☔ Weather
Bengaluru: ☀️ 25°C | AQI 128
Mysore: ☀️ 23°C | AQI 152
Mangalore: ☀️ 28°C | AQI 184
Bengaluru: ☀️ 25°C | AQI 128
☔ Weather
Bengaluru: ☀️ 25°C | AQI 128
Mysore: ☀️ 23°C | AQI 152
Mangalore: ☀️ 28°C | AQI 184
Bengaluru: ☀️ 25°C | AQI 128

ಶಿವಮೊಗ್ಗ ಗ್ರಾಮೀಣ ಕುಡಿಯುವ ನೀರು ವಿಭಾಗದಲ್ಲಿ ನೇಮಕಾತಿ; ಅರ್ಜಿ ಶುಲ್ಕವಿಲ್ಲ

RDWSD Shivamogga Recruitment 2026: Apply Online For Junior Microbiologist Posts
ಶಿವಮೊಗ್ಗ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಲ್ಲಿ ಜೂನಿಯರ್ ಮೈಕ್ರೋಬಯಾಲಜಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಶುಲ್ಕವಿಲ್ಲದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿವರ ಇಲ್ಲಿದೆ.

ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಲ್ಲಿ (RDWSD Shivamogga Recruitment) ಖಾಲಿ ಇರುವ ಜೂನಿಯರ್ ಮೈಕ್ರೋಬಯಾಲಜಿಸ್ಟ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ. ವಿಜ್ಞಾನ ಪದವೀಧರರಿಗೆ ಸರ್ಕಾರಿ ಪ್ರಯೋಗಾಲಯದಲ್ಲಿ ಕೆಲಸ ಮಾಡಲು ಇದೊಂದು ಉತ್ತಮ ಅವಕಾಶವಾಗಿದೆ.

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಕೇವಲ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಯಾವುದೇ ರೀತಿಯ ಅರ್ಜಿ ಶುಲ್ಕವಿಲ್ಲದೆ ಎಲ್ಲಾ ವರ್ಗದ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ಇಲಾಖೆ ನೀಡಿದೆ.

ಈ ನೇಮಕಾತಿಯ ವಿದ್ಯಾರ್ಹತೆ, ವಯೋಮಿತಿ, ಮಾಸಿಕ ವೇತನ ಹಾಗೂ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

ಹುದ್ದೆ, ವಿದ್ಯಾರ್ಹತೆ ಮತ್ತು ವೇತನ ವಿವರ

  • ನೇಮಕಾತಿ ಸಂಸ್ಥೆ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗ.
  • ಹುದ್ದೆಯ ಹೆಸರು: ಜೂನಿಯರ್ ಮೈಕ್ರೋಬಯಾಲಜಿಸ್ಟ್ (ತಾತ್ಕಾಲಿಕ ಮತ್ತು ಹೊರಗುತ್ತಿಗೆ ಆಧಾರ).
  • ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೈಕ್ರೋಬಯಾಲಜಿ, ಬಯೋಕೆಮಿಸ್ಟ್ರಿ, ಬಯೋಟೆಕ್ನಾಲಜಿ ಅಥವಾ ಎನ್ವಿರಾನ್‌ಮೆಂಟಲ್ ಸೈನ್ಸ್‌ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು. ಜೊತೆಗೆ ನೀರಿನ ಗುಣಮಟ್ಟ ಪರೀಕ್ಷಾ ಕ್ಷೇತ್ರದಲ್ಲಿ 2 ರಿಂದ 5 ವರ್ಷಗಳ ಸೇವಾ ಅನುಭವ ಕಡ್ಡಾಯ (ದೂರ ಶಿಕ್ಷಣದ ಪದವಿ ಮಾನ್ಯವಲ್ಲ).
  • ಗರಿಷ್ಠ ವಯೋಮಿತಿ: ಅಭ್ಯರ್ಥಿಗಳ ಗರಿಷ್ಠ ವಯಸ್ಸು 45 ವರ್ಷಗಳ ಒಳಗಿರಬೇಕು.
  • ಮಾಸಿಕ ವೇತನ: ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹21,500 ಸಂಚಿತ ವೇತನ ಸಿಗಲಿದೆ.

ಅರ್ಜಿ ಸಲ್ಲಿಕೆ, ಆಯ್ಕೆ ವಿಧಾನ ಮತ್ತು ದಿನಾಂಕಗಳು

  • ಅರ್ಜಿ ಶುಲ್ಕ: ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
  • ಅರ್ಜಿ ಸಲ್ಲಿಸುವ ವಿಧಾನ: ಶಿವಮೊಗ್ಗ ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್ [https://shivamogga.nic.in](https://shivamogga.nic.in) ಗೆ ಭೇಟಿ ನೀಡಿ, ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
  • ಆಯ್ಕೆ ವಿಧಾನ: ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ, ವಿದ್ಯಾರ್ಹತೆ ಮತ್ತು ಅನುಭವದ ಆಧಾರದ ಮೇಲೆ ಕಿರುಪಟ್ಟಿ ತಯಾರಿಸಲಾಗುತ್ತದೆ. ನಂತರ ಇ-ಮೇಲ್ ಮೂಲಕ ಮಾಹಿತಿ ನೀಡಿ ನೇರ ಸಂದರ್ಶನದ ಮೂಲಕ ಅಂತಿಮ ಆಯ್ಕೆ ಮಾಡಲಾಗುತ್ತದೆ.
  • ಪ್ರಮುಖ ದಿನಾಂಕಗಳು: ನವೆಂಬರ್ 05, 2026 ರಂದು ಅಧಿಸೂಚನೆ ಪ್ರಕಟವಾಗಿದ್ದು, ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಸ್ತುತ ಚಾಲ್ತಿಯಲ್ಲಿದೆ. ಕೊನೆಯ ದಿನಾಂಕದ ನಿಖರ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಪರಿಶೀಲಿಸಿ.