ಬಿಗ್ ಬಾಸ್ (BBK 13) ಕನ್ನಡ ಮನೆಯಲ್ಲಿ ಈ ವಾರ ಟಾಸ್ಕ್ ವಿಚಾರವಾಗಿ ದೊಡ್ಡ ಗೊಂದಲ ಮೂಡಿತ್ತು. ಸ್ಪರ್ಧಿಗಳು ಆಟವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಕಾರಣ ಟಾಸ್ಕ್ ರದ್ದಾಗಿತ್ತು.
ಮುಖಂಡರಾದ ಯಶಸ್ ಮತ್ತು ಮಂಜು ಪೋಸ್ಟರ್‌ಗಳಿಗೆ ಎದುರಾಳಿಗಳು ಕೆಂಪು ಬಣ್ಣ ಬಳಿಯುವ ಟಾಸ್ಕ್ ನೀಡಲಾಗಿತ್ತು. ಮಂಜು ಹಾಗೂ ಯಶಸ್ ತಂಡಗಳು ಪರಸ್ಪರ ಎದುರಾಳಿಯಾಗಿದ್ದವು.
ಆದರೆ ಯಾರೂ ಗೆದ್ದಿದ್ದಾರೆ ಎಂದು ತೀರ್ಮಾನಿಸಲು ಸಾಧ್ಯವಾಗದೆ ಬಿಗ್ ಬಾಸ್‌ಗೆ ತಿಳಿಸಲಾಯಿತು. ಕೊನೆಗೆ ಬಿಗ್ ಬಾಸ್ ಆಟವನ್ನು ರದ್ದು ಮಾಡಿದ್ದರು.
ಎಐ ಮೂಲಕ ಪತ್ತೆಯಾಯ್ತು ಗೆದ್ದ ತಂಡ
ಶನಿವಾರದ ಎಪಿಸೋಡಿನಲ್ಲಿ ಕಿಚ್ಚ ಸುದೀಪ್ ಅವರು ಈ ಟಾಸ್ಕ್ ಬಗ್ಗೆ ಸ್ಪಷ್ಟವಾದ ಫಲಿತಾಂಶ ನೀಡಿದರು. ಅಸಲಿಗೆ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಎಐ (AI) ಬಳಕೆ ಮಾಡಲಾಯಿತು.
ಯಶಸ್ ಹಾಗೂ ಮಂಜು ತಂಡ ಆಡಿದ ಟಾಸ್ಕಿನ ಚಿತ್ರಗಳನ್ನು ಎಐಗೆ ನೀಡಲಾಗಿತ್ತು. ನಿಯಮಗಳನ್ನೆಲ್ಲ ಅರ್ಥ ಮಾಡಿಸಿ ಪ್ರಶ್ನಿಸಿದಾಗ ಎಐ ಮಹತ್ವದ ಉತ್ತರ ನೀಡಿತು.
ಇದನ್ನು ಓದಿ: BBK 13: ಕಾರ್ನರ್ನಲ್ಲಿ ಕುಳಿತು ಆಟ ಆಡ್ತಿದ್ದಾರಾ ಮಂಜು? ವೀಕೆಂಡ್ ಪಂಚಾಯಿತಿಯಲ್ಲಿ ಅಸಲಿ ಮುಖವಾಡ ಕಳಚಿದ ಕಿಚ್ಚ
ಎಐ ಪರಿಶೀಲನೆ ಪ್ರಕಾರ ಯಶಸ್ ತಂಡವೇ ಟಾಸ್ಕ್‌ನಲ್ಲಿ ಗೆಲುವು ಸಾಧಿಸಿದೆ ಎಂದು ಸುದೀಪ್ ಬಹಿರಂಗಪಡಿಸಿದರು. ಅಲ್ಲಿಗೆ ಯಶಸ್ ತಂಡವೇ ವಿಜೇತ ಎಂದು ಅಧಿಕೃತವಾಯಿತು.
BBK 13: ಕ್ಯಾಪ್ಟನ್ಸಿ ರದ್ದುಗೊಳಿಸಿ ಸುದೀಪ್ ಶಿಕ್ಷೆ
ಟಾಸ್ಕ್ ರದ್ದಾದ ಕಾರಣಕ್ಕೆ ಆ ಬಳಿಕ ನಡೆದ ಆಟಗಳಲ್ಲೂ ಸಾಕಷ್ಟು ಬದಲಾವಣೆಗಳಾಗಿದ್ದವು. ನಾಯಕತ್ವದ ಟಾಸ್ಕಿಗೂ ಸಹ ಬೇರೆ ಸ್ಪರ್ಧಿಗಳು ತೆರಳಬೇಕಾಯಿತು.
ಸ್ಪರ್ಧಿಗಳು ಮಾಡಿದ ಈ ಎಲ್ಲ ತಪ್ಪನ್ನು ಗಂಭೀರವಾಗಿ ಪರಿಗಣಿಸಿ ಸುದೀಪ್ ಕಠಿಣ ಶಿಕ್ಷೆ ವಿಧಿಸಿದರು. ಈ ವಾರ ಮನೆಯ ನಾಯಕತ್ವವನ್ನೇ ಸಂಪೂರ್ಣವಾಗಿ ರದ್ದು ಮಾಡಿದರು.
ಜಗ್ಗ ಮಮ್ಮಿ ಈ ವಾರ ಮನೆಯ ಕ್ಯಾಪ್ಟನ್ ಆಗಿದ್ದರು. ಸುದೀಪ್ ಆದೇಶದಂತೆ ಜಗ್ಗ ತಮ್ಮ ಬಟ್ಟೆ ಹಾಗೂ ಹಾಸಿಗೆಗಳನ್ನು ಕ್ಯಾಪ್ಟನ್ಸಿ ರೂಮಿನಿಂದ ಹಳೆ ಜಾಗಕ್ಕೆ ತಂದಿಟ್ಟರು.




