಬರುವುದಿಲ್ಲ, ಆದರೆ ಕಾಂಗ್ರೆಸ್‌ನವರು ಅದನ್ನು ಚೆನ್ನಾಗಿ ಹಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಸೋತ ಕ್ಷೇತ್ರಗಳತ್ತ ಕಾಂಗ್ರೆಸ್ ಚಿತ್ತ – 84 ಕ್ಷೇತ್ರಗಳಲ್ಲಿ ಭಾರತ್ ಜೋಡೊ 2.0 ಅಭಿಯಾನಕ್ಕೆ ಪ್ಲಾನ್

ಕಾಂಗ್ರೆಸ್ ನಿಂತ ನೀರಲ್ಲ, ಹರಿಯುವ ನೀರು ಇದ್ದಂತೆ, ಇವತ್ತು ನಾನಿದ್ದೇನೆ ನಾಳೆ ಇರುವುದಿಲ್ಲ, ಯಾರೂ ಬೇಸರ ಮಾಡಿಕೊಳ್ಳಬಾರದು ಎಂದು ಹೇಳಿದರು. ಪಕ್ಷ ಯಾರನ್ನೂ ಕೈಬಿಟ್ಟಿಲ್ಲ, ಬಿಡುವುದಿಲ್ಲ, ನಿರಂತರ ದುಡಿಮೆಗೆ ಸ್ಥಾನಮಾನ ಸಿಗುತ್ತದೆ, ತಾನೇ ಅದಕ್ಕೆ ದೊಡ್ಡ ಉದಾಹರಣೆ ಎಂದರು. ಐದು ದಶಕಕ್ಕೂ ಹೆಚ್ಚು ಕಾಲ ದುಡಿದು 53 ವರ್ಷಗಳ ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದೆ, ಕಾಯುವಿಕೆ ಅಗತ್ಯ ಎಂದು ತಿಳಿಸಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅಜ್ಞಾನಿ, ಅವರು ಹೋಗುವವರೆಗೂ ಹೋರಾಟ ಮಾಡಬೇಕು, ನಿರ್ಲಕ್ಷ್ಯ ವಹಿಸಿದರೆ ಅರ್ಹ ಮತದಾರರನ್ನು ಕೈಬಿಡುತ್ತಾರೆ, ಮತದಾರರ ಪಟ್ಟಿ ಬಗ್ಗೆ ಜಾಗೃತರಾಗಿರಬೇಕು ಎಂದು ಸೂಚಿಸಿದರು.

ಟಾರ್ಗೆಟ್ ಬೆಂಗಳೂರು !

ಬೆಂಗಳೂರು ಬಿಜೆಪಿಯ ಭದ್ರಕೋಟೆ ಮತ್ತು ಆರ್‌ಎಸ್‌ಎಸ್ ಬೇರು ಗಟ್ಟಿಯಾಗಿರುವ ನೆಲ. ಇಲ್ಲಿ ನಿಂತು ಹೀಗೆ ಸವಾಲು ಹಾಕುವುದು ಕಾರ್ಯಕರ್ತರಲ್ಲಿ ಹುರುಪು ತುಂಬುವ ಪ್ರಯತ್ನ. ವಂದೇ ಮಾತರಂ ವಿಚಾರದಲ್ಲಿ ಕಾಂಗ್ರೆಸ್ ತನ್ನ ರಾಷ್ಟ್ರೀಯತಾವಾದಿ ಪರಂಪರೆಯನ್ನು ಮರಳಿ ಪಡೆಯಲು ಯತ್ನಿಸುತ್ತಿದೆ. ಬಿಜೆಪಿ ದೇಶಭಕ್ತಿಯನ್ನು ತನ್ನ ಸ್ವತ್ತು ಎಂದಿರುವಾಗ ಈ ತಿರುಗೇಟು ಮಹತ್ವ ಪಡೆಯುತ್ತದೆ. ಖಾಕಿ ಚಡ್ಡಿ ವ್ಯಂಗ್ಯ ಹಳೆಯ ಶೈಲಿಯಾದರೂ ಹಿರಿಯ ಕಾರ್ಯಕರ್ತರಿಗೆ ಹತ್ತಿರವಾಗುತ್ತದೆ. ಚುನಾವಣಾ ಆಯುಕ್ತರ ವಿರುದ್ಧ ವೈಯಕ್ತಿಕ ಟೀಕೆ ಸಾಂವಿಧಾನಿಕ ಸಂಸ್ಥೆಯ ಘನತೆಗೆ ಸವಾಲು ಎಂಬ ಚರ್ಚೆ ಹುಟ್ಟಿಸುತ್ತದೆ. ಕಳೆದ ಚುನಾವಣೆಯಲ್ಲಿ ಮತಗಳ್ಳತನ ಆರೋಪ ಕೇಳಿಬಂದಿದ್ದರಿಂದ ಈ ವಿಷಯ ಕಾಂಗ್ರೆಸ್‌ಗೆ ಪ್ರಮುಖ ಅಸ್ತ್ರವಾಗಿದೆ. ಹರಿಪ್ರಸಾದ್ ಭಾಷಣದಲ್ಲಿ ಆಂತರಿಕ ಅಸಮಾಧಾನ ಶಮನ, ನಿರಂತರ ದುಡಿಮೆಗೆ ಮತ್ತು ಎದುರಾಳಿ ವಿರುದ್ಧ ಆಕ್ರಮಣ ರೀತಿಯ ಮೂರು ಸಂದೇಶಗಳಿವೆ.