ಬಾಲಿವುಡ್ನ ಕ್ಯೂಟ್ ಕಪಲ್ ಸಿದ್ಧಾರ್ಥ್ ಮಲ್ಹೋತ್ರಾ (Siddharth Malhotra) ಹಾಗೂ ಕಿಯಾರಾ ಅಡ್ವಾನಿ (Kiara Advani) ಮತ್ತೆ ಸುದ್ದಿಯಲ್ಲಿದ್ದಾರೆ. ಈ ದಂಪತಿ ಎರಡನೇ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರಾ ಎಂಬ ಪ್ರಶ್ನೆ ಶುರುವಾಗಿದೆ. ರಿಯಾಲಿಟಿ ಶೋ ಬಿಗ್ ಬಾಸ್ 20 (Bigg Boss 20) ವೇದಿಕೆಯಲ್ಲಿ ನಟ ಸಲ್ಮಾನ್ ಖಾನ್ ನೀಡಿದ ಹೇಳಿಕೆ ಈ ಚರ್ಚೆಗೆ ಕಾರಣವಾಗಿದೆ.
ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ತಮನ್ನಾ ಭಾಟಿಯಾ ಅಭಿನಯದ “ದಿ ಒನ್: ಫೋರ್ಸ್ ಆಫ್ ಫಾರೆಸ್ಟ್” ಸಿನಿಮಾ ಶೀಘ್ರವೇ ಬಿಡುಗಡೆಯಾಗಲಿದೆ. ಈ ಚಿತ್ರದ ಪ್ರಚಾರಕ್ಕಾಗಿ ಇಬ್ಬರೂ ಬಿಗ್ ಬಾಸ್ 20 ರಿಯಾಲಿಟಿ ಶೋಗೆ ಬಂದಿದ್ದರು. ಕಾರ್ಯಕ್ರಮದ ‘ವೀಕೆಂಡ್ ಕಾ ವಾರ್’ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಜೊತೆ ಮಾತನಾಡಿದರು.
ಸಂವಾದದ ಸಮಯದಲ್ಲಿ ಸಲ್ಮಾನ್ ಖಾನ್ (Salman Khan) ಸಿದ್ಧಾರ್ಥ್ ಅವರ ವೈಯಕ್ತಿಕ ಜೀವನದ ಬಗ್ಗೆ ತಮಾಷೆಯಾಗಿ ಮಾತನಾಡಿದರು. ಈ ವೇಳೆ ಸಲ್ಮಾನ್ ಖಾನ್ ಆಡಿದ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗುತ್ತಿವೆ. ಕಿಯಾರಾ ಶೀಘ್ರದಲ್ಲೇ ಗುಡ್ ನ್ಯೂಸ್ ಕೊಡ್ತಾರಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ರಹಸ್ಯ ಬಹಿರಂಗಪಡಿಸಿದ ಸಲ್ಮಾನ್ ಖಾನ್
ಸಲ್ಮಾನ್ ಖಾನ್ ಅವರು ಸಿದ್ಧಾರ್ಥ್ ಬಳಿ ಮದುವೆ ಹಾಗೂ ಪ್ರೇಮ ಜೀವನದ ಬಗ್ಗೆ ಕೇಳಿದರು. ನೀವು ನಿಮ್ಮ ಸಂಬಂಧವನ್ನು ಅಷ್ಟೊಂದು ದಿನ ರಹಸ್ಯವಾಗಿಟ್ಟಿದ್ದೇಕೆ ಎಂದು ಪ್ರಶ್ನಿಸಿದರು. ಇದಕ್ಕೆ ಸಿದ್ಧಾರ್ಥ್ ಸೂಕ್ತ ಸಮಯ ಬಂದಾಗ ಬಹಿರಂಗಪಡಿಸಿದೆವು ಎಂದು ಉತ್ತರಿಸಿದರು.
ಇದನ್ನು ಓದಿ: TOXIC MOVIE: ‘ಟಾಕ್ಸಿಕ್’ ರಹಸ್ಯ ಬಿಚ್ಚಿಟ್ಟ ನಟಿ ಕಿಯಾರಾ ಅಡ್ವಾಣಿ
ಇದಕ್ಕೆ ಸಲ್ಮಾನ್ ಖಾನ್ ಆ ರಹಸ್ಯ ಈಗ ಮಗುವಿನ ರೂಪದಲ್ಲಿದೆ ಎಂದರು. ಸಿದ್ಧಾರ್ಥ್ ಮತ್ತು ಕಿಯಾರಾ ಜುಲೈ 2025 ರಲ್ಲಿ ತಮ್ಮ ಮಗಳನ್ನು ಸ್ವಾಗತಿಸಿದ್ದರು. ಮಗಳಿಗೆ ‘ಸರಯಾ ಮಲ್ಹೋತ್ರಾ’ ಎಂದು ಹೆಸರಿಟ್ಟಿರುವುದಾಗಿ ನಂತರ ತಿಳಿಸಿದ್ದರು.
ತಂದೆಯಾದ ಖುಷಿ ಹಂಚಿಕೊಂಡ ಸಿದ್ಧಾರ್ಥ್
ವೇದಿಕೆಯಲ್ಲಿ ತಂದೆಯಾದ ಅನುಭವವನ್ನು ಸಿದ್ಧಾರ್ಥ್ ಹಂಚಿಕೊಂಡರು. ತಂದೆಯಾಗುವುದು ಜಗತ್ತಿನ ಅತ್ಯುತ್ತಮ ಪಾತ್ರ ಎಂದು ಸಂತೋಷ ವ್ಯಕ್ತಪಡಿಸಿದರು. ಮಗಳಿಗೆ ಈಗ 15 ತಿಂಗಳು ತುಂಬಿದ್ದು, ಹೊಸ ಪದಗಳನ್ನು ಕಲಿಯುತ್ತಿದ್ದಾಳೆ ಎಂದರು.
ಈ ವೇಳೆ ಸಲ್ಮಾನ್ ಖಾನ್ ಶೀಘ್ರದಲ್ಲೇ 2ನೇ ಬಾರಿಗೆ ಪೋಷಕರಾಗುತ್ತೀರಿ ಎಂದು ಆಶಿಸುವುದಾಗಿ ತಮಾಷೆ ಮಾಡಿದರು. ಈ ಮಾತುಗಳನ್ನು ಕೇಳಿದ ನೆಟ್ಟಿಗರು ಕಿಯಾರಾ 2ನೇ ಮಗುವಿನ (Kiara Advani Second Baby) ನಿರೀಕ್ಷೆಯಲ್ಲಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಸುಳಿವೇ ಅಥವಾ ಕೇವಲ ತಮಾಷೆಯೇ?
ಸಾಮಾಜಿಕ ಜಾಲತಾಣಗಳಲ್ಲಿ ಸಲ್ಮಾನ್ ಖಾನ್ ಅವರ ಮಾತುಗಳನ್ನು ಸುಳಿವು ಎಂದು ಭಾವಿಸಲಾಗುತ್ತಿದೆ. ಕಿಯಾರಾ ಮತ್ತು ಸಿದ್ಧಾರ್ಥ್ ಶೀಘ್ರದಲ್ಲೇ ಮತ್ತೊಂದು ಮಗುವನ್ನು ಪಡೆಯಲಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಆದರೆ ಈ ಬಗ್ಗೆ ದಂಪತಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಬಿಗ್ ಬಾಸ್ ವೇದಿಕೆಯಲ್ಲಿ ನಡೆದ ಈ ಸಂಭಾಷಣೆ ಕೇವಲ ತಮಾಷೆಗೆ ಸೀಮಿತವಾಗಿತ್ತು. ಹೀಗಾಗಿ ಇದು ಕೇವಲ ಗಾಳಿ ಸುದ್ದಿ ಎನ್ನಲಾಗುತ್ತಿದೆ.




