ISRO Recruitment 2026: 22 ಹುದ್ದೆಗಳಿಗೆ ಅರ್ಜಿ ಆಹ್ವಾನ

ISRO Recruitment 2026: Apply Online for Technical Assistant and Technician Posts

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ISRO Recruitment 2026) ಉದ್ಯೋಗ ಗಿಟ್ಟಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ ಲಭಿಸಿದೆ. ಮಹೇಂದ್ರಗಿರಿಯಲ್ಲಿರುವ ‘ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್’ (IPRC) ಘಟಕವು ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 22 ಹುದ್ದೆಗಳ ಭರ್ತಿಗೆ ಚಾಲನೆ ನೀಡಿದೆ.

ಟೆಕ್ನಿಕಲ್ ಅಸಿಸ್ಟೆಂಟ್, ಟೆಕ್ನಿಷಿಯನ್ ‘ಬಿ’, ಕುಕ್ ‘ಎ’ ಹಾಗೂ ಫೈರ್‌ಮ್ಯಾನ್ ‘ಎ’ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಸೆಪ್ಟೆಂಬರ್ 15 ರಿಂದ ಆರಂಭವಾಗಿದ್ದು, ಅಕ್ಟೋಬರ್ 5, 2026 ರ ಸಂಜೆ 4 ಗಂಟೆಯವರೆಗೆ ಆನ್‌ಲೈನ್‌ನಲ್ಲಿ ಅವಕಾಶ ಇರಲಿದೆ.

ISRO Recruitment 2026: ವಿದ್ಯಾರ್ಹತೆ, ವಯೋಮಿತಿ ಮತ್ತು ವೇತನದ ವಿವರ

  • ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ ಸಂಬಂಧಿಸಿದ ವಿಭಾಗದಲ್ಲಿ ಪ್ರಥಮ ದರ್ಜೆ ಡಿಪ್ಲೊಮಾ ಉತ್ತೀರ್ಣರಾಗಿರಬೇಕು. ಈ ಹುದ್ದೆಗೆ ₹44,900 ರಿಂದ ₹1,42,400 ವರೆಗೆ ಮಾಸಿಕ ವೇತನ ಸಿಗಲಿದೆ.
  • ಟೆಕ್ನಿಷಿಯನ್ ‘ಬಿ’ ಹುದ್ದೆಗೆ 10ನೇ ತರಗತಿ ಜೊತೆಗೆ ಸಂಬಂಧಿತ ಐಟಿಐ (ITI) ಟ್ರೇಡ್ ಸರ್ಟಿಫಿಕೇಟ್ ಅಗತ್ಯವಿದೆ. ಈ ಹುದ್ದೆಗಳಿಗೆ ₹21,700 ರಿಂದ ₹69,100 ವರೆಗೆ ವೇತನ ನಿಗದಿಯಾಗಿದೆ.
  • ಕುಕ್ ‘ಎ’ ಹುದ್ದೆಗೆ 10ನೇ ತರಗತಿ ಜೊತೆಗೆ 5 ವರ್ಷಗಳ ಅಡುಗೆ ಅನುಭವ ಬೇಕು. ಫೈರ್‌ಮ್ಯಾನ್ ಹುದ್ದೆಗೆ SSLC ಪಾಸಾಗಿ ದೈಹಿಕ ಸಾಮರ್ಥ್ಯ ಹೊಂದಿರಬೇಕು. ಇವೆರಡಕ್ಕೂ ₹19,900 ರಿಂದ ₹63,200 ವರೆಗೆ ಸಂಬಳ ಲಭಿಸಲಿದೆ.

ಅರ್ಜಿದಾರರ ವಯೋಮಿತಿಯನ್ನು ಅಕ್ಟೋಬರ್ 5, 2026ಕ್ಕೆ ಲೆಕ್ಕ ಹಾಕಲಾಗುತ್ತದೆ. ಫೈರ್‌ಮ್ಯಾನ್‌ಗೆ 18 ರಿಂದ 25 ವರ್ಷ ಹಾಗೂ ಉಳಿದ ಹುದ್ದೆಗಳಿಗೆ 18 ರಿಂದ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನ

ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ ಸ್ಕಿಲ್ ಟೆಸ್ಟ್ ನಡೆಸಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಲಿಖಿತ ಪರೀಕ್ಷೆಯನ್ನು OMR ಮಾದರಿಯಲ್ಲಿ ತಮಿಳುನಾಡಿನ ತಿರುನೆಲ್ವೇಲಿ ಅಥವಾ ಚೆನ್ನೈ ನಗರಗಳಲ್ಲಿ ನಡೆಸಲಾಗುತ್ತದೆ. ಪರೀಕ್ಷೆಯ ಆಧಾರದಲ್ಲೇ ಅಂತಿಮ ಮೆರಿಟ್ ಪಟ್ಟಿ ತಯಾರಾಗಲಿದೆ.

ಅರ್ಜಿ ಶುಲ್ಕವಾಗಿ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ ₹750 ಹಾಗೂ ಉಳಿದ ಹುದ್ದೆಗಳಿಗೆ ₹500 ನಿಗದಿಪಡಿಸಲಾಗಿದೆ. ನಿಯಮಗಳ ಪ್ರಕಾರ ಪರೀಕ್ಷೆಗೆ ಹಾಜರಾದ ನಂತರ ಶುಲ್ಕ ಮರುಪಾವತಿಯಾಗಲಿದೆ. ಆಸಕ್ತ ಅಭ್ಯರ್ಥಿಗಳು ಇಸ್ರೋದ ಅಧಿಕೃತ ವೆಬ್‌ಸೈಟ್ www.iprc.gov.in ನ ‘Careers’ ವಿಭಾಗಕ್ಕೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.