Photo Credits: @colorskannadaofficial (Instagram)
ಖ್ಯಾತ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್ ರಾವ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಯಿಂದ ಅರ್ಧಕ್ಕೇ ಹೊರಬಂದಿದ್ದಾರೆ. ದೊಡ್ಮನೆಯಲ್ಲಿ ತಮ್ಮದೇ ಶೈಲಿಯ ಹಾಸ್ಯ ಮತ್ತು ನೇರ ಮಾತುಗಳಿಂದ ವೀಕ್ಷಕರನ್ನು ರಂಜಿಸುತ್ತಿದ್ದ ಅವರ ಪಯಣ ಈಗ ಅಂತ್ಯಗೊಂಡಿದೆ. ಕಲರ್ಸ್ ಕನ್ನಡ ವಾಹಿನಿಯು ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ‘DISCONTINUED’ ಎಂದು ಪೋಸ್ಟರ್ ಶೇರ್ ಮಾಡಿ ಈ ವಿಷಯವನ್ನು ಖಚಿತಪಡಿಸಿದೆ.
ಎರಡನೇ ಬಾರಿಗೂ ರಿಪೀಟ್ ಆಯ್ತು ಇತಿಹಾಸ: ಕಾಡಿದ ಹಳೆಯ ಕಾಲು ನೋವು
ಓಂ ಪ್ರಕಾಶ್ ರಾವ್ ಅವರಿಗೆ ಬಿಗ್ ಬಾಸ್ ಜರ್ನಿ ಅರ್ಧಕ್ಕೆ ನಿಂತಿರುವುದು ಇದು ಮೊದಲೇನಲ್ಲ. ಸೀಸನ್ 4ರಲ್ಲೂ ಅವರು ಇದೇ ರೀತಿಯ ಸವಾಲನ್ನು ಎದುರಿಸಿದ್ದರು.
ಆಗಲೂ ಕಾಲಿನ ತೊಂದರೆ ಮತ್ತು ಅನಾರೋಗ್ಯದ ಕಾರಣದಿಂದಾಗಿಯೇ ಅವರು ಶೋನಿಂದ ಹೊರಬರಬೇಕಾಯಿತು. ಇದೀಗ ಸೀಸನ್ 13ರಲ್ಲೂ ಅದೇ ಹಳೆಯ ಕಾಲು ನೋವಿನ ಸಮಸ್ಯೆ ರಿಪೀಟ್ ಆಗಿದೆ.
ಮೊದಲ ವಾರ ಪ್ರಥಮ್ ಪ್ರಸಾದ್ ಎಲಿಮಿನೇಟ್ ಆಗಿದ್ದರು. ಆದರೆ ಎರಡನೇ ವಾರದ ಆರಂಭದಲ್ಲೇ ಓಂ ಪ್ರಕಾಶ್ ರಾವ್ ಅವರ ಕಾಲಿನ ನೋವು ತೀವ್ರವಾಯಿತು.
ತಕ್ಷಣವೇ ಅವರನ್ನು ಬಿಡದಿ ಹತ್ತಿರದ ಆರಾಧ್ಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ನೋವು ಹೆಚ್ಚಾದ ಕಾರಣ ಅವರು ಸ್ವತಃ ಶೋ ಬಿಡುವ ನಿರ್ಧಾರ ಮಾಡಿದರು.
ಸೀಸನ್ 4ರಲ್ಲಿ 6 ವಾರಗಳ ಜರ್ನಿ: ಈ ಬಾರಿ ಮೊದಲ ವಾರವೇ ಎಕ್ಸಿಟ್
ಬಿಗ್ ಬಾಸ್ ಸೀಸನ್ 4ರಲ್ಲಿ ಓಂ ಪ್ರಕಾಶ್ ರಾವ್ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದರು. ಪ್ರಥಮ್, ಕೀರ್ತಿ ಶಂಕರಘಟ್ಟ ಹಾಗೂ ಮಾಳವಿಕಾ ಅವಿನಾಶ್ ಅವರಿದ್ದ ಆ ಸೀಸನ್‌ನಲ್ಲಿ ಸುಮಾರು 6 ವಾರಗಳ ಕಾಲ ಮನೆಯಲ್ಲಿದ್ದರು.
ಮೂರು ಬಾರಿ ನಾಮಿನೇಟ್ ಆಗಿದ್ದರೂ ಭರ್ಜರಿ ಮನರಂಜನೆ ನೀಡಿದ್ದರು. ಆದರೆ ಆಗಲೂ ಕಾಲಿನ ನೋವಿನಿಂದಾಗಿ ಆಟ ಮುಂದುವರಿಸಲು ಸಾಧ್ಯವಾಗದೆ ನಿರ್ಗಮಿಸಿದ್ದರು.
ಆದರೆ ಈ ಬಾರಿ ಸೀಸನ್ 13ರಲ್ಲಿ ಅವರು ಕೇವಲ ಒಂದೇ ವಾರ ಮಾತ್ರ ಮನೆಯಲ್ಲಿ ಇರಲು ಸಾಧ್ಯವಾಗಿದೆ. ಮೊದಲ ವಾರದಲ್ಲೇ ಕಾಲು ನೋವು ತೀವ್ರಗೊಂಡು ಅನಾರೋಗ್ಯ ಕಾಡಿದ್ದರಿಂದ ಬಿಗ್ ಬಾಸ್ ಆಟಕ್ಕೆ ಗುಡ್‌ಬೈ ಹೇಳಿದ್ದಾರೆ.




