GOVERNMENT JOB NEWS:15,000 ಶಿಕ್ಷಕರ ಹುದ್ದೆಗಳ ಬೃಹತ್ ನೇಮಕಾತಿ; ಆಗಸ್ಟ್ 18 ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ…

15,000 ಶಿಕ್ಷಕರ ಹುದ್ದೆಗಳ ಬೃಹತ್ ನೇಮಕಾತಿ 2026...

Photo Credits: @kannada_kosh (Instagram)

ಸಂಕ್ಷಿಪ್ತ ವಿವರಣೆ: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು 15,000 ಶಿಕ್ಷಕರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಜಿಪಿಟಿ, ಪ್ರೌಢಶಾಲೆ ಸೇರಿದಂತೆ ಹಲವು ಹುದ್ದೆಗಳಿಗೆ ಆಗಸ್ಟ್ 18 ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಸಂಪೂರ್ಣ ವಿವರ ಇಲ್ಲಿದೆ.

ಸರ್ಕಾರಿ ಶಾಲಾ ಶಿಕ್ಷಕರಾಗಲು ಬಯಸುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸಿಹಿ ಸುದ್ದಿ. ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಗಳಲ್ಲಿ ಖಾಲಿ ಇರುವ 15,000 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆಗಸ್ಟ್ 18, 2026 ರಿಂದ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸೆಪ್ಟೆಂಬರ್ 7, 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ನೇಮಕಾತಿಯ ಪ್ರಮುಖ ಮುಖ್ಯಾಂಶಗಳು…

  • ನೇಮಕಾತಿ ಸಂಸ್ಥೆ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ (schooleducation.karnataka.gov.in)
  • ಒಟ್ಟು ಹುದ್ದೆಗಳು: 15,000
  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 18 ಆಗಸ್ಟ್ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07 ಸೆಪ್ಟೆಂಬರ್ 2026
  • ಉದ್ಯೋಗ ಸ್ಥಳ: ಕರ್ನಾಟಕ (ಇತರ ಜಿಲ್ಲೆಗಳು & ಕಲ್ಯಾಣ ಕರ್ನಾಟಕ)

Photo Credits: @kannada_kosh (Instagram)

ಹುದ್ದೆಗಳ ವರ್ಗೀಕರಣ…

ಹುದ್ದೆಯ ಹೆಸರು    ಇತರ ಜಿಲ್ಲೆಗಳು    ಕಲ್ಯಾಣ ಕರ್ನಾಟಕ    ಒಟ್ಟು ಹುದ್ದೆಗಳು

ಜಿಪಿಟಿ (GPT)                    5,2723                        2288                                 500

ಪ್ರೌಢಶಾಲೆ                      2,286                        2214                                500

ಪಿಇಟಿ (PET)                          100                          800                               900

ಕಂಪ್ಯೂಟರ್ ಸೈನ್ಸ್          200                          300                               500

ಪಿಎಜಿ ಗ್ರೇಡ್-1                     125                          325                                450

ಪಿಎಜಿ ಗ್ರೇಡ್-2                       50                          100                               150

ಒಟ್ಟು                                  8,033                       6,967                         15,000

ಬೋಧನಾ ವಿಷಯಗಳು…

ಈ ನೇಮಕಾತಿಯಲ್ಲಿ ಈ ಕೆಳಗಿನ ವಿಷಯಗಳ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ:

  • ಕನ್ನಡ
  • ಇಂಗ್ಲಿಷ್
  • ಕಲಾ ಶಿಕ್ಷಣ
  • ಜೀವ ವಿಜ್ಞಾನ
  • ಗಣಕ ವಿಜ್ಞಾನ
  • ದೈಹಿಕ ಶಿಕ್ಷಣ

ವಯೋಮಿತಿ ಮತ್ತು ಸಡಿಲಿಕೆ…

  • ಸಾಮಾನ್ಯ ವರ್ಗ: ಗರಿಷ್ಠ 40 ವರ್ಷಗಳು
  • OBC (2A, 2B, 3A, 3B): ಗರಿಷ್ಠ 43 ವರ್ಷಗಳು
  • SC / ST / ಪ್ರವರ್ಗ-1 / ಅಂಗವಿಕಲರು (PwD): ಗರಿಷ್ಠ 45 ವರ್ಷಗಳು

ಅರ್ಜಿ ಶುಲ್ಕದ ವಿವರ…

  • ಸಾಮಾನ್ಯ / ಹಿಂದುಳಿದ ವರ್ಗ: ₹1,125 (ಹೆಚ್ಚುವರಿ ವೃಂದದ ಪ್ರತಿಯೊಂದು ಹುದ್ದೆಗೆ ₹375)
  • ಪ.ಜಾ / ಪ.ಪಂ / ಅಂಗವಿಕಲರು (SC/ST/PwD): ₹750 (ಹೆಚ್ಚುವರಿ ವೃಂದದ ಪ್ರತಿಯೊಂದು ಹುದ್ದೆಗೆ ₹250)