☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

BBK 13: ಜಗಳ ವಿಕೋಪಕ್ಕೆ ತಿರುಗಿದಾಗ ಅಡುಗೆಮನೆಯಿಂದ ಚಾಕು ತಂದ ಗಾನವಿ; ಬಿಗ್ ಬಾಸ್ ಮನೆಯಲ್ಲಿ ಆತಂಕ

BBK 13: Ganavi Brings Knife To Table During Manju Tandav Fight House Shocked
ಬಿಗ್ ಬಾಸ್ ಮನೆಯ ಅಧಿವೇಶನ ಟಾಸ್ಕ್ ವೇಳೆ ಮಂಜು ಮತ್ತು ತಾಂಡವ್ ನಡುವಿನ ಜಗಳ ವಿಕೋಪಕ್ಕೆ ತಿರುಗಿದ್ದು, ಗಾನವಿ ಅಡುಗೆಮನೆಯಿಂದ ಚಾಕು ತಂದು ಟೇಬಲ್ ಮೇಲೆಟ್ಟು ಸವಾಲು ಹಾಕಿದ್ದಾರೆ.

ಮುಖ್ಯಾಂಶಗಳು

  • ಮಂಜು-ತಾಂಡವ್ ನಡುವೆ ಏಕವಚನದಲ್ಲಿ ಜಗಳ.
  • ಅಡುಗೆಮನೆಯಿಂದ ಚಾಕು ತಂದ ಗಾನವಿ.
  • ಬಿಗ್ ಬಾಸ್ ಮನೆಯಲ್ಲಿ ಆತಂಕದ ವಾತಾವರಣ.

ಬಿಗ್ ಬಾಸ್ (BBK 13) ಮನೆಯಲ್ಲಿ ರಾಜಕೀಯ ಚಟುವಟಿಕೆಯ ಟಾಸ್ಕ್ ವೇಳೆ ಸ್ಪರ್ಧಿಗಳ ನಡುವಿನ ಮಾತಿನ ಚಕಮಕಿ ತಾರಕಕ್ಕೇರಿದೆ. ಮಂಜು ಮತ್ತು ತಾಂಡವ್ ನಡುವೆ ನಡೆದ ಘನಘೋರ ಜಗಳದಿಂದ ಮನೆಯಲ್ಲಿ ವಾತಾವರಣ ಸಂಪೂರ್ಣ ಬಿಸಿಯಾಗಿದೆ.

ಸದನದ ಮಾದರಿಯಲ್ಲಿ ನಡೆದ ಚರ್ಚೆಯ ವೇಳೆ ಇಬ್ಬರೂ ಏಕವಚನದಲ್ಲಿ ಕೂಗಾಡಿಕೊಂಡಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ವಾಗ್ವಾದದ ನಡುವೆ ತೀವ್ರ ಆಕ್ರೋಶಗೊಂಡ ಮಂಜು, ತಾಂಡವ್ ವಿರುದ್ಧ ಬಗೆದುಬಿಡ್ತೀನಿ ಎಂದು ಎಚ್ಚರಿಕೆ ನೀಡಿದ್ದಾರೆ.

ಟಾಸ್ಕ್ ನೆಪದಲ್ಲಿ ಸ್ಪರ್ಧಿಗಳ ನಡುವಿನ ವೈಯಕ್ತಿಕ ದ್ವೇಷ ಹಾಗೂ ಕೋಪ ಸ್ಫೋಟಗೊಂಡಿದ್ದು, ಇಂದಿನ ಸಂಚಿಕೆಯು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಮಂಜು ಮತ್ತು ತಾಂಡವ್ ನಡುವೆ ಏಕವಚನದಲ್ಲೇ ಮಾತಿನ ಸಮರ

ಅಧಿವೇಶನದ ಮಾದರಿಯಲ್ಲಿ ನಡೆದ ಈ ಚರ್ಚೆಯಲ್ಲಿ ಎರಡೂ ತಂಡಗಳ ಸದಸ್ಯರು ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗವಹಿಸಿದ್ದರು. ತಾಂಡವ್ ತಮ್ಮ ಆಸನದಿಂದ ಎದ್ದು ನಿಂತು ವಿರೋಧಿ ತಂಡದತ್ತ ಕೈ ತೋರಿಸುತ್ತಾ ಜೋರಾಗಿ ಕೂಗಾಡಲು ಆರಂಭಿಸಿದರು.

ಇದಕ್ಕೆ ಪ್ರತಿಯಾಗಿ ಪೋಡಿಯಂ ಬಳಿ ನಿಂತಿದ್ದ ಮಂಜು ಕೂಡ ಅಷ್ಟೇ ಅಬ್ಬರದಿಂದ ತಿರುಗೇಟು ನೀಡಿದರು. ಇಬ್ಬರೂ ಪರಸ್ಪರ ಹೋಗಲೇ ಬಾರಲೇ ಎಂದು ಏಕವಚನ ಪ್ರಯೋಗಿಸುತ್ತಾ, ನಾಟಕ ಆಡಬೇಡ ಎಂದು ಕಿರುಚಾಡಿದ್ದಾರೆ.

ಇದನ್ನು ಓದಿ: BBK 13: ಮನೆಮಂದಿಗೆ ಗೊತ್ತಿಲ್ಲದ ಮಂಜನ ಸೀಕ್ರೆಟ್ ಟ್ವಿಸ್ಟ್; ಬದಲಾಗಲು ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಳ್ತಾರಾ ಮಾಡರ್ನ್ ಕವಿ?

ಗಾರ್ಡನ್ ಏರಿಯಾದಲ್ಲಿ ನಡೆದಿದ್ದ ದೈಹಿಕ ತಿಕ್ಕಾಟದ ವಿಚಾರವೇ ಈ ದೊಡ್ಡ ಜಗಳಕ್ಕೆ ಮೂಲ ಕಾರಣವಾಗಿದ್ದು, ಸದನದಲ್ಲಿ ಭಾರಿ ಗದ್ದಲ ಎಬ್ಬಿಸಲಾಯಿತು.

BBK 13: ಕೋಪದಿಂದ ಚಾಕು ತಂದು ಟೇಬಲ್ ಮೇಲೆಟ್ಟ ಗಾನವಿ

ಆಟದ ಸಂದರ್ಭದಲ್ಲಿ ಚಾಕು ತಂದು ಹಲ್ಲು ಕಿತ್ತು ಹಾಕಬೇಕು ಎಂಬ ರೀತಿಯಲ್ಲಿ ಮಾತನಾಡಿದ್ದ ವಿಚಾರವನ್ನು ಮುಂದಿಟ್ಟುಕೊಂಡು ಚರ್ಚೆ ತೀವ್ರವಾಯಿತು. ಇದರಿಂದ ಕೆರಳಿದ ಗಾನವಿ ದಿಢೀರ್ ಎಂದು ಎದ್ದು ಹೋಗಿ ಅಡುಗೆ ಮನೆಯಲ್ಲಿದ್ದ ಎರಡು ಚಾಕುಗಳನ್ನು ತಂದರು.

ಬಳಿಕ ಆ ಚಾಕುಗಳನ್ನು ನೇರವಾಗಿ ಟೇಬಲ್ ಮೇಲೆ ಇಟ್ಟು, ಧಮ್ ಇದ್ದರೆ ಬಂದು ಹಲ್ಲು ಕಿತ್ತು ಹಾಕಿ ಎಂದು ಎದುರಾಳಿಗಳಿಗೆ ಸವಾಲು ಹಾಕಿದ್ದಾರೆ. ಗಾನವಿ ಅವರ ಈ ಅನಿರೀಕ್ಷಿತ ನಡವಳಿಕೆಯಿಂದ ಮನೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಚಾಕುಗಳನ್ನು ತಕ್ಷಣ ತೆಗೆದುಕೊಂಡು ಹೋಗುವಂತೆ ಇತರ ಸ್ಪರ್ಧಿಗಳು ಕೂಗಾಡಿದರೆ, ತಾಂಡವ್ ಈ ಬಗ್ಗೆ ಸಭಾಧ್ಯಕ್ಷರ ಮಧ್ಯಪ್ರವೇಶಕ್ಕೆ ಒತ್ತಾಯಿಸಿ ಗರಂ ಆದರು.