☔ Weather
Bengaluru: ☀️ 24°C | AQI 112
Mysore: ☀️ 22°C | AQI 135
Mangalore: ☀️ 27°C | AQI 180
Bengaluru: ☀️ 24°C | AQI 112
☔ Weather
Bengaluru: ☀️ 24°C | AQI 112
Mysore: ☀️ 22°C | AQI 135
Mangalore: ☀️ 27°C | AQI 180
Bengaluru: ☀️ 24°C | AQI 112

BBK 13: ಜಗಳಗಳ ನಡುವೆ ದೊಡ್ಮನೆಯಲ್ಲಿ ಹಬ್ಬದ ವಾತಾವರಣ; ಹಸಿದಿದ್ದ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಪ್ರೀತಿಯ ಉಡುಗೊರೆ

BBK 13: Kichcha Sudeep Sends Special Biryani Feast For Contestants
'ಬಿಗ್ಬಾಸ್ ಕನ್ನಡ ಸೀಸನ್ 13' ಮನೆಯಲ್ಲಿ ಹಸಿವಿನಿಂದ ಕಂಗೆಟ್ಟಿದ್ದ ಸ್ಪರ್ಧಿಗಳಿಗೆ ನಿರೂಪಕ ಕಿಚ್ಚ ಸುದೀಪ್ ಅವರು ಬಿರಿಯಾನಿ ಸೇರಿದಂತೆ ವಿಶೇಷ ಭೋಜನ ಕಳುಹಿಸಿ ಸರ್ಪ್ರೈಸ್ ನೀಡಿದ್ದಾರೆ.

‘ಬಿಗ್‌ಬಾಸ್ ಕನ್ನಡ ಸೀಸನ್ 13’ (BBK 13) ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ನಡುವಿನ ಜಗಳ, ಟಾಸ್ಕ್ ಮತ್ತು ಮನಸ್ತಾಪಗಳಷ್ಟೇ ಅಲ್ಲದೆ, ನಿರೂಪಕ ಕಿಚ್ಚ ಸುದೀಪ್ ಅವರ ವಿಶೇಷ ಕಾಳಜಿಯೂ ಪ್ರೇಕ್ಷಕರ ಗಮನ ಸೆಳೆಯುತ್ತದೆ. ಪ್ರತಿ ವರ್ಷವೂ ಮನೆಯ ಸದಸ್ಯರಿಗಾಗಿ ವಿಶೇಷ ಅಡುಗೆ ಕಳುಹಿಸುವ ಮೂಲಕ ಸುದೀಪ್ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

ಇದೀಗ ‘ಬಿಗ್‌ಬಾಸ್ ಕನ್ನಡ ಸೀಸನ್ 13’ ರಲ್ಲಿಯೂ ಈ ಸುಂದರ ಸಂಪ್ರದಾಯ ಮುಂದುವರಿದಿದೆ. ಮನೆಯೊಳಗೆ ಹಸಿವಿನಿಂದ ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಕಡೆಯಿಂದ ವಿಶೇಷ ಭೋಜನವನ್ನು ಕಳುಹಿಸಿಕೊಡಲಾಗಿದೆ.

ಬಿರಿಯಾನಿ ಸೇರಿದಂತೆ ಬಗೆಬಗೆಯ ರುಚಿಕರ ಅಡುಗೆಗಳು ದೊಡ್ಮನೆಗೆ ತಲುಪಿದ್ದು, ಮನೆಯ ಸದಸ್ಯರಿಗೆ ಇದು ದೊಡ್ಡ ಸರ್ಪ್ರೈಸ್ ನೀಡಿದೆ.

ಕಿಚ್ಚನ ಪ್ರೀತಿಯ ಅಡುಗೆ ಕಂಡು ಕುಣಿದಾಡಿದ ಸ್ಪರ್ಧಿಗಳು

ಬಿಗ್‌ಬಾಸ್ ಕನ್ನಡ 13ನೇ ಸೀಸನ್‌ನಲ್ಲಿ ಸ್ಪರ್ಧಿಗಳು ದಿನದಿಂದ ದಿನಕ್ಕೆ ಕಠಿಣ ಸವಾಲುಗಳನ್ನು ಎದುರಿಸುತ್ತಿದ್ದಾರೆ. ವಿಭಿನ್ನ ಟಾಸ್ಕ್‌ಗಳು ಹಾಗೂ ಮನೆಯ ಜವಾಬ್ದಾರಿಗಳ ನಡುವೆ ಕೆಲವೊಮ್ಮೆ ಊಟದ ವಿಚಾರಕ್ಕೂ ದೊಡ್ಡ ಚರ್ಚೆ ನಡೆಯುತ್ತದೆ.

ಇಂತಹ ಸಂದರ್ಭದಲ್ಲಿ ಹಸಿವಿನಿಂದ ಬಳಲುತ್ತಿದ್ದ ಸ್ಪರ್ಧಿಗಳಿಗೆ ಸುದೀಪ್ ಕಡೆಯಿಂದ ವಿಶೇಷ ಊಟ ಬಂದಿದೆ. ದೊಡ್ಮನೆಯೊಳಗೆ ಹೊರಗಿನ ಆಹಾರ ಸಿಗುವುದು ಸ್ಪರ್ಧಿಗಳಿಗೆ ಅತ್ಯಂತ ಅಪರೂಪದ ಅನುಭವವಾಗಿದೆ.

ಇದನ್ನು ಓದಿ: BBK 13: ಮಿತಿಮೀರಿದ ಗಾನವಿ-ಸೌಂದರ್ಯಾ ಮಾತಿನ ಯುದ್ಧ; ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಕ್ಲಾಸ್ ಗ್ಯಾರಂಟಿ

ಬಿರಿಯಾನಿ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ಕಂಡ ಸ್ಪರ್ಧಿಗಳ ಸಂತಸಕ್ಕೆ ಪಾರವೇ ಇರಲಿಲ್ಲ. ಎಲ್ಲರೂ ಒಟ್ಟಿಗೆ ಕುಳಿತು ಕಿಚ್ಚ ಕಳುಹಿಸಿದ ಪ್ರೀತಿಯ ಊಟವನ್ನು ಸಖತ್ ಖುಷಿಯಿಂದ ಸವಿದಿದ್ದಾರೆ.

BBK 13: ಇಂದಿನ ಸಂಚಿಕೆಯಲ್ಲಿ ಬಯಲಾಗಲಿದೆ ವಿಶೇಷ ಅಡುಗೆಯ ಗುಟ್ಟು

ಇತರ ಭಾಷೆಗಳ ಬಿಗ್‌ಬಾಸ್ ಶೋಗಳಿಗೆ ಹೋಲಿಸಿದರೆ ಕನ್ನಡದಲ್ಲಿ ನಿರೂಪಕರು ಸ್ಪರ್ಧಿಗಳೊಂದಿಗೆ ಹೊಂದಿರುವ ಆತ್ಮೀಯ ಸಂಬಂಧ ತುಂಬಾನೇ ವಿಶೇಷವಾಗಿದೆ. ಪ್ರತಿ ಸೀಸನ್‌ನಲ್ಲೂ ಸುದೀಪ್ ಸ್ವತಃ ಅಡುಗೆ ಮಾಡಿ ಅಥವಾ ವಿಶೇಷ ಭಕ್ಷ್ಯಗಳನ್ನು ತಯಾರಿಸಿ ಮನೆಯೊಳಗೆ ಕಳುಹಿಸುತ್ತಾರೆ.

ಇಂದಿನ ಸಂಚಿಕೆಯಲ್ಲಿ ಸುದೀಪ್ ಕಳುಹಿಸಿರುವ ಈ ವಿಶೇಷ ಊಟದ ಹಿಂದಿನ ವಿಚಾರ ಬಹಿರಂಗವಾಗಲಿದೆ. ಈ ಭರ್ಜರಿ ಅಡುಗೆಯನ್ನು ಯಾರು ಸಿದ್ಧಪಡಿಸಿದರು ಮತ್ತು ಸ್ಪರ್ಧಿಗಳಿಗೆ ಕಿಚ್ಚ ಏನು ಸಂದೇಶ ನೀಡಿದ್ದಾರೆ ಎಂಬ ಕುತೂಹಲ ಮೂಡಿದೆ.

ಒಟ್ಟಿನಲ್ಲಿ ಬಿಗ್‌ಬಾಸ್ ಮನೆಯ ಜಗಳ ಮತ್ತು ಒತ್ತಡದ ನಡುವೆ ಸುದೀಪ್ ಅವರ ಈ ವಿಶೇಷ ಕಾಳಜಿ ಸ್ಪರ್ಧಿಗಳಿಗೆ ಹೊಸ ಉತ್ಸಾಹ ನೀಡಿದ್ದು, ಇಂದಿನ ಎಪಿಸೋಡ್‌ಗಾಗಿ ವೀಕ್ಷಕರು ಕಾಯುತ್ತಿದ್ದಾರೆ.