ದೊಡ್ಮನೆಯ ಅಡುಗೆಮನೆಯಲ್ಲಿ ರಾದ್ಧಾಂತ; ಕಾವ್ಯಾಗೆ ಖಡಕ್ ಎಚ್ಚರಿಕೆ ನೀಡಿದ ಗಗನ್

ಡಸ್ಟ್‌ಬಿನ್ ಸ್ವಚ್ಛಗೊಳಿಸುವ ವಿಚಾರವಾಗಿ ಮಾತಿಗೆ ಮಾತು ಬೆಳೆದು ಕಾವ್ಯಾ ಗೌಡ ಹಾಗೂ ಗಗನ್ ಚಿನ್ನಪ್ಪ ನಡುವೆ ತೀವ್ರ ಮಾತಿನ ಚಕಮಕಿ ಏರ್ಪಟ್ಟಿದೆ.
ಕಸ ಸ್ವಚ್ಛಗೊಳಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕಾವ್ಯಾ ಧೋರಣೆಗೆ ಗಗನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ‘ಈ ವರಸೆಗಳೆಲ್ಲಾ ನನ್ನತ್ರ ನಡೆಯಲ್ಲ’ ಎಂದು ನೇರವಾಗಿಯೇ ಖಡಕ್ ಎಚ್ಚರಿಕೆ ನೀಡಿದ್ದಾರೆ.