ದಿನ ಭವಿಷ್ಯ: ನವೆಂಬರ್ 15, ಭಾನುವಾರದ ಇಂದಿನ ರಾಶಿ ಭವಿಷ್ಯದ ಪ್ರಕಾರ, ಕೆಲ ನಿರ್ದಿಷ್ಟ ರಾಶಿಯವರ ಉದ್ಯೋಗ ಅಥವಾ ಅಧಿಕಾರದ ಸ್ಥಾನವನ್ನು ಇತರರು ತಮ್ಮ ಚತುರ ತಂತ್ರದಿಂದ ಪಡೆದುಕೊಳ್ಳುವ ಸಾಧ್ಯತೆಯಿದೆ. ಇಂದಿನ ದಿನದಲ್ಲಿ ಪ್ರತಿಯೊಂದು ವ್ಯವಹಾರದಲ್ಲಿ ಎಚ್ಚರಿಕೆ ವಹಿಸಬೇಕು.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಶರತ್ ಋತು, ಕಾರ್ತಿಕ ಮಾಸದ ಶುಕ್ಲ ಪಕ್ಷದ ಷಷ್ಠೀ ತಿಥಿಯ ದಿನ ಇದಾಗಿದೆ. ಇಂದು ಗುರಿ ಆಸೆಗೆ ಭಂಗ, ಹಳೆಯ ಅಪರಾಧ ಹಾಗೂ ವಂಚನೆಯ ವಿಶೇಷತೆ ಇರಲಿದೆ.
ಇಂದಿನ ದ್ವಾದಶ ರಾಶಿಗಳ ಸಂಪೂರ್ಣ ಜ್ಯೋತಿಷ್ಯ ಫಲಗಳು ಮತ್ತು ದೈನಂದಿನ ಭವಿಷ್ಯವು ಹೇಗಿರಲಿದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದು ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಅವಶ್ಯವಾಗಿದೆ.
ಮೇಷ ರಾಶಿ
ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನದ ಕೊರತೆಯು ಇಂದು ಹೆಚ್ಚು ಕಂಡುಬರುವುದು. ಇಂದಿನ ಪ್ರಮುಖ ವ್ಯವಹಾರದಲ್ಲಿ ನಿಮಗೆ ಕೆಲವು ತೊಡಕುಗಳು ಎದುರಾಗಬಹುದು. ಶತ್ರುಗಳ ಸಂಚಿಗೆ ಬಲಿಯಾಗದಂತೆ ಎಚ್ಚರವಹಿಸಿ.
ವೃಷಭ ರಾಶಿ
ಬರಬೇಕಾದ ಹಣ ಕೈಸೇರಿದರೂ ಖರ್ಚಿನ ದಾರಿಗಳು ತೆರೆದುಕೊಳ್ಳುತ್ತವೆ. ನಿಮ್ಮ ಮಕ್ಕಳಿಗೆ ಸಿಗುವ ಸಣ್ಣ ಪುರಸ್ಕಾರದಿಂದ ನಿಮಗೆ ಮನಸ್ಸಿಗೆ ಸಂತೋಷವಾಗುತ್ತದೆ. ವಿದೇಶ ಪ್ರಯಾಣದ ನಿರೀಕ್ಷೆಯಲ್ಲಿ ಇರುವವರಿಗೆ ಶುಭ ಸುದ್ದಿ ಸಿಗಲಿದೆ.
ಮಿಥುನ ರಾಶಿ
ನಿಮ್ಮ ವಿನಮ್ರ ಸ್ವಭಾವವು ನಿಮ್ಮನ್ನು ಜೀವನದಲ್ಲಿ ಎತ್ತರಕ್ಕೆ ಕೊಂಡೊಯ್ಯುವುದು. ಪ್ರಭಾವಿ ಗಣ್ಯರ ವ್ಯಕ್ತಿಗಳ ಜೊತೆ ಕೆಲವು ಉತ್ತಮ ಸಮಯವನ್ನು ಕಳೆಯುವಿರಿ. ಮನೆತನದ ಕಾರಣದಿಂದ ಸಮಾಜದಲ್ಲಿ ನಿಮಗೆ ಗೌರವ ಪ್ರಾಪ್ತವಾಗಲಿದೆ.
ಕರ್ಕಾಟಕ ರಾಶಿ
ಧಾರ್ಮಿಕ ವಿಚಾರವಾಗಿ ನೀವು ಇಂದು ದೂರದ ಊರಿಗೆ ಪ್ರಯಾಣ ಮಾಡುವಿರಿ. ಪರಿಶ್ರಮದಿಂದ ಸಂಪಾದನೆ ಮಾಡಿದ್ದು ನಿಮಗೆ ಅಧಿಕ ಸಂತೋಷ ತರುವುದು. ಹಣಕಾಸಿನ ಕೊರತೆಯನ್ನು ಕುಟುಂಬಕ್ಕೆ ತಿಳಿಯದಂತೆ ನಿರ್ವಹಿಸಿ.
ಸಿಂಹ ರಾಶಿ
ನಿಮ್ಮ ವಿದ್ಯೆಗೆ ಉಪಯುಕ್ತವಾದ ಉತ್ತಮ ಉದ್ಯೋಗಾವಕಾಶಗಳು ತೆರೆದುಕೊಳ್ಳುವುದು. ಆಸ್ತಿಯಲ್ಲಿ ಸಮಪಾಲು ಸಿಗದೆ ಇದ್ದರೆ ಹಿರಿಯರ ಜೊತೆ ವಾದಕ್ಕಿಳಿಯುವಿರಿ. ಪಾಲುದಾರಿಕೆಯಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಹುಟ್ಟಿಕೊಳ್ಳಬಹುದು.
ಕನ್ಯಾ ರಾಶಿ
ನೀವು ಆಡುವ ಸುಳ್ಳು ಯಾರ ಬಳಿಯಾದರೂ ಬೇಗನೆ ತಿಳಿದುಬರುವ ಸಂಭವವಿದೆ. ಸರ್ಕಾರದ ಪ್ರಮುಖ ಕಾರ್ಯಗಳನ್ನು ಇಂದು ಬೇಗನೆ ಮುಗಿಸಿಕೊಳ್ಳುವಿರಿ. ವಾಹನ ಖರೀದಿಗಾಗಿ ಅನಿವಾರ್ಯವಾಗಿ ಸಾಲ ಮಾಡಬೇಕಾಗಬಹುದು.
ತುಲಾ ರಾಶಿ
ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆ ಸೂಕ್ತ ಚಿಕಿತ್ಸೆ ಪಡೆಯಿರಿ. ಬಂಧುಗಳು ನಿಮ್ಮನ್ನು ಮುಕ್ತವಾಗಿ ದೂರುವ ಪ್ರಸಂಗಗಳು ಎದುರಾಗಬಹುದು. ಸಾಲದ ಬಾಧೆಯಿಂದ ನಿಮ್ಮ ಮನಸ್ಸಿಗೆ ತೀವ್ರ ಕಿರಿಕಿರಿಯಾಗುವುದು.
ವೃಶ್ಚಿಕ ರಾಶಿ
ಇಂದು ನಿಮಗೆ ಪಿತ್ರಾರ್ಜಿತ ಆಸ್ತಿ ಹಾಗೂ ಸಂಪತ್ತು ಪಡೆಯುವ ಅವಕಾಶವಿರುವುದು. ಭೂಮಿ ಮಾರಾಟ ಮಾಡಿದ ಕಾರಣ ನಿಮ್ಮ ಆರ್ಥಿಕ ಸಮಸ್ಯೆಗಳು ಬಗೆಹರಿಯಲಿವೆ. ನಿಮ್ಮ ಕಾಯುವಿಕೆಯು ಕೊನೆಗೂ ಸಾರ್ಥಕವಾಗುವುದು.
ಧನು ರಾಶಿ
ನಿಮ್ಮ ಇಂದಿನ ಎಲ್ಲಾ ಕಾರ್ಯಗಳಿಗೂ ಟೀಕೆಗಳು ಎದುರಾಗಬಹುದು. ವಿವಾಹ ಜೀವನದಲ್ಲಿ ಕೆಲವು ಕಷ್ಟ ಹಾಗೂ ಅಸಮಾಧಾನಗಳು ಕಾಡಬಹುದು. ಉದ್ಯೋಗವಿಲ್ಲದೆ ಬೇಸರಗೊಂಡವರಿಗೆ ಬೇರೆಡೆ ಕೆಲಸ ಸಿಗುವುದು.
ಮಕರ ರಾಶಿ
ಇತರ ಜನರ ಜೊತೆ ಬೆರೆಯಲು ನೀವು ಸ್ವಲ್ಪ ಹಿಂದೇಟು ಹಾಕುವಿರಿ. ಸ್ವಂತ ಕಾರ್ಯಸ್ಥಳದ ಸ್ವಚ್ಛತೆಯಲ್ಲಿ ನಿಮ್ಮ ಬಹುತೇಕ ಸಮಯ ಕಳೆಯುವಿರಿ. ನಿಮ್ಮ ಮನೆಯವರಿಗೆ ಇಂದು ಹೆಚ್ಚು ಸಮಯವನ್ನು ಮೀಸಲಿಡಿ.
ಕುಂಭ ರಾಶಿ
ನಿಮ್ಮ ನೋವನ್ನು ಮರೆತು ಇನ್ನೊಬ್ಬರ ಬಗ್ಗೆ ಹೆಚ್ಚು ಕಾಳಜಿ ವಹಿಸುವಿರಿ. ನಿಮ್ಮ ಸ್ನೇಹಿತರ ಸಹಾಯವನ್ನು ಬಹಳ ದಿನಗಳ ನಂತರ ಇಂದು ಕೇಳುವಿರಿ. ಆಲಸ್ಯದ ಸ್ವಭಾವದಿಂದ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳಬೇಡಿ.
ಮೀನ ರಾಶಿ
ಯಾವ ವಿಚಾರವೂ ಇಂದು ನಿಮಗೆ ಸಂಪೂರ್ಣ ಸಮಾಧಾನ ನೀಡುವುದಿಲ್ಲ. ಧನಾರ್ಜನೆಗೆ ಅನೇಕ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿವೆ. ನಿಮ್ಮ ಆಂತರಿಕ ಕಲಹಗಳು ಎಲ್ಲರಿಗೂ ಗೊತ್ತಾಗುವಂತೆ ಮಾಡಿಕೊಳ್ಳಬೇಡಿ.




