YASH-NAYANTHARA: ಒಂದೇ ವಾರದಲ್ಲಿ ನಯನತಾರಾ 2 ಸಿನಿಮಾಗಳು ಬಿಡುಗಡೆ: ‘ಟಾಕ್ಸಿಕ್’ ಜೊತೆ ಮುಖಾಮುಖಿಯಾಗಲಿದೆಯಾ ‘ಹಾಯ್’?

‘ಟಾಕ್ಸಿಕ್’ ಜೊತೆ ಮುಖಾಮುಖಿಯಾಗಲಿದೆಯಾ ‘ಹಾಯ್’?...

Photo Credits: @southtimes (Instagram)

ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಅಭಿಮಾನಿಗಳಿಗೆ ಮುಂಬರುವ ಆಗಸ್ಟ್ ತಿಂಗಳಲ್ಲಿ ಭಾರಿ ದೊಡ್ಡ ಹಬ್ಬ ಕಾದಿದೆ. ಚಿತ್ರರಂಗದಲ್ಲೇ ಅಪರೂಪ ಎನ್ನಲಾಗುವಂತೆ ಒಂದೇ ವಾರದಲ್ಲಿ ಅವರ ಅಭಿನಯದ ಎರಡು ವಿಭಿನ್ನ ಶೈಲಿಯ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಬಾಕ್ಸ್ ಆಫೀಸ್ ಅಖಾಡದಲ್ಲಿ ತಮ್ಮದೇ ಚಿತ್ರಗಳ ನಡುವೆ ಈ ರೀತಿ ಪೈಪೋಟಿ ಏರ್ಪಡುತ್ತಿರುವುದು ಸಿನಿರಸಿಕರಲ್ಲಿ ತೀವ್ರ ಕುತೂಹಲ ಹೆಚ್ಚಿಸಿದೆ.

ಬಿಗ್ ಬಜೆಟ್ ‘ಟಾಕ್ಸಿಕ್’…

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಬೃಹತ್ ಆಕ್ಷನ್ ಕಥಾಹಂದರದ ಚಿತ್ರದಲ್ಲಿ ನಯನತಾರಾ ‘ಗಂಗಾ’ ಎಂಬ ಶಕ್ತಿಶಾಲಿ ಪಾತ್ರದಲ್ಲಿ ನಟಿಸಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಹಾಗೂ ರುಕ್ಮಿಣಿ ವಸಂತ್ ಕೂಡ ಅಭಿನಯಿಸಿದ್ದಾರೆ. ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ ಅವರಂತಹ ದೈತ್ಯ ತಾರಾಗಣ ಈ ಚಿತ್ರದ ಇನ್ನೊಂದು ದೊಡ್ಡ ಪ್ಲಸ್ ಪಾಯಿಂಟ್. ಪ್ಯಾನ್-ವರ್ಲ್ಡ್ ಮಟ್ಟದಲ್ಲಿ ತೆರೆಕಾಣುತ್ತಿರುವ ಈ ಸಿನಿಮಾ ಈಗಾಗಲೇ ಜಾಗತಿಕ ಮಟ್ಟದಲ್ಲಿ ಭಾರಿ ಹೈಪ್ ಸೃಷ್ಟಿಸಿದೆ. ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ಶೋಗಳನ್ನು ಈ ಚಿತ್ರಕ್ಕೆ ಪ್ಲಾನ್ ಮಾಡಲಾಗಿದೆ.

ಪ್ರೇಮಕಥೆಯ ‘ಹಾಯ್’…

‘ಟಾಕ್ಸಿಕ್’ ರಿಲೀಸ್ ಆದ ಎ ಎರಡೇ ದಿನಗಳಲ್ಲಿ ಅಂದರೆ ಆಗಸ್ಟ್ 28 ರಂದು ನಯನತಾರಾ ನಟನೆಯ ‘ಹಾಯ್’ ಸಿನಿಮಾ ತೆರೆಗೆ ಬರಲಿದೆ. ಯುವ ನಟ ಕವಿನ್ ಹಾಗೂ ನಯನತಾರಾ ಜೋಡಿಯಾಗಿ ನಟಿಸಿರುವ ಈ ಚಿತ್ರವನ್ನು ನವ ನಿರ್ದೇಶಕ ವಿಷ್ಣು ಎಡವನ್ ನಿರ್ದೇಶಿಸಿದ್ದಾರೆ. ಇದೊಂದು ಸರಳ ಹಾಗೂ ಮಧುರವಾದ ಪ್ರೇಮಕಥೆಯನ್ನು ಹೊಂದಿದ್ದು, ನಯನತಾರಾ ಪೂರ್ಣ ಪ್ರಮಾಣದ ನಾಯಕಿಯಾಗಿ ಮಿಂಚಿದ್ದಾರೆ. ‘ಟಾಕ್ಸಿಕ್’ ನಂತಹ ದೈತ್ಯ ಮಾಸ್ ಸಿನಿಮಾದ ಜೊತೆಗೇ ಈ ಕ್ಲಾಸ್ ಚಿತ್ರ ಬಿಡುಗಡೆಯಾಗುತ್ತಿರುವುದು ಭಾರಿ ಸಾಹಸವೇ ಸರಿ. ಆದರೆ ಉತ್ತಮ ಕಂಟೆಂಟ್ ಇದ್ದರೆ ಕುಟುಂಬ ಸಮೇತ ಬರುವ ಪ್ರೇಕ್ಷಕರು ಈ ಚಿತ್ರವನ್ನು ಖಂಡಿತ ಕೈಹಿಡಿಯಲಿದ್ದಾರೆ. ಎರಡೂ ಚಿತ್ರಗಳ ಶೈಲಿ ಸಂಪೂರ್ಣ ಭಿನ್ನವಾಗಿರುವುದರಿಂದ ಚಿತ್ರಪ್ರೇಮಿಗಳಿಗೆ ಒಳ್ಳೆಯ ರಸದೌತಣ ಸಿಗುವುದು ಖಚಿತ.

ಬಾಕ್ಸ್ ಆಫೀಸ್ ಸವಾಲು…

ಒಂದೇ ವಾರದಲ್ಲಿ ಲೇಡಿ ಸೂಪರ್‌ಸ್ಟಾರ್ ಅಭಿನಯದ ಎರಡು ಚಿತ್ರಗಳು ಬರುತಿರುವುದು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಯಲ್ಲಿದೆ. ಒಂದೆಡೆ ಆಕ್ಷನ್ ಭರಿತ ‘ಟಾಕ್ಸಿಕ್’ ಇದ್ದರೆ, ಇನ್ನೊಂದೆಡೆ ಭಾವನಾತ್ಮಕ ಪ್ರೇಮಕಥೆಯುಳ್ಳ ‘ಹಾಯ್’ ಸಿನಿಮಾ ಕಣದಲ್ಲಿದೆ. ತಮ್ಮದೇ ಸಿನಿಮಾಗಳ ನಡುವಿನ ಈ ಮುಖಾಮುಖಿಯಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಹೇಗಿರಲಿದೆ ಎಂಬ ಕುತೂಹಲ ಎದ್ದಿದೆ. ಎರಡೂ ವಿಭಿನ್ನ ಪಾತ್ರಗಳ ಮೂಲಕ ನಯನತಾರಾ ತಮ್ಮ ನಟನಾ ವೈವಿಧ್ಯತೆಯನ್ನು ಪ್ರದರ್ಶಿಸಲು ಮುಂದಾಗಿದ್ದಾರೆ. ಆಗಸ್ಟ್ ಕೊನೆಯ ವಾರದಲ್ಲಿ ನಯನತಾರಾ ಅವರ ಈ ರಿಸ್ಕಿ ನಿರ್ಧಾರಕ್ಕೆ ಪ್ರೇಕ್ಷಕರು ಹೇಗೆ ಸ್ಪಂದಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಒಟ್ಟಿನಲ್ಲಿ ಈ ಎರಡು ಸಿನಿಮಾಗಳ ಆಗಮನದಿಂದ ಥಿಯೇಟರ್‌ಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ.