
ಚನ್ನಗಿರಿ: ಕರ್ನಾಟಕ ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿವತ್ತ ಸಾಗುತ್ತಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಕೈಬೀಸಿ ಕರೆಯುತ್ತಿವೆ. ಇಲ್ಲಿವರೆಗೂ ಕೈಗಾರಿಕಾ ತರಬೇತಿಯನ್ನು ಗಂಭೀರವಾಗಿ ಪರಿಗಣಿಸದ ಯುವ ಜನತೆ ಈಗ ‘ಐಟಿಐ’ (ITI) ಶಿಕ್ಷಣವನ್ನು ಪಡೆಯುವತ್ತ ಆಸಕ್ತಿ ತೋರುತ್ತಿದ್ದಾರೆ.
ಇನ್ನೊಂದು ಕಡೆ ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಕೂಡ ‘ಐಟಿಐ’ ತರಬೇತಿ ನೀಡುವುದಕ್ಕೆ ಒತ್ತು ಕೊಡುತ್ತಿವೆ. ಅದರಲ್ಲೂ ಚಿತ್ರದುರ್ಗ, ಹಿರಿಯೂರು, ಹೊಸಪೇಟೆ, ರಾಣೇಬೆನ್ನೂರು, ಹಾವೇರಿ, ಚನ್ನಗಿರಿ, ಶಿವಮೊಗ್ಗ ಸೇರಿದಂತೆ ಭ್ರದಾವತಿ ಭಾಗಗಳಲ್ಲಿನ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕೈಗಾರಿಕಾ ತರಬೇತಿ ನೀಡುವಲ್ಲಿ ಟಿ.ಎಂ.ಎ.ಇ. ಸಂಸ್ಠೆ, (TMAES) ಹರಪ್ಪನಹಳ್ಳಿ ಪ್ರಮುಖ ಪಾತ್ರವಹಿಸಿದೆ. ಹಾಗಿದ್ದರೆ, ಕೈಗಾರಿಕಾ ತರಬೇತಿ ಯಾಕಿಷ್ಟು ಮುಖ್ಯ? ಈ ಸಂಸ್ಥೆ ಪಾತ್ರವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಸಂಸ್ಥೆಯ ಪರಿಚಯ
ಟಿ.ಎಂ.ಎ.ಇ. ಸಂಸ್ಠೆಯ ಶ್ರೀ ಮಹಾರುದ್ರಸ್ವಾಮಿ ಕೈಗಾರಿಕಾ ತರಬೇತಿ ಸಂಸ್ಥೆಯು, ಚನ್ನಗಿರಿಯಲ್ಲಿ 1984ರಲ್ಲಿ ಆರಂಭಗೊಂಡಿದ್ದು, ಇಲ್ಲಿನ ಸ್ಥಳೀಯ ವಿದ್ಯಾರ್ಥಿಗಳಿಗೆ ತಾಂತ್ರಿಕ ಮತ್ತು ವೃತ್ತಿಪರ ಕೌಶಲ್ಯಗಳನ್ನು ಕಲಿಯಲು ಅವಕಾಶ ಒದಗಿಸುವ ಪ್ರತಿಷ್ಟಿತ ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಯಾಗಿದೆ. ನಮ್ಮ ಕೈಗಾರಿಕಾ ತರಬೇತಿ ಸಂಸ್ಥೆಯ ಮುಖ್ಯ ಉದ್ದೇಶ ವಿದ್ಯಾರ್ಥಿಗಳಿಗೆ ಸೈದ್ಧಾಂತಿಕ ಜ್ಞಾನದ ಜೊತೆಗೆ ಪ್ರಾಯೋಗಿಕ ತರಬೇತಿ ನೀಡಿ, ಅವರನ್ನು ವಿವಿಧ ತಾಂತ್ರಿಕ ವೃತ್ತಿಗಳಿಗೆ ಸಿದ್ಧಗೊಳಿಸುವುದಾಗಿದೆ.
ಟಿ.ಎಂ.ಎ.ಇ. ಸಂಸ್ಠೆಯ ಸಂಸ್ಥಾಪಕರಾದ ಲಿಂ.ಷ.ಬ್ರ. ಶ್ರೀ ಚಂದ್ರಮೌಳೀಶ್ವರ ಕೃಪಾಶೀರ್ವಾದದೊಂದಿಗೆ ಷ.ಬ್ರ. ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳವರ ಆಶೀರ್ವಾದದೊಂದಿಗೆ ಕ್ರಿಯಾಶೀಲ ಕಾರ್ಯದರ್ಶಿಳಾದ ಶ್ರೀ ಟಿ.ಎಂ. ಚಂದ್ರಶೇಖರಯ್ಯರವರ ಸೂಕ್ತ ಮಾರ್ಗದರ್ಶನದೊಂದಿಗೆ ಶ್ರೀ ಮಹಾರುದ್ರಸ್ವಾಮಿ ಕೈಗಾರಿಕಾ ತರಬೇತಿ ಸಂಸ್ಥೆಯು ಯಶಸ್ವಿಯಾಗಿ 42 ವರ್ಷಗಳನ್ನು ಪೂರ್ಣಗೊಳಿಸಿರುತ್ತದೆ.
ವೃತ್ತಿಪರ ಶಿಕ್ಷಣವು ವ್ಯಕ್ತಿಯ ಜೀವನವನ್ನು ರೂಪಿಸುವ ಪ್ರಮುಖ ಸಾಧನವಾಗಿದೆ. ಶಿಕ್ಷಣದ ಮೂಲಕ ಜ್ಞಾನ, ಕೌಶಲ್ಯ, ಶಿಸ್ತು, ಜವಾಬ್ದಾರಿ ಮತ್ತು ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಬಹುದು. ಆಧುನಿಕ ಸಮಾಜದಲ್ಲಿ ಶಿಕ್ಷಣದ ಜೊತೆಗೆ ಉದ್ಯೋಗಕ್ಕೆ ಅಗತ್ಯವಾದ ಪ್ರಾಯೋಗಿಕ ಕೌಶಲ್ಯಗಳನ್ನು ಹೊಂದಿರುವುದು ಅತ್ಯಂತ ಮುಖ್ಯವಾಗಿದೆ.
ಇದನ್ನೂ ಓದಿ: Job Alert: ಹಬ್ಬದ ಋತುವಿನಲ್ಲಿ ಬರಲಿದೆ 2.5 ಲಕ್ಷ ಉದ್ಯೋಗ
ಈ ಹಿನ್ನೆಲೆಯಲ್ಲಿ ಟಿ.ಎಂ.ಎ.ಇ. ಸಂಸ್ಠೆಯ ಶ್ರೀ ಮಹಾರುದ್ರಸ್ವಾಮಿ ಕೈಗಾರಿಕಾ ತರಬೇತಿ ಸಂಸ್ಥೆಯು, ಚನ್ನಗಿರಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.
ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ವೃತ್ತಿಯ ತರಬೇತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉಪಕರಣಗಳ ಬಳಕೆ, ಕಾರ್ಯವಿಧಾನ, ಕಾರ್ಯಾಗಾರ ಚಟುವಟಿಕೆಗಳು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಕಲಿಯುತ್ತಾರೆ. ಇಂತಹ ತರಬೇತಿಯು ವಿದ್ಯಾರ್ಥಿಗಳಲ್ಲಿ ವೃತ್ತಿಪರ ಕೌಶಲ್ಯ, ಶಿಸ್ತು, ಸಮಯಪಾಲನೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸಲು ಸಹಕಾರಿಯಾಗುತ್ತದೆ.

ಸಂಸ್ಥೆಯ ಮಹತ್ವ
ಚನ್ನಗಿರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿಯೇ ತಾಂತ್ರಿಕ ತರಬೇತಿ ಪಡೆಯಲು ನಮ್ಮ ಟಿ.ಎಂ.ಎ.ಇ ಸಂಸ್ಥೆಯ ಶ್ರೀ ಮಹಾರುದ್ರಸ್ವಾಮಿ ಕೈಗಾರಿಕಾ ತರಬೇತಿ ಸಂಸ್ಥೆಯು ಶ್ಯೆಕ್ಷಣಿಕ ಸೇವೆ ಒದಗಿಸುತ್ತಿದೆ. ನಮ್ಮ ಸಂಸ್ಥೆಯು ತರಬೇತಿಯ ಮೂಲಕ ವಿದ್ಯಾರ್ಥಿಗಳು ಉದ್ಯೋಗಾವಕಾಶಗಳನ್ನು ಹುಡುಕುವುದರ ಜೊತೆಗೆ, ತಮ್ಮ ಕೌಶಲ್ಯವನ್ನು ಆಧರಿಸಿ ಸ್ವಯಂ ಉದ್ಯೋಗದತ್ತವೂ ಸಾಗುತ್ತಿದ್ದಾರೆ.
ನಮ್ಮ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರಸ್ತುತ ಎಲೆಕ್ಟ್ರೀಷಿಯನ್, ಫಿಟ್ಟರ್, ಡ್ರಾಫ್ಟ್ಮನ್ ಮೆಕ್ಯಾನಿಕಲ್ ಟ್ರೇಡ್ಗಳು ಲಭ್ಯವಿದ್ದು ಎಸ್.ಎಸ್.ಎಲ್.ಸಿಯಲ್ಲಿ ಉತ್ತೀರ್ಣರಾದ ಅಥವಾ ಪಿ.ಯು.ಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪ್ರವೇಶ ಅರ್ಹತೆ ಹೊಂದುತ್ತಾರೆ. ಈ ವೃತ್ತಿಗಳು 2 ವರ್ಷಗಳ ತರಬೇತಿ ಅವಧಿಯಾಗಿರುತ್ತದೆ.
ಇಂದಿನ ಕೈಗಾರಿಕಾ ತರಬೇತಿಯಲ್ಲಿ ತಾಂತ್ರಿಕ ಕ್ಷೇತ್ರಗಳ ಜೊತೆಗೆ ಬದಲಾಗುತ್ತಿರುವ ಕೈಗಾರಿಕಾ ಅಗತ್ಯಗಳಿಗೆ ಹೊಂದಿಕೊಳ್ಳುವ ಹೊಸ ಕೌಶಲ್ಯಗಳಿಗೂ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ.
ನಮ್ಮ ಪ್ರಮುಖ ಉದ್ದೇಶಗಳಲ್ಲಿ ಕೈಗಾರಿಕೆಗಳಿಗೆ ನುರಿತ ಮಾನವ ಸಂಪನ್ಮೂಲ ಒದಗಿಸುವುದು, ಕೈಗಾರಿಕಾ ಉತ್ಪಾದನೆಯ ಗುಣಮಟ್ಟವನ್ನು ಹೆಚ್ಚಿಸುವುದು ಮತ್ತು ಯುವಜನರಲ್ಲಿ ಉದ್ಯೋಗಯೋಗ್ಯ ಕೌಶಲ್ಯಗಳನ್ನು ಬೆಳೆಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ.
ತರಬೇತಿ ಮತ್ತು ಬೋಧನಾ ವಿಧಾನ
ITI ತರಬೇತಿಯಲ್ಲಿ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಶಿಕ್ಷಣ ಎರಡಕ್ಕೂ ಮಹತ್ವವಿದೆ. ವಿದ್ಯಾರ್ಥಿಗಳು ತಮ್ಮ ಆಯ್ಕೆಮಾಡಿದ ವೃತ್ತಿಗೆ ಸಂಬಂಧಿಸಿದ ಮೂಲಭೂತ ತತ್ವಗಳು, ಉಪಕರಣಗಳ ಬಳಕೆ, ಕೆಲಸದ ವಿಧಾನ, ನಿರ್ವಹಣೆ ಮತ್ತು ಸುರಕ್ಷತಾ ನಿಯಮಗಳನ್ನು ಕಲಿಯುತ್ತಾರೆ. ಅದರ ಜೊತೆಗೆ ಕಾರ್ಯಾಗಾರಗಳಲ್ಲಿ ಪ್ರಾಯೋಗಿಕವಾಗಿ ಕೆಲಸ ಮಾಡುವ ಮೂಲಕ ಕಲಿತ ವಿಷಯವನ್ನು ಅನುಭವದ ಮೂಲಕ ಅರ್ಥಮಾಡಿಕೊಳ್ಳುತ್ತಾರೆ.
ವಿದ್ಯಾರ್ಥಿಗಳಿಗೆ ತರಬೇತಿ ವಿಧಾನ:
ಕೈಚಳಕ,
ಸಮಸ್ಯೆ ಪರಿಹಾರ ಸಾಮರ್ಥ್ಯ,
ಉಪಕರಣ ಬಳಕೆಯ ಜ್ಞಾನ,
ಸಮಯಪಾಲನೆ,
ಕೆಲಸದ ಶಿಸ್ತು,
ತಂಡದಲ್ಲಿ ಕೆಲಸ ಮಾಡುವ ಗುಣ
ಮುಂತಾದ ಕೌಶಲ್ಯಗಳನ್ನು ಬೆಳೆಸಲು ಸಹಾಯ ಮಾಡುತ್ತದೆ.
ಪ್ರಾಯೋಗಿಕ ತರಬೇತಿ
ITI ಶಿಕ್ಷಣದ ಪ್ರಮುಖ ಲಕ್ಷಣವೆಂದರೆ ಪ್ರಾಯೋಗಿಕ ತರಬೇತಿ.
ಉದಾಹರಣೆಗೆ, ಎಲೆಕ್ಟ್ರಿಕಲ್ ಕ್ಷೇತ್ರದಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳು ಕೇವಲ ವಿದ್ಯುತ್ ಸರ್ಕ್ಯೂಟ್ಗಳ ಸಿದ್ಧಾಂತವನ್ನು ಓದುವುದಲ್ಲದೆ, ಸೂಕ್ತ ಮಾರ್ಗದರ್ಶನದಲ್ಲಿ ವೈರಿಂಗ್, ಸಂಪರ್ಕ ಮತ್ತು ದೋಷ ಪತ್ತೆ ಮುಂತಾದ ಕಾರ್ಯಗಳನ್ನು ಅಭ್ಯಾಸ ಮಾಡುತ್ತಾರೆ. ಅದೇ ರೀತಿ ಮೆಕ್ಯಾನಿಕಲ್ ಕ್ಷೇತ್ರದ ವಿದ್ಯಾರ್ಥಿಗಳು ಯಂತ್ರದ ಭಾಗಗಳು, ಉಪಕರಣಗಳು, ನಿರ್ವಹಣೆ ಮತ್ತು ದುರಸ್ತಿ ವಿಧಾನಗಳ ಬಗ್ಗೆ ಪ್ರಾಯೋಗಿಕ ಅನುಭವ ಪಡೆಯುತ್ತಾರೆ. ಪ್ರಸ್ತುತ ITI ವ್ಯವಸ್ಥೆಯಲ್ಲಿ ‘ಒಜೆಟಿ’ (On-the-Job Training) ಮತ್ತು ಪ್ರಾಜೆಕ್ಟ್ ವರ್ಕ್ (Project Work)ಗೂ ಮಹತ್ವ ನೀಡಲಾಗುತ್ತಿದೆ.
ಕೈಗಾರಿಕಾ ಸುರಕ್ಷತೆ
ತಾಂತ್ರಿಕ ತರಬೇತಿಯಲ್ಲಿ ಸುರಕ್ಷತೆಗೆ ಅತ್ಯಂತ ಹೆಚ್ಚಿನ ಮಹತ್ವವಿದೆ. ವಿದ್ಯುತ್, ಯಂತ್ರೋಪಕರಣ, ವೆಲ್ಡಿಂಗ್ ಮತ್ತು ಇತರ ಉಪಕರಣಗಳನ್ನು ಬಳಸುವಾಗ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ.
ವಿದ್ಯಾರ್ಥಿಗಳಿಗೆ ಸುರಕ್ಷತೆ ಕ್ರಮ:
ಸೂಕ್ತ ಸುರಕ್ಷತಾ ಉಡುಪು ಧರಿಸಬೇಕು.
ಅಗತ್ಯವಿದ್ದಲ್ಲಿ ಸುರಕ್ಷತಾ ಕನ್ನಡಕ ಮತ್ತು ಕೈಗವಸು (Hand Glove) ಬಳಸಬೇಕು.
ವಿದ್ಯುತ್ ಉಪಕರಣಗಳನ್ನು ಜಾಗರೂಕತೆಯಿಂದ ಬಳಸಬೇಕು.
ಯಂತ್ರವನ್ನು ಬಳಸುವ ಮೊದಲು ಅದರ ಕಾರ್ಯವಿಧಾನ ತಿಳಿದುಕೊಳ್ಳಬೇಕು.
ದೋಷಪೂರಿತ ಉಪಕರಣಗಳನ್ನು ಬಳಸಬಾರದು.
ಕಾರ್ಯಾಗಾರವನ್ನು ಸ್ವಚ್ಛವಾಗಿಡಬೇಕು.
ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ತಿಳಿದುಕೊಳ್ಳಬೇಕು.
ಅಪ್ರೆಂಟಿಸ್ಶಿಪ್ ಮತ್ತು ಉದ್ಯೋಗ
ITI ತರಬೇತಿಯ ನಂತರ ಕೈಗಾರಿಕಾ ವಾತಾವರಣದಲ್ಲಿ ನೇರ ಅನುಭವ ಪಡೆಯುವುದು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿದೆ. ಅಪ್ರೆಂಟಿಸ್ಶಿಪ್ ಅಥವಾ On-the-Job Training ಮೂಲಕ ವಿದ್ಯಾರ್ಥಿಗಳು ನೈಜ ಕೆಲಸದ ಪರಿಸ್ಥಿತಿಯನ್ನು ಅನುಭವಿಸಬಹುದು. ಕೆಲಸದ ಗುಣಮಟ್ಟ, ಸಮಯಪಾಲನೆ, ತಂಡದ ಕೆಲಸ, ಸುರಕ್ಷತೆ ಮತ್ತು ಉದ್ಯೋಗದ ಜವಾಬ್ದಾರಿಗಳ ಬಗ್ಗೆ ಪ್ರಾಯೋಗಿಕ ಅರಿವು ಪಡೆಯಬಹುದು.
ಉದ್ಯೋಗಾವಕಾಶಗಳು
ITI ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಅವರ ಟ್ರೇಡ್ ಮತ್ತು ಕೌಶಲ್ಯಕ್ಕೆ ಅನುಗುಣವಾಗಿ ವಿವಿಧ ಕ್ಷೇತ್ರಗಳಲ್ಲಿ ಅವಕಾಶಗಳು ದೊರೆಯಬಹುದು.
ಉದಾಹರಣೆಗೆ:
ಉತ್ಪಾದನಾ ಕೈಗಾರಿಕೆಗಳು
ವಿದ್ಯುತ್ ಸೇವಾ ಕ್ಷೇತ್ರ
ವಾಹನ ದುರಸ್ತಿ ಕ್ಷೇತ್ರ
ನಿರ್ಮಾಣ ಕ್ಷೇತ್ರ
ಯಂತ್ರೋಪಕರಣಗಳ ನಿರ್ವಹಣೆ
ವರ್ಕ್ಶಾಪ್ಗಳು
ಸೇವಾ ಸಂಸ್ಥೆಗಳು
ಸಣ್ಣ ಕೈಗಾರಿಕೆಗಳು
ಕಂಪ್ಯೂಟರ್ ಮತ್ತು ಡಿಜಿಟಲ್ ಸೇವೆಗಳು
ಉದ್ಯೋಗಾವಕಾಶವು ವಿದ್ಯಾರ್ಥಿಯ ತರಬೇತಿ, ಅರ್ಹತೆ, ಅನುಭವ, ಕೌಶಲ್ಯ ಮತ್ತು ಸಂಬಂಧಿತ ಉದ್ಯೋಗದ ಅವಶ್ಯಕತೆಗಳ ಮೇಲೆ ಅವಲಂಭಿತವಾಗಿರುತ್ತದೆ.
ಸ್ವಯಂ ಉದ್ಯೋಗದ ಅವಕಾಶಗಳು
ITI ತರಬೇತಿ ಪಡೆದವರು ಉದ್ಯೋಗ ಹುಡುಕುವುದರ ಜೊತೆಗೆ ಸ್ವಯಂ ಉದ್ಯೋಗದತ್ತವೂ ಸಾಗಬಹುದು.
ಉದಾಹರಣೆಗೆ:
ಎಲೆಕ್ಟ್ರಿಷಿಯನ್: ವಿದ್ಯುತ್ ವೈರಿಂಗ್ ಮತ್ತು ದುರಸ್ತಿ ಸೇವೆ.
ಮೆಕ್ಯಾನಿಕ್: ವಾಹನ ದುರಸ್ತಿ ಕಾರ್ಯಾಗಾರ.
ವೆಲ್ಡರ್: ವೆಲ್ಡಿಂಗ್ ಮತ್ತು ಲೋಹದ ಕೆಲಸ.
ಪ್ಲಂಬರ್: ಪ್ಲಂಬಿಂಗ್ ಮತ್ತು ನೀರಿನ ಪೈಪ್ ಸೇವೆಗಳು.
ಕಂಪ್ಯೂಟರ್ ತರಬೇತಿ: ಕಂಪ್ಯೂಟರ್ ಆಧಾರಿತ ವಿವಿಧ ಸೇವೆಗಳು.
ಸ್ವಯಂ ಉದ್ಯೋಗವು ವ್ಯಕ್ತಿಯ ಕೌಶಲ್ಯ, ಬಂಡವಾಳ, ಸ್ಥಳೀಯ ಬೇಡಿಕೆ ಮತ್ತು ನಿರ್ವಹಣಾ ಸಾಮರ್ಥ್ಯಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಬಹುದು.
ಸಂಸ್ಥೆಯ ಶೈಕ್ಷಣಿಕ ಮಹತ್ವ
ಚನ್ನಗಿರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣದ ಅವಕಾಶ ದೊರೆಯುವುದು ಮಹತ್ವದ್ದಾಗಿದೆ.
ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳ ಯುವಜನರಿಗೆ ಕೌಶಲ್ಯಾಧಾರಿತ ಶಿಕ್ಷಣ ದೊರೆತರೆ ಅವರು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಉದ್ಯೋಗ ಅಥವಾ ಸ್ವಯಂ ಉದ್ಯೋಗದತ್ತ ಸಾಗಬಹುದು.
ಇಂತಹ ಸಂಸ್ಥೆಗಳು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಸ್ಥಳೀಯ ಸಮಾಜಕ್ಕೂ ಪ್ರಯೋಜನಕಾರಿಯಾಗಿವೆ. ನುರಿತ ಯುವಜನತೆ ಸ್ಥಳೀಯ ಆರ್ಥಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ.




