ನವೆಂಬರ್ 9, ಸೋಮವಾರದ ಇಂದಿನ ರಾಶಿ ಭವಿಷ್ಯದ (Daily Horoscope) ಪ್ರಕಾರ, ಕೆಲ ನಿರ್ದಿಷ್ಟ ರಾಶಿಯವರು ಯಾವುದೇ ಕೆಲಸದಲ್ಲಿ ಕೊನೆಯ ಕ್ಷಣದಲ್ಲಿ ಸೋಲು ಕಂಡು ನಿರಾಸೆ ಅನುಭವಿಸಬೇಕಾದ ಪರಿಸ್ಥಿತಿ ಬರಬಹುದು. ಇಂದಿನ ದಿನದಲ್ಲಿ ಪ್ರತಿಯೊಂದು ಪ್ರಮುಖ ನಿರ್ಧಾರಗಳಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಶರತ್ ಋತು, ಆಶ್ವಯುಜ ಮಾಸದ ಕೃಷ್ಣ ಪಕ್ಷದ ಚತುರ್ದಶೀ ಹಾಗೂ ಅಮಾವಾಸ್ಯಾ ತಿಥಿಯ ದಿನ ಇದಾಗಿದೆ. ಇಂದು ಸ್ವಾವಲಂಬನೆಗೆ ಆಸಕ್ತಿ, ಕೃಷಿ ಕಾರ್ಯದಿಂದ ಆಯಾಸ ಹಾಗೂ ಆರೋಗ್ಯದಲ್ಲಿ ಏರಿಳಿತದ ವಿಶೇಷತೆ ಇರಲಿದೆ.
ಇಂದಿನ ದ್ವಾದಶ ರಾಶಿಗಳ ಸಂಪೂರ್ಣ ಜ್ಯೋತಿಷ್ಯ ಫಲಗಳು ಮತ್ತು ದೈನಂದಿನ ಭವಿಷ್ಯವು ಹೇಗಿರಲಿದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದು ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಅವಶ್ಯವಾಗಿದೆ.
ಮೇಷ ರಾಶಿ
ನಿಮ್ಮ ಅಜಾಗರೂಕತೆಯ ಮಾತಿನಿಂದಾಗಿ ಕೆಲವು ಸಮಸ್ಯೆಗಳನ್ನು ಎದುರಿಸುವಿರಿ. ಕುಟುಂಬದ ಶಾಂತಿಗಾಗಿ ಧಾರ್ಮಿಕ ಕಾರ್ಯಗಳನ್ನು ಮಾಡಲು ಇಚ್ಛಿಸುವಿರಿ. ವಿನಾಕಾರಣ ನಿಮ್ಮ ಸಂಗಾತಿಯೊಂದಿಗೆ ದ್ವೇಷ ಸಾಧಿಸುವುದು ಬೇಡ.
ವೃಷಭ ರಾಶಿ
ನಿಮ್ಮ ರಹಸ್ಯ ವಿಚಾರಗಳನ್ನು ತಿಳಿದುಕೊಳ್ಳಲು ಶತ್ರುಗಳು ಪ್ರಯತ್ನಿಸಬಹುದು. ಮಾತಿನ ಮೇಲೆ ನೀವು ಸ್ವಲ್ಪ ಹಿಡಿತವನ್ನು ಸಾಧಿಸುವುದು ಅತ್ಯಂತ ಅವಶ್ಯವಾಗಿದೆ. ವ್ಯವಹಾರದಲ್ಲಿನ ಹಳೆಯ ಸಮಸ್ಯೆಗಳು ಇಂದು ಕೊನೆಗೊಳ್ಳಲಿವೆ.
ಮಿಥುನ ರಾಶಿ
ನ್ಯಾಯಾಲಯದ ಕಾನೂನು ವಿಚಾರಗಳಲ್ಲಿ ನಿಮ್ಮ ಊಹೆಯು ತಪ್ಪಾಗಬಹುದು. ವಿದ್ಯಾರ್ಥಿಗಳ ಕಲಿಕೆಯಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆಯಾಗುವ ಸಾಧ್ಯತೆಯಿದೆ. ನಿಮ್ಮ ಗುರಿ ತಲುಪಲು ಕಠಿಣ ಪರಿಶ್ರಮ ಬಹಳ ಅವಶ್ಯಕವಾಗಿದೆ.
ಕರ್ಕಾಟಕ ರಾಶಿ
ವ್ಯವಹಾರದ ಜ್ಞಾನದ ಕೊರತೆಯಿಂದ ಸ್ಥಿರಾಸ್ತಿಯನ್ನು ಕಳೆದುಕೊಳ್ಳುವಿರಿ. ಅತಿಯಾದ ಖರ್ಚುಗಳಿಂದ ಉಳಿತಾಯ ಮಾಡುವುದು ನಿಮಗೆ ಕಷ್ಟವಾಗಲಿದೆ. ಸ್ನೇಹಿತರು ಮತ್ತು ಸಂಬಂಧಿಕರಿಂದ ಸೂಕ್ತ ಸಹಾಯ ಸಿಗಲಿದೆ.
ಸಿಂಹ ರಾಶಿ
ನಿಮ್ಮ ಕಷ್ಟದ ಸಮಯದಲ್ಲಿ ಬಂಧುಗಳು ಬಂದು ನೆರವಾಗುವರು. ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚಿನ ಲಾಭಾಂಶವನ್ನು ಪಡೆಯುವಿರಿ. ಇತರರು ನಿಮ್ಮ ತಪ್ಪುಗಳನ್ನು ಎತ್ತಿ ತೋರಿಸಿದಾಗ ಕೋಪ ಮಾಡಿಕೊಳ್ಳಬೇಡಿ.
ಕನ್ಯಾ ರಾಶಿ
ವ್ಯವಹಾರದಲ್ಲಿ ನೀವು ಊಹಿಸಿದ್ದಕ್ಕಿಂತ ಹೆಚ್ಚಿನ ಲಾಭ ಸಿಗಲಿದೆ. ಆಸ್ತಿ ವಿಚಾರವಾಗಿ ಉಂಟಾದ ಕಲಹವನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗುವಿರಿ. ವಿನಾಕಾರಣ ಇತರೆ ವ್ಯಕ್ತಿಗಳ ಮೇಲೆ ಅಧಿಕಾರ ಚಲಾಯಿಸಬೇಡಿ.
ತುಲಾ ರಾಶಿ
ಉದ್ಯೋಗದಲ್ಲಿ ಬದಲಾವಣೆ ಆಗಲಿದ್ದು ಸರಿಯಾದ ಉತ್ತರ ಸಿಗದೆ ಬೇಸರವಾಗುವುದು. ಪ್ರಮುಖ ಹಣಕಾಸಿನ ವ್ಯವಹಾರ ಮಾಡುವಾಗ ಅತ್ಯಂತ ಎಚ್ಚರಿಕೆ ವಹಿಸಿ. ಮಕ್ಕಳು ನಿಮ್ಮ ಮಾತನ್ನು ಕೇಳದೆ ತಮ್ಮಿಷ್ಟದಂತೆ ನಡೆದುಕೊಳ್ಳುವರು.
ವೃಶ್ಚಿಕ ರಾಶಿ
ಪಾಲುದಾರಿಕೆ ವ್ಯವಹಾರದಲ್ಲಿ ನಿಮಗೆ ಹೊಂದಾಣಿಕೆಯ ಕೊರತೆ ಕಾಡಬಹುದು. ಅನಿವಾರ್ಯ ಕಾರಣಗಳಿಂದ ಇಂದು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಸಂಗಾತಿಯ ಅಮೂಲ್ಯ ಬೆಂಬಲವು ನಿಮಗೆ ಖುಷಿ ತರಲಿದೆ.
ಧನು ರಾಶಿ
ಮಕ್ಕಳ ವಿಚಾರದಲ್ಲಿ ನಿಮ್ಮ ಆಲೋಚನೆಯಂತೆ ಅಧಿಕ ಬದಲಾವಣೆ ಇರಲಿದೆ. ವೃತ್ತಿ ಜೀವನದಲ್ಲಿ ಸಹೋದ್ಯೋಗಿಗಳಿಂದ ಸಣ್ಣಪುಟ್ಟ ಕಿರಿಕಿರಿ ಉಂಟಾಗಬಹುದು. ಕೊನೆಯ ಕ್ಷಣದಲ್ಲಿ ನಿಮ್ಮ ಕಾರ್ಯಗಳು ಬದಲಾದರೆ ಕೋಪ ಬರಲಿದೆ.
ಮಕರ ರಾಶಿ
ನಿಮಗೆ ಎಷ್ಟು ಅವಶ್ಯಕತೆ ಇದೆಯೋ ಅಷ್ಟು ಮಾತ್ರ ಮಾತನಾಡಿ. ಉದ್ಯೋಗಸ್ಥರಿಗೆ ಕೆಲಸದ ಕ್ಷೇತ್ರದಲ್ಲಿ ಅತ್ಯುತ್ತಮ ಅವಕಾಶಗಳು ಸಿಗಲಿದೆ. ಹಣವನ್ನು ತೆಗೆದುಕೊಂಡು ಓಡಾಡುವಾಗ ಎಚ್ಚರದಿಂದಿರಿ.
ಕುಂಭ ರಾಶಿ
ಆಸ್ತಿ ಸಂಬಂಧಿತ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಲು ಇದು ಸೂಕ್ತ ಸಮಯ. ಯಾವುದೇ ಸಾಹಸದ ಕೆಲಸಗಳಿಗೆ ಕೈಹಾಕಿ ನಿಮ್ಮ ನೆಮ್ಮದಿ ಹಾಳುಮಾಡಿಕೊಳ್ಳಬೇಡಿ. ನಿಮ್ಮ ನಿರ್ಲಕ್ಷ್ಯದ ಸ್ವಭಾವವು ದುಬಾರಿಯಾಗಬಹುದು.
ಮೀನ ರಾಶಿ (Daily Horoscope)
ನಿಮ್ಮ ಇಂದಿನ ಶ್ರಮದ ಕೆಲಸವು ನಿರೀಕ್ಷೆಗಿಂತ ಹೆಚ್ಚಿನ ಲಾಭ ನೀಡಲಿದೆ. ಯಾವುದೇ ವಿಷಯದಲ್ಲೂ ಅತಿಯಾದ ದುರಾಸೆ ಪಡುವುದು ಒಳ್ಳೆಯದಲ್ಲ. ನಿಮ್ಮ ಕೆಲಸಗಳಲ್ಲಿ ತಪ್ಪು ನಡೆದಾಗ ಬೇರೆಯವರನ್ನು ದೂಷಿಸಬೇಡಿ.




