BBK 13: ಮೇಕಪ್ ಕಿರಿಕ್; ಸೌಂದರ್ಯಗೆ ಜಗ್ಗ ಕ್ಲಾಸ್                

BBK 13: Jagadish Fights Soundarya Shetty

ಕಳೆದೆರಡು ವಾರಗಳಿಂದ ಸೈಲೆಂಟ್ ಆಗಿದ್ದ ಸ್ಪರ್ಧಿ ಜಗ್ಗ ಮಮ್ಮಿ ಅಲಿಯಾಸ್ ಜಗದೀಶ್ (Jagadish) ಇದೀಗ ಸಖತ್ ಗರಂ ಆಗಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಪ್ರತಿಯೊಬ್ಬರಿಗೂ ಕೆಲಸದ ಜವಾಬ್ದಾರಿ ಹಂಚಲಾಗಿದೆ. ಆದರೆ ಮಹಿಳಾ ಸ್ಪರ್ಧಿಗಳು ಕೆಲಸ ಮಾಡದೆ ಮೇಕಪ್ ಮಾಡುತ್ತಾ ಕುಳಿತಿದ್ದರಿಂದ ಜಗ್ಗ ಕೋಪಗೊಂಡಿದ್ದಾರೆ.

ಈ ವಿಚಾರವಾಗಿ ಜಗದೀಶ್ ಹಾಗೂ ಸೌಂದರ್ಯ ಶೆಟ್ಟಿ (Soundarya Shetty) ನಡುವೆ ದೊಡ್ಡ ಜಗಳ ನಡೆದಿದೆ. ಬೆಳಗ್ಗಿನಿಂದ ಕೆಲಸಗಳು ಬಾಕಿ ಇರುವುದನ್ನು ಕಂಡು ಜಗ್ಗ ಮಹಿಳಾ ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ದೊಡ್ಮನೆಯಲ್ಲಿ ಕ್ಷಣಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಮೊದಲ ವಾರದಲ್ಲಿ ಬಿಗ್‌ಬಾಸ್ ಮನೆಯ ಬಹುತೇಕ ಕೆಲಸಗಳನ್ನು ಜಗದೀಶ್ ಒಬ್ಬರೇ ಮಾಡಿದ್ದರು. ಈ ಬಗ್ಗೆ ಕಿಚ್ಚ ಸುದೀಪ್ ಅವರು ಜಗ್ಗನಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಹೀಗಾಗಿ ಈಗ ಜಗ್ಗ ಪ್ರತಿಯೊಬ್ಬರಿಗೂ ಕೆಲಸ ಹಂಚಲು ಮುಂದಾಗಿದ್ದಾರೆ.

BBK 13: ಮೇಕಪ್ ಜಾಗಕ್ಕೆ ಬಂದು ತರಾಟೆ ತಗೆದುಕೊಂಡ ಜಗ್ಗ

ಮಹಿಳಾ ಸ್ಪರ್ಧಿಗಳೆಲ್ಲಾ ಮೇಕಪ್ ಮಾಡಿಕೊಳ್ಳುತ್ತಿದ್ದ ಜಾಗಕ್ಕೆ ಜಗ್ಗ ನೇರವಾಗಿ ತೆರಳಿದರು. “ಎಲ್ಲರೂ ಹೀಗೆ ಮೇಕಪ್ ಮಾಡಿಕೊಂಡು ಕುಳಿತರೆ ಹೇಗೆ? ಬೆಳಗ್ಗೆ ನಾನು ಪಾತ್ರೆ ತೊಳೆದಿದ್ದೀನಿ. ಇಲ್ಲಿಗೆ ಬಂದಿರೋದು ಲೇಜಿಯಾಗಿರೋಕಾ? ಅಥವಾ ಸ್ಟೈಲ್ ಮಾಡೋಕಾ?” ಎಂದು ಜಗ್ಗ ಖಾರವಾಗಿ ಪ್ರಶ್ನಿಸಿದರು.

ಸೌಂದರ್ಯ ಮತ್ತು ಜಗ್ಗ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಜಗಳ

ಜಗ್ಗ ಹೀಗೆ ಪ್ರಿಶ್ನಿಸುತ್ತಿದ್ದ ವೇಳೆ ಸೌಂದರ್ಯ ಶೆಟ್ಟಿ ಕಣ್ಣಿಗೆ ಮಸ್ಕರಾ ಹಾಕಿಕೊಳ್ಳುತ್ತಿದ್ದರು. ಆಗ ಜಗ್ಗ ಸೌಂದರ್ಯ ಅವರ ಕೈ ಹಿಡಿದು ಕರೆಯಲು ಯತ್ನಿಸಿದರು. ಇದರಿಂದ ಕೆರಳಿದ ಸೌಂದರ್ಯ ಜಗ್ಗನ ವಿರುದ್ಧ ಜೋರಾಗಿ ಮಾತಿನ ಚಕಮಕಿ ನಡೆಸಿದರು. ಇಬ್ಬರ ನಡುವಿನ ಈ ಜಗಳ ಬಿಡಿಸಲು ಕೊನೆಗೆ ಮಂಜ ಮಧ್ಯಪ್ರವೇಶಿಸಬೇಕಾಯಿತು.

ದೊಡ್ಮನೆಯಲ್ಲಿ ಜಗ್ಗನ ಹೊಸ ಅವತಾರ

ಇದುವರೆಗೆ ಶಾಂತ ಸ್ವಭಾವದಲ್ಲಿದ್ದ ಜಗ್ಗ ಇದೀಗ ಏಕಾಏಕಿ ಕೋಪಗೊಂಡಿರುವುದು ವೀಕ್ಷಕರ ಗಮನ ಸೆಳೆದಿದೆ. ಇತ್ತೀಚೆಗಷ್ಟೇ ಡೈನಿಂಗ್ ಟೇಬಲ್ ಕ್ಲೀನ್ ಮಾಡಿಲ್ಲ ಎಂಬ ವಿಚಾರಕ್ಕೆ ಗಗನ್ ಹಾಗೂ ಜಗ್ಗ ನಡುವೆಯೂ ಜಗಳ ನಡೆದಿತ್ತು. ಇದೀಗ ಮಹಿಳಾ ಸ್ಪರ್ಧಿಗಳ ಜೊತೆಗೂ ಕಿರಿಕ್ ಮಾಡಿಕೊಂಡಿರುವ ಜಗ್ಗ, ಬಿಗ್‌ಬಾಸ್ ಮನೆಯಲ್ಲಿ ಮತ್ತೆ ಹೈಲೈಟ್ ಆಗುತ್ತಿದ್ದಾರೆ.