ಕನ್ನಡ ಚಿತ್ರರಂಗದ ಜನಪ್ರಿಯ ನಟ ಹಾಗೂ ಮಾಜಿ ಬಿಗ್ಬಾಸ್ ಸ್ಪರ್ಧಿ ರಾಕೇಶ್ ಅಡಿಗ ನಿಶ್ಚಿತಾರ್ಥ (Rakesh Adiga Engagement) ಮಾಡಿಕೊಂಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಸಿಂಗಲ್ ಆಗಿದ್ದ ರಾಕೇಶ್ ಅಡಿಗ ಈಗ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ರಾಕೇಶ್ ಅವರು ಮಾಧುರಿ ಸಿಂಗ್ ಎಂಬುವವರ ಜೊತೆಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರ ಎಂಗೇಜ್ಮೆಂಟ್ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿವೆ.
ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಈ ನವಜೋಡಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಶುಭ ಹಾರೈಸುತ್ತಿದ್ದು, ಶೀಘ್ರದಲ್ಲೇ ಇವರ ಮದುವೆ ಕೂಡ ನಡೆಯಲಿದೆ.
ಬೀಚ್ ಪಕ್ಕದಲ್ಲಿ ರೋಮ್ಯಾಂಟಿಕ್ ಪ್ರಪೋಸ್
ರಾಕೇಶ್ ಅಡಿಗ ಹಾಗೂ ಮಾಧುರಿ ಸಿಂಗ್ ಅವರದ್ದು ಪ್ರೇಮ ವಿವಾಹವಾಗಿದೆ. ರಾಕೇಶ್ ಅವರು ಬೀಚ್ ಒಂದರ ಪಕ್ಕದಲ್ಲಿ ಮಾಧುರಿ ಅವರಿಗೆ ಅತ್ಯಂತ ರೋಮ್ಯಾಂಟಿಕ್ ಆಗಿ ಮದುವೆಗೆ ಪ್ರಪೋಸ್ ಮಾಡಿದ್ದಾರೆ.
ಬೀಚ್ನಲ್ಲಿ ‘ವಿಲ್ ಯು ಮ್ಯಾರಿ ಮೀ’ ಎಂದು ಬೋರ್ಡ್ ಅರೇಂಜ್ ಮಾಡಿ, ಹೂವುಗಳನ್ನು ನೀಡಿ ಪ್ರಪೋಸ್ ಮಾಡಿರುವ ಸುಂದರ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.
ಬಿಗ್ಬಾಸ್ ಮನೆಯಲ್ಲಿದ್ದಾಗಲೂ ರಾಕೇಶ್ ಅವರ ಮದುವೆ ಬಗ್ಗೆ ಸಹ ಸ್ಪರ್ಧಿಗಳು ಮತ್ತು ಅಭಿಮಾನಿಗಳು ಆಗಾಗ ಪ್ರಶ್ನೆ ಮಾಡುತ್ತಿದ್ದರು. ಆದರೆ ರಾಕೇಶ್ ಈ ಬಗ್ಗೆ ಯಾವುದೇ ಮುಕ್ತ ಸುಳಿವು ನೀಡಿರಲಿಲ್ಲ.
Rakesh Adiga Engagement: ರಾಕೇಶ್ ಅಡಿಗ ಸಿನಿಪಯಣ ಮತ್ತು ಬಿಗ್ಬಾಸ್ ಸಾಧನೆ
ರಾಕೇಶ್ ಅಡಿಗ ಅವರು 2009ರಲ್ಲಿ ಬಿಡುಗಡೆಯಾದ ‘ಜೋಶ್’ ಸಿನಿಮಾ ಮೂಲಕ ನಟನೆ ಆರಂಭಿಸಿದರು. ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು.
ಬಳಿಕ ‘ಅರ್ಬಲ್ ಲ್ಯಾಡ್ಸ್’ ಹೆಸರಿನಲ್ಲಿ ತಂಡ ಕಟ್ಟಿಕೊಂಡು ಕನ್ನಡ ರ್ಯಾಪ್ ಸಾಂಗ್ಸ್ ಮೂಲಕವೂ ರಾಕೇಶ್ ಭಾರಿ ಸಂಚಲನ ಸೃಷ್ಟಿಸಿದ್ದರು. ಆ ಕಾಲಕ್ಕೆ ಆ ಗೀತೆಗಳು ದೊಡ್ಡ ಮಟ್ಟದ ಹಿಟ್ ಆಗಿದ್ದವು.
ಬಿಗ್ಬಾಸ್ ಒಟಿಟಿ ಮತ್ತು ಬಿಗ್ಬಾಸ್ ಕನ್ನಡ ಸೀಸನ್ 10 ಎರಡರಲ್ಲೂ ಸ್ಪರ್ಧಿಸಿ ಫೈನಲ್ ತಲುಪಿದ್ದ ರಾಕೇಶ್, ಯಾರೊಟ್ಟಿಗೂ ಜಗಳವಾಡದೆ ಸೌಮ್ಯ ಸ್ವಭಾವದಿಂದಲೇ ಗಮನ ಸೆಳೆದಿದ್ದರು.




