Daily Horoscope: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಕೃಷ್ಣ ಪಕ್ಷದ ತೃತೀಯಾ ತಿಥಿಯ ಮಂಗಳವಾರದ ದಿನ ಭವಿಷ್ಯ ಇಲ್ಲಿದೆ. ಇಂದು ಅಧಿಕಾರ ಪ್ರತಿಷ್ಠಾಪನೆ, ಬಡ್ಡಿ ವ್ಯವಹಾರ, ಧೈರ್ಯದ ಕೊರತೆ ಹಾಗೂ ಸ್ನೇಹ ಸಂಧಾನದ ವಿಫಲತೆ ಪ್ರಮುಖ ಬೆಳವಣಿಗೆಗಳಾಗಿವೆ.
ಇಂದು ಮೇಷದಿಂದ ಮೀನ ರಾಶಿಯವರೆಗಿನ ಜಾತಕಫಲ ಹೇಗಿರಲಿದೆ? ಯಾವ ರಾಶಿಯವರಿಗೆ ಆರ್ಥಿಕ ಲಾಭ ಸಿಗಲಿದೆ ಹಾಗೂ ಯಾರು ಜಾಗ್ರತೆಯಿಂದ ಇರಬೇಕು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಗ್ರಹಗಳ ಚಲನೆಯ ಆಧಾರದ ಮೇಲೆ ನಿಮ್ಮ ಇಂದಿನ ದಿನವನ್ನು ಸರಿಯಾಗಿ ಯೋಜಿಸಲು, ಶುಭ-ಅಶುಭ ಕಾಲಗಳನ್ನು ತಿಳಿದುಕೊಳ್ಳಲು ಈ ರಾಶಿಫಲ ನಿಮಗೆ ಸಹಾಯ ಮಾಡಲಿದೆ.
ಮೇಷ
ಸ್ವಂತ ಉದ್ಯಮ ನಡೆಸುತ್ತಿದ್ದರೆ ಇಂದು ಉತ್ತಮ ಲಾಭ ಸಿಗಲಿದೆ. ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಳ್ಳುವಿರಿ. ಸ್ತ್ರೀಯರ ಕಾರಣದಿಂದ ಲಾಭವಾಗಲಿದೆ. ವಾಹನ ಖರೀದಿಗೆ ವ್ಯವಸ್ಥೆ ಮಾಡಿಕೊಳ್ಳುವಿರಿ.
ವೃಷಭ
ಆರ್ಥಿಕವಾಗಿ ದೊಡ್ಡ ಸಮಸ್ಯೆಗಳಿಲ್ಲ. ಶತ್ರುಗಳ ಕಾಟ ನಿಮಗೊಂದಿಷ್ಟು ಚಿಂತೆ ತರಬಹುದು. ನಿಮ್ಮಷ್ಟಕ್ಕೆ ನೀವಿರಲು ಬಯಸುವಿರಿ. ಆಲಸ್ಯತನವನ್ನು ಬದಿಗೊತ್ತುವುದು ಒಳಿತು.
ಮಿಥುನ
ಸರ್ಕಾರಿ ಅಧಿಕಾರಿಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ. ಹಣಕಾಸಿನ ವಿಚಾರದಲ್ಲಿ ಸಂಕಷ್ಟ ಎದುರಾಗಬಹುದು. ಖಾಸಗಿ ಸಮಾರಂಭದಲ್ಲಿ ಭಾಗವಹಿಸುವಿರಿ. ವ್ಯವಹಾರದಲ್ಲಿ ಜಾಗ್ರತೆ ಇರಲಿ.
ಕರ್ಕಾಟಕ
ಸಂಕೀರ್ಣ ಜೀವನವನ್ನು ಆಶಾವಾದದಿಂದ ಸರಳವಾಗಿಸಿಕೊಳ್ಳಿ. ಭೂ ವ್ಯವಹಾರದಲ್ಲಿ ಪಾಲುದಾರಿಕೆ ಲಾಭ ತರಲಿದೆ. ಮಕ್ಕಳ ಭವಿಷ್ಯಕ್ಕಾಗಿ ಕೊಂಚ ಶ್ರಮಪಡಬೇಕಾಗಬಹುದು.
ಸಿಂಹ
ಕೆಲಸದ ಸ್ಥಳದಲ್ಲಿ ಒತ್ತಡ ಹೆಚ್ಚಾಗಬಹುದು. ಖಾಸಗಿ ಸಂಸ್ಥೆಯನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿ ಸಿಗಲಿದೆ. ಇತರರು ನಿಮ್ಮ ನಿರ್ಧಾರ ಬದಲಾಯಿಸುವುದು ಕೋಪಕ್ಕೆ ಕಾರಣವಾಗಬಹುದು.
ಕನ್ಯಾ
ಸಂಗಾತಿ ಜೊತೆ ಆಂತರಿಕ ಆಲೋಚನೆಗಳನ್ನು ಹಂಚಿಕೊಳ್ಳುವಿರಿ. ಭೂಮಿ ವಿಚಾರದಲ್ಲಿ ನಷ್ಟವಾಗುವ ಸಾಧ್ಯತೆ ಇದೆ. ಮಕ್ಕಳು ಹಣ ದುರುಪಯೋಗ ಮಾಡದಂತೆ ನಿಗಾ ವಹಿಸಿ.
ತುಲಾ
ಜವಾಬ್ದಾರಿಗಳನ್ನು ಮುನ್ನಡೆಸುವುದು ಕೊಂಚ ಕಷ್ಟವಾಗಬಹುದು. ವಿರೋಧಿಗಳು ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯ ಸಮಸ್ಯೆ ಎದುರಾಗಬಹುದು. ಭೂ ವ್ಯವಹಾರದಲ್ಲಿ ಎಚ್ಚರವಿರಲಿ.
ವೃಶ್ಚಿಕ
ಹೂಡಿಕೆದಾರರಿಗೆ ಇಂದು ಉತ್ತಮ ಲಾಭ ಸಿಗಲಿದೆ. ದೀರ್ಘಕಾಲದ ಸಾಲಗಳು ತೀರಲಿವೆ. ರಾಜಕಾರಣಿಗಳಿಗೆ ಬೆಂಬಲ ಸಿಗಲಿದೆ. ಸ್ನೇಹಿತರ ಸಲಹೆ ಉದ್ಯಮಕ್ಕೆ ಸಹಕಾರಿಯಾಗಲಿದೆ.
ಧನು
ಇಂದಿನ ದಿನ ಅತ್ಯಂತ ಉತ್ಸಾಹದಿಂದ ಕೂಡಿರಲಿದೆ. ಹೆಚ್ಚಿನ ಕೃಷಿ ಉತ್ಪನ್ನದಿಂದ ಮನಸ್ಸಿಗೆ ಸಾರ್ಥಕತೆ ಸಿಗಲಿದೆ. ಸಜ್ಜನರ ಸಹವಾಸ ಇಷ್ಟಪಡುವಿರಿ. ಪ್ರಯಾಣದಿಂದ ಹೆಚ್ಚಿನ ಪ್ರಯೋಜನವಿಲ್ಲ.
ಮಕರ
ಹಳೆಯ ನೆನಪುಗಳು ಮನಸ್ಸನ್ನು ಕಾಡಲಿವೆ. ಭೂಮಿ ಕ್ರಯ-ವಿಕ್ರಯದಲ್ಲಿ ನಷ್ಟವಾಗುವ ಸಾಧ್ಯತೆ ಇದೆ. ಅತಿಯಾದ ಕೆಲಸದ ಕಾರಣ ವಿಶ್ರಾಂತಿ ಅಗತ್ಯ.
ಕುಂಭ
ನಿಮ್ಮ ಸಾಮರ್ಥ್ಯ ಮತ್ತು ವ್ಯವಹಾರ ಕುಶಲತೆ ನಿಮ್ಮನ್ನು ಮುನ್ನಡೆಸುತ್ತದೆ. ಆಹಾರ ಮಾರಾಟಗಾರರಿಗೆ ಲಾಭ ಹೆಚ್ಚಿರಲಿದೆ. ಹೂಡಿಕೆ ಮಾಡುವಾಗ ಜಾಗರೂಕರಾಗಿರಿ.
ಮೀನ
ಭವಿಷ್ಯಕ್ಕೆ ಭದ್ರತೆಯನ್ನು ಕಂಡುಕೊಳ್ಳುವಿರಿ. ಸಮಾಜದಲ್ಲಿ ಗೌರವ ಪ್ರಾಪ್ತಿಯಾಗಲಿದೆ. ಸ್ತ್ರೀಯರಿಗೆ ಶುಭ ಲಾಭಗಳಿವೆ. ನೇರ ನುಡಿಗಳಿಂದ ತೊಂದರೆ ತಂದುಕೊಳ್ಳಬೇಡಿ.
Daily Horoscope
ಸಂವತ್ಸರ: ಪರಾಭವ ಸಂವತ್ಸರ (ಶಾಲಿವಾಹನ ಶಕೆ 1949)
ಮಾಸ / ಋತು: ಭಾದ್ರಪದ ಮಾಸ, ವರ್ಷ ಋತು, ದಕ್ಷಿಣಾಯನ
ತಿಥಿ / ವಾರ: ಕೃಷ್ಣ ಪಕ್ಷದ ತೃತೀಯಾ ತಿಥಿ, ಮಂಗಳವಾರ
ನಕ್ಷತ್ರ: ಭರಣೀ ನಕ್ಷತ್ರ (ಸೌರ ಮಾಸ ಕನ್ಯಾ, ಮಹಾನಕ್ಷತ್ರ ಹಸ್ತ)
ಸೂರ್ಯೋದಯ / ಸೂರ್ಯಾಸ್ತ: ಬೆಳಿಗ್ಗೆ 06:09 / ಸಂಜೆ 06:09
ಶುಭಾಶುಭ ಕಾಲ: ರಾಹು ಕಾಲ: 15:10 – 16:40, ಯಮಗಂಡ ಕಾಲ: 09:10 – 10:40, ಗುಳಿಕ ಕಾಲ: 12:10 – 15:10




