ಬಿಗ್ ಬಾಸ್ ಕನ್ನಡ (BBK 13) ರಿಯಾಲಿಟಿ ಶೋ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮನೆಯೊಳಗೆ ಸ್ಪರ್ಧಿಗಳ ಆಟ ಹಾಗೂ ಭಾವನೆಗಳ ಪರೀಕ್ಷೆ ತೀವ್ರಗೊಂಡಿದೆ.
ಸದಾ ಜಟಾಪಟಿ, ಟಾಸ್ಕ್ ಹಾಗೂ ಮನಸ್ತಾಪಗಳಲ್ಲಿ ತೊಡಗಿರುತ್ತಿದ್ದ ಸ್ಪರ್ಧಿಗಳಿಗೆ ಬಿಗ್ ಬಾಸ್ ದೊಡ್ಡ ಉಡುಗೊರೆ ನೀಡಿದ್ದಾರೆ. ಮನೆಯಿಂದ ದೂರವಿರುವ ಸ್ಪರ್ಧಿಗಳ ಮನಸ್ಸಿಗೆ ಮುಟ್ಟುವ ಸನ್ನಿವೇಶವೊಂದು ಈಗ ನಿರ್ಮಾಣವಾಗಿದೆ.
ಈ ಬಗ್ಗೆ ಬಿಗ್ ಬಾಸ್ ಬಿಡುಗಡೆ ಮಾಡಿರುವ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಪ್ರೋಮೋ ನೋಡಿ ವೀಕ್ಷಕರು ಕೂಡ ಭಾವುಕರಾಗಿದ್ದಾರೆ.
ಮನೆಯ ಅಂಚೆಪೆಟ್ಟಿಗೆಯಿಂದ ವಿಶೇಷ ಪತ್ರ
ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಅತ್ಯಂತ ವಿಶೇಷವಾದ ಟಾಸ್ಕ್ ಒಂದನ್ನು ಆಯೋಜಿಸಲಾಗಿದೆ. ಮನೆಯ ಅಂಚೆಪೆಟ್ಟಿಗೆಯನ್ನು ತೆರೆದು ಪತ್ರಗಳನ್ನು ಪಡೆದುಕೊಳ್ಳುವ ಅವಕಾಶವನ್ನು ಸ್ಪರ್ಧಿಗಳಿಗೆ ನೀಡಲಾಗಿದೆ.
ಕುಟುಂಬದವರಿಂದ ಬಂದಿರುವ ಪ್ರೀತಿಯ ಪತ್ರಗಳನ್ನು ಪಡೆಯಲು ಸ್ಪರ್ಧಿಗಳು ಕಷ್ಟಪಡಬೇಕಿದೆ. ಆರಂಭದಲ್ಲಿ ಈ ಪತ್ರಗಳು ಬ್ಲ್ಯಾಂಕ್ (ಖಾಲಿ) ಇರುವುದು ವಿಶೇಷವಾಗಿದೆ.
ಟಾಸ್ಕ್ ಗೆದ್ದು ಆ ಪತ್ರಗಳನ್ನು ಪಡೆದುಕೊಳ್ಳುವ ಅವಕಾಶ ಸ್ಪರ್ಧಿಗಳಿಗೆ ಸಿಗಲಿದೆ. ಇದರಿಂದ ಮನೆಯೊಳಗೆ ತೀವ್ರ ಪೈಪೋಟಿ ಹಾಗೂ ಜಟಾಪಟಿ ನಡೆಯುವುದು ಖಚಿತವಾಗಿದೆ.
ಇದನ್ನು ಓದಿ: BBK 13: ವೈಲ್ಡ್ ಕಾರ್ಡ್ ಕುಮಾರಿ ಎಲಿಮಿನೇಟ್; ಬಿಗ್ಬಾಸ್ ಮನೆಯಿಂದ ಲೇಟೆಸ್ಟ್ ಎಕ್ಸಿಟ್
BBK 13: ಕಣ್ಣೀರು ಹಾಕಿದ ಮನೆಯ ಸ್ಪರ್ಧಿಗಳು
ಮನೆಯಿಂದ ದೂರವಿರುವ ಸ್ಪರ್ಧಿಗಳಿಗೆ ತಮ್ಮವರ ನೆನಪು ಕಾಡುವುದು ಸಹಜ. ಈ ಟಾಸ್ಕ್ ಮೂಲಕ ಮನೆಯವರ ಪ್ರೀತಿಯನ್ನು ಪಡೆದುಕೊಳ್ಳಲು ಸ್ಪರ್ಧಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಖಾಲಿ ಪತ್ರಗಳನ್ನು ಗೆದ್ದು ತಮ್ಮವರ ಸಂದೇಶ ಪಡೆಯುವ ಹಂಬಲ ಎಲ್ಲರಲ್ಲೂ ಹೆಚ್ಚಾಗಿದೆ. ಪ್ರೋಮೋದಲ್ಲಿ ಸ್ಪರ್ಧಿಗಳು ಭಾವುಕರಾಗಿ ಕಣ್ಣೀರು ಹಾಕುತ್ತಿರುವುದು ಕಂಡುಬಂದಿದೆ.
ಭಾವನಾತ್ಮಕ ಸನ್ನಿವೇಶಗಳಿಂದ ಕೂಡಿರುವ ಈ ಸಂಚಿಕೆ ಪ್ರೇಕ್ಷಕರನ್ನು ಸೆಳೆಯಲಿದೆ. ಮುಂಬರುವ ದಿನಗಳಲ್ಲಿ ದೊಡ್ಮನೆಯ ಆಟ ಯಾವ ದಿಕ್ಕಿಗೆ ಹೋಗಲಿದೆ ಎಂಬ ಕುತೂಹಲ ಮೂಡಿದೆ.




