☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

Ramayana OTT: 4000 ಕೋಟಿಯ ‘ರಾಮಾಯಣ’ ಮನೆಗೆ ಬರೋದು ಯಾವಾಗ? ಇಲ್ಲಿದೆ ಡಿಜಿಟಲ್ ರಿಲೀಸ್ ಮಾಹಿತಿ

Ramayana OTT: Details JioHotstar Digital Rights and Pay Per View Model
ರಾಮಾಯಣ ಸಿನಿಮಾದ ಡಿಜಿಟಲ್ ಹಕ್ಕುಗಳು ಜಿಯೋ ಹಾಟ್ಸ್ಟಾರ್ ಪಾಲಾಗಿದ್ದು, ಒಟಿಟಿಯಲ್ಲಿ ಪೇ-ಪರ್-ವ್ಯೂ ಮಾದರಿಯಲ್ಲಿ ಸ್ಟ್ರೀಮ್ ಆಗುವ ಸಾಧ್ಯತೆಯಿದೆ.

ಮುಖ್ಯಾಂಶಗಳು

  • ಜಿಯೋ ಹಾಟ್ಸ್ಟಾರ್ ಪಾಲಾದ ಒಟಿಟಿ ಹಕ್ಕು.
  • ಪೇ-ಪರ್-ವ್ಯೂ ಮಾದರಿಯಲ್ಲಿ ಪ್ರಸಾರ.
  • 4000 ಕೋಟಿ ಬಜೆಟ್ನ ಬೃಹತ್ ಸಿನಿಮಾ.

ಭಾರತೀಯ ಮಹಾಕಾವ್ಯ ‘ರಾಮಾಯಣ’ವನ್ನು ಆಧರಿಸಿ ಬ್ಲಾಕ್ & ವೈಟ್ ಕಾಲದಿಂದ ಇಂದಿನವರೆಗೆ ಅನೇಕ ಅದ್ಭುತ ಚಲನಚಿತ್ರಗಳು ಬೆಳ್ಳಿತೆರೆಗೆ ಬಂದಿವೆ. ಪ್ರತಿಯೊಬ್ಬರೂ ಈ ಮಹಾಕಾವ್ಯದ ಜೊತೆಗೆ ಭಾವನಾತ್ಮಕ ಸಂಪರ್ಕ ಹೊಂದಿದ್ದಾರೆ.

ಇದೀಗ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ ಭಾಗ-1’ ಸಿನಿಮಾವು ಅದ್ಧೂರಿಯಾಗಿ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಅತ್ಯುನ್ನತ ತಾಂತ್ರಿಕ ಮೌಲ್ಯಗಳೊಂದಿಗೆ ಮೂಡಿಬಂದಿರುವ ಈ ದೃಶ್ಯ ಕಾವ್ಯವು ಎಲ್ಲೆಡೆ ಭಾರಿ ಸಂಚಲನ ಮೂಡಿಸಿದೆ.

ತೆಲುಗು, ತಮಿಳು, ಹಿಂದಿ, ಕನ್ನಡ, ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ರಿಲೀಸ್ ಆಗಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೌಂಡ್ ಮಾಡುತ್ತಿದೆ. ಇದರ ಬೆನ್ನಲ್ಲೇ ಸಿನಿಮಾದ ಒಟಿಟಿ (Ramayana OTT) ಬಿಡುಗಡೆ ಕುರಿತು ಆಸಕ್ತಿದಾಯಕ ಸುದ್ದಿಯೊಂದು ಹೊರಬಿದ್ದಿದೆ.

ಬೃಹತ್ ತಾರಾಗಣ ಹಾಗೂ ಬಿಗ್ ಬಜೆಟ್ ಸಿನಿಮಾ

ಈ ಭವ್ಯ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಮತ್ತು ಸನ್ನಿ ಡಿಯೋಲ್ ಹನುಮಂತನಾಗಿ ನಟಿಸಿದ್ದಾರೆ. ಜೊತೆಗೆ ಹಾಲಿವುಡ್ ಮಟ್ಟದ ತಂತ್ರಜ್ಞರು ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ.

ನಮಿತ್ ಮಲ್ಹೋತ್ರಾ ಮತ್ತು ಯಶ್ ಜಂಟಿಯಾಗಿ ಈ ಎರಡು ಭಾಗಗಳ ಸಿನಿಮಾಗಾಗಿ ಬರೋಬ್ಬರಿ 4000 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತರಾದ ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಅವರ ಸಂಗೀತ ಈ ಚಿತ್ರಕ್ಕಿದೆ.

ಇದನ್ನು ಓದಿ: Ramayana part 1 Review: ‘ರಾಮಾಯಣ’ದಲ್ಲಿ ರಾಮನಾ? ರಾವಣನಾ? ಸ್ವಲ್ಪ ನಿಧಾನ.. ಆದ್ರೂ ಕಥೆ ಪ್ರಧಾನ! 

ಟೀಸರ್ ಹಾಗೂ ಟ್ರೇಲರ್ ಮೂಲಕ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ ಈ ಸಿನಿಮಾ, ಥಿಯೇಟ್ರಿಕಲ್ ಹಾಗೂ ನಾನ್-ಥಿಯೇಟ್ರಿಕಲ್ ಹಕ್ಕುಗಳ ಮಾರಾಟದಲ್ಲೂ ಹೊಸ ದಾಖಲೆ ಬರೆದಿದೆ. ಬಾಕ್ಸ್ ಆಫೀಸ್‌ನಲ್ಲಿಯೂ ಈ ಸಿನಿಮಾ ಕಲೆಕ್ಷನ್ ಸುನಾಮಿ ಸೃಷ್ಟಿಸುತ್ತಿದೆ.

Ramayana OTT: ಯಾವ ಒಟಿಟಿಗೆ ಸಿಕ್ಕಿದೆ ಡಿಜಿಟಲ್ ಹಕ್ಕು?

ಥಿಯೇಟರ್‌ಗಳಲ್ಲಿ ಧೂಳು ಎಬ್ಬಿಸುತ್ತಿರುವ ಈ ರಾಮಾಯಣ ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಜನಪ್ರಿಯ ‘ಜಿಯೋ ಹಾಟ್‌ಸ್ಟಾರ್’ (JioHotstar) ಸಂಸ್ಥೆಯು ಭಾರಿ ಫ್ಯಾನ್ಸಿ ಮೊತ್ತಕ್ಕೆ ತನ್ನದಾಗಿಸಿಕೊಂಡಿದೆ.

ಆದರೆ ಈ ಒಟಿಟಿ ಪ್ರಸಾರದಲ್ಲಿ ಒಂದು ಅನಿರೀಕ್ಷಿತ ಟ್ವಿಸ್ಟ್ ಅಡಗಿದೆ. ಈ ಸಿನಿಮಾವನ್ನು ಒಟಿಟಿಯಲ್ಲಿ ಉಚಿತವಾಗಿ ಅಥವಾ ಕೇವಲ ಸಾಮಾನ್ಯ ಚಂದಾದಾರಿಕೆ (Subscription) ಮೂಲಕ ನೇರವಾಗಿ ವೀಕ್ಷಿಸಲು ಸಾಧ್ಯವಿಲ್ಲ.

ಇದಕ್ಕಾಗಿ ‘ಪೇ-ಪರ್-ವ್ಯೂ’ (Pay-Per-View) ಮಾದರಿಯನ್ನು ತರಲಾಗುತ್ತಿದೆ. ಅಂದರೆ ನೀವು ಜಿಯೋ ಹಾಟ್‌ಸ್ಟಾರ್ ಚಂದಾದಾರರಾಗಿದ್ದರೂ ಸಹ, ಈ ಭವ್ಯ ಸಿನಿಮಾವನ್ನು ವೀಕ್ಷಿಸಲು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.