ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಚಿತ್ರದ ನಾಗಾಲೋಟ ಯಶಸ್ವಿಯಾಗಿ ಮುಂದುವರಿದಿದೆ. ಬಿಡುಗಡೆಯಾಗಿ 12 ದಿನಗಳನ್ನು ಪೂರೈಸಿರುವ ಈ ಸಿನಿಮಾ ಹೊಸ ದಾಖಲೆ ಬರೆದಿದೆ.
ವಿಶ್ವದಾದ್ಯಂತ ಈವರೆಗೆ ಬರೋಬ್ಬರಿ 1,437.25 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ಸಿನಿಮಾ ಎರಡು ಸಾವಿರ ಕೋಟಿ ಕ್ಲಬ್‌ನತ್ತ ವೇಗವಾಗಿ ದಾಪುಗಾಲಿಡುತ್ತಿದೆ. ವಾರದ ದಿನವಾದ ಸೋಮವಾರದ ಕಲೆಕ್ಷನ್ ಕೊಂಚ ಇಳಿಕೆ ಕಂಡರೂ, ಇದು ಸಿನಿಮಾದ ಬಲವಾದ ಹಿಡಿತಕ್ಕೆ ಸಾಕ್ಷಿಯಾಗಿದೆ.
ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 32 ಕೋಟಿ ಗಳಿಕೆ
ಭಾರತದ ಬಾಕ್ಸ್ ಆಫೀಸ್‌ನಲ್ಲಿ 12ನೇ ದಿನ ‘ರಾಮಾಯಣ’ (Ramayan Box Office Collection Day 12) ಚಿತ್ರವು ಒಟ್ಟು 32 ಕೋಟಿ ರೂಪಾಯಿ ನೆಟ್ ಗಳಿಕೆ ಕಂಡಿದೆ. ಹಿಂದಿನ ಭಾನುವಾರ ಭರ್ಜರಿ 75 ಕೋಟಿ ರೂಪಾಯಿ ಬಾಚಿಕೊಂಡಿತ್ತು.
ಸೋಮವಾರ ಶೇ. 57.3 ರಷ್ಟು ಇಳಿಕೆ ಕಂಡರೂ 32 ಕೋಟಿ ರೂಪಾಯಿ ಗಳಿಸಿದ್ದು ನಿಜಕ್ಕೂ ಸಾಮಾನ್ಯ ಮಾತಲ್ಲ. ದೇಶದಾದ್ಯಂತ ಒಟ್ಟು 22,395 ಶೋಗಳಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿದೆ. ಪ್ರತಿ ಶೋಗೆ ಸರಾಸರಿ 14,289 ರೂಪಾಯಿಗಳವರೆಗೆ ಅತ್ಯುತ್ತಮ ಕಲೆಕ್ಷನ್ ದಾಖಲಾಗಿದೆ.
ಭಾಷಾವಾರು ಗಳಿಕೆಯಲ್ಲಿ ಹಿಂದಿ ಬೆಲ್ಟ್ ಮೇಲುಗೈ
ಭಾಷಾವಾರು ಗಳಿಕೆಯನ್ನು ನೋಡುವುದಾದರೆ ಹಿಂದಿ ಬೆಲ್ಟ್‌ನಲ್ಲಿ ‘ರಾಮಾಯಣ’ ತನ್ನ ಪ್ರಾಬಲ್ಯ ಮೆರೆದಿದೆ. 12ನೇ ದಿನ ಹಿಂದಿಯಲ್ಲಿ ಬರೋಬ್ಬರಿ 23.75 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.
ಉಳಿದಂತೆ ಮಲಯಾಳಂನಲ್ಲಿ 2.85 ಕೋಟಿ ಹಾಗೂ ಕನ್ನಡದಲ್ಲಿ 2 ಕೋಟಿ ರೂಪಾಯಿ ಸಂಗ್ರಹವಾಗಿದೆ. ತಮಿಳಿನಲ್ಲಿ 1.90 ಕೋಟಿ ಹಾಗೂ ತೆಲುಗಿನಲ್ಲಿ 1.50 ಕೋಟಿ ರೂಪಾಯಿ ಹರಿದುಬಂದಿದೆ. ಭಾರತದಲ್ಲಿ ಚಿತ್ರದ ಒಟ್ಟು ನೆಟ್ ಗಳಿಕೆ 792.60 ಕೋಟಿ ರೂ. ತಲುಪಿದೆ. ಒಟ್ಟು ಗ್ರಾಸ್ ಕಲೆಕ್ಷನ್ 947.25 ಕೋಟಿ ರೂಪಾಯಿ ಆಗಿದೆ.
ಇದನ್ನು ಓದಿ: Ramayana: ಬಾಕ್ಸ್ಆಫೀಸ್ ಕಲೆಕ್ಷನ್ ಚಿಂತೆಯೇ ಇಲ್ಲದ ನಮಿತ್ ಮಲ್ಹೋತ್ರಾ; ‘ರಾಮಾಯಣ’ ನಿರ್ಮಾಪಕರ ಮಾಸ್ ಪ್ಲಾನ್
ವಿದೇಶದಲ್ಲೂ ಮುಂದುವರಿದ ರಾಮಾಯಣ ಕ್ರೇಜ್
ವಿದೇಶಿ ಮಾರುಕಟ್ಟೆಯಲ್ಲೂ ‘ರಾಮಾಯಣ’ ಸಿನಿಮಾದ ಹವಾ ಕಡಿಮೆಯಾಗಿಲ್ಲ. 12ನೇ ದಿನ ಓವರ್‌ಸೀಸ್ ಮಾರುಕಟ್ಟೆಯಲ್ಲಿ 10 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ.
ಇದರೊಂದಿಗೆ ವಿದೇಶಿ ಗಳಿಕೆಯ ಒಟ್ಟು ಮೊತ್ತ 490 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಭಾರತ ಹಾಗೂ ವಿದೇಶದ ಗಳಿಕೆ ಸೇರಿ ಒಟ್ಟು ವರ್ಲ್ಡ್‌ವೈಡ್ ಗ್ರಾಸ್ 1,437.25 ಕೋಟಿ ತಲುಪಿದೆ. ಮುಂದಿನ ವಾರಾಂತ್ಯದ ವೇಳೆಗೆ ಸಿನಿಮಾ ಮತ್ತಷ್ಟು ದೊಡ್ಡ ಮೈಲಿಗಲ್ಲು ದಾಟಲಿದೆ.




