‘ಬಿಗ್ ಬಾಸ್ ಕನ್ನಡ ಸೀಸನ್ 13’ (BBK 13) ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳ ನಡುವಿನ ಸಂಬಂಧಗಳು ಹಾಗೂ ಸ್ನೇಹದ ಲೆಕ್ಕಾಚಾರಗಳು ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿವೆ. ಆರಂಭದಿಂದಲೂ ದೊಡ್ಮನೆಯಲ್ಲಿ ಯಶಸ್ ಗೌಡ ಹಾಗೂ ಆಸಿಯಾ ಫಿರ್ದೋಸ್ ಹೆಚ್ಚು ಆಪ್ತವಾಗಿದ್ದರು.
ಅವರಿಬ್ಬರ ನಡುವೆ ಸೌಂದರ್ಯಾ ಶೆಟ್ಟಿ ಕೂಡ ಬಂದಿದ್ದು, ಮೂವರ ನಂಟಿನ ಬಗ್ಗೆ ಬೇರೆ ಬೇರೆ ರೀತಿಯ ಚರ್ಚೆಗಳು ನಡೆಯುತ್ತಿದ್ದವು. ಆದರೆ ಕಳೆದ ವಾರ ಯಶಸ್ ಕೈಗೆ ಆಸಿಯಾ ರಾಖಿ ಕಟ್ಟುವ ಮೂಲಕ ಬಿಗ್ ಬಾಸ್ ಮನೆಮಂದಿಗೆ ದೊಡ್ಡ ಅಚ್ಚರಿ ಮೂಡಿಸಿದ್ದರು.
ಈ ರಾಖಿ ವಿಚಾರ ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರ ಸಮ್ಮುಖದಲ್ಲಿ ದೊಡ್ಡ ಮಟ್ಟದ ವಾಗ್ವಾದ ಹಾಗೂ ನಿಷ್ಠುರದ ಅಭಿಪ್ರಾಯಗಳಿಗೆ ಕಾರಣವಾಗಿದೆ.
‘ರಾಖಿ ಕಟ್ಟಿರುವುದು ಡ್ರಾಮಾ’; ಗಾನವಿ-ಸೋನಿಕಾ ಗರಂ
“ಯಶಸ್ ಅವರಿಗೆ ಆಸಿಯಾ ರಾಖಿ ಕಟ್ಟಿದ್ದು ಗಿಮಿಕ್ ಹೌದೋ ಅಲ್ಲವೋ?” ಎಂದು ನಿರೂಪಕ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಸ್ಪರ್ಧಿಗಳಿಗೆ ನೇರ ಪ್ರಶ್ನೆ ಕೇಳಿದ್ದಾರೆ.
ಈ ವೇಳೆ ಗಾನವಿ ಅತ್ಯಂತ ನಿಷ್ಠುರವಾಗಿ ಮಾತನಾಡಿ, “ಆಸಿಯಾ ರಾಖಿ ಕಟ್ಟಿದ್ದು ಬರೀ ಡ್ರಾಮಾ ಹಾಗೂ ದೊಡ್ಡ ಗಿಮಿಕ್” ಎಂದು ನೇರವಾಗಿ ಆರೋಪಿಸಿದ್ದಾರೆ.
ಇದನ್ನು ಓದಿ: BBK 13: ಜಗ್ಗಿ ವರ್ಸಸ್ ಸೌಂದರ್ಯ ಜಗಳದಿಂದ ಅಲ್ಲೋಲಕಲ್ಲೋಲವಾದ ಬಿಗ್ ಬಾಸ್ ಮನೆ
ಸೋನಿಕಾ ಕೂಡ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, “ಸಹೋದರನ ಭಾವನೆ ಇದ್ದಿದ್ದರೆ ಮೊದಲಿನಿಂದಲೂ ಇರಬೇಕಿತ್ತು. ಇಷ್ಟು ದಿನ ಕಾದು ಈಗ ರಾಖಿ ಕಟ್ಟಿದ್ದಾರೆ ಎಂದರೆ ಅದು ಗಿಮಿಕ್” ಎಂದು ಆಸಿಯಾ ನಡೆಯನ್ನು ಟೀಕಿಸಿದ್ದಾರೆ.
BBK 13: ‘ಯಾರ ಜೊತೆಯೂ ಜೋಡಿಯಾಗಲ್ಲ’; ಆಸಿಯಾ ಸ್ಪಷ್ಟನೆ
ಇತರ ಸ್ಪರ್ಧಿಗಳ ಗಿಮಿಕ್ ಆರೋಪಕ್ಕೆ ಆಸಿಯಾ ಫಿರ್ದೋಸ್ ಕಿಚ್ಚ ಸುದೀಪ್ ಎದುರಲ್ಲೇ ನೇರವಾಗಿ ಸ್ಪಷ್ಟನೆ ನೀಡಿದ್ದಾರೆ. “ಬಿಗ್ ಬಾಸ್ ಮನೆಯಲ್ಲಿ ಯಾರ ಜೊತೆಯೂ ಜೋಡಿಯಾಗಲು ನಾನು ಸಿದ್ಧವಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆರಂಭದಿಂದಲೂ ಯಶಸ್ ಜೊತೆ ತಮಗೆ ಕೇವಲ ಉತ್ತಮ ಸ್ನೇಹವಿತ್ತು ಹೊರತು ಯಾವುದೇ ಲವ್ ಅಥವಾ ಜೋಡಿಯ ನಂಟಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಇನ್ನೊಂದೆಡೆ ಯಶಸ್ ಅವರು ಸೌಂದರ್ಯಾ ಶೆಟ್ಟಿ ಜೊತೆಗೂ ಕ್ಲೋಸ್ ಆಗಿದ್ದು, ಮದುವೆ ವಿಚಾರದವರೆಗೂ ಮಾತನಾಡಿದ್ದರು. ಸ್ವಯಂವರ ಟಾಸ್ಕ್‌ನಲ್ಲೂ ಇದು ಸಹಾಯವಾಗಿತ್ತು. ಇದೀಗ ಆಸಿಯಾ ರಾಖಿ ಕಟ್ಟಿದ ಬಳಿಕ ಯಶಸ್-ಆಸಿಯಾ ಬಾಂಧವ್ಯ ಹೇಗೆ ಸಾಗಲಿದೆ ಎಂಬ ಕುತೂಹಲ ಹೆಚ್ಚಿದೆ.




