☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

Darshan Case: ದರ್ಶನ್ ವೈದ್ಯಕೀಯ ಅರ್ಜಿ ಮೇಲೆ ಇಂದು ಕಣ್ಣು; ಸಾಕ್ಷಿ ಪುನೀತ್ ವಿಚಾರಣೆ ನಾಳೆಗೆ ಇಲ್ಲವೇ ಇಂದಾ?

Darshan Case: Renukaswamy Murder Eyewitness Puneeth Cross Examination Medical Plea Hearing
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ಸಾಕ್ಷಿ ಪುನೀತ್ ಕ್ರಾಸ್ ಎಕ್ಸಾಮಿನೇಷನ್ ಹಾಗೂ ದರ್ಶನ್ ವೈದ್ಯಕೀಯ ಅರ್ಜಿಯ ವಿಚಾರಣೆ 59ನೇ ಸೆಷನ್ಸ್ ಕೋರ್ಟ್ನಲ್ಲಿ ನಡೆಯಲಿದೆ.

ಮುಖ್ಯಾಂಶಗಳು

  • ಸಾಕ್ಷಿ ಪುನೀತ್ ಕ್ರಾಸ್ ಎಕ್ಸಾಮಿನೇಷನ್.
  • ಸಿಆರ್‌ಪಿಸಿ 164 ಹೇಳಿಕೆ ಆಧರಿಸಿ ವಿಚಾರಣೆ.
  • ದರ್ಶನ್ ವೈದ್ಯಕೀಯ ಅರ್ಜಿಗೆ ಆಕ್ಷೇಪಣೆ.

ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದ (Darshan Case) ವಿಚಾರಣೆಯು ಇಂದು ಅತ್ಯಂತ ನಿರ್ಣಾಯಕ ಹಂತ ತಲುಪಿದೆ. ನ್ಯಾಯಾಲಯದಲ್ಲಿ ಇಂದು ಎರಡು ಪ್ರಮುಖ ವಿಚಾರಗಳ ಕುರಿತು ವಾದ-ಪ್ರತಿವಾದಗಳು ನಡೆಯಲಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಿಂದ ಇಂದಿಗೆ ವಿಚಾರಣೆ ಮುಂದೂಡಿಕೆಯಾಗಿತ್ತು. ಇಂದು ಸಾಕ್ಷಿ ಪುನೀತ್ ವಿಚಾರಣೆ ಹಾಗೂ ದರ್ಶನ್ ಚಿಕಿತ್ಸೆ ಅರ್ಜಿಯ ವಿಚಾರಣೆ ನಡೆಯಲಿದೆ.

59ನೇ ಸೆಷನ್ಸ್ ಕೋರ್ಟ್‌ನಲ್ಲಿ ನಡೆಯಲಿರುವ ಇಂದಿನ ಕಲಾಪದಲ್ಲಿ ದೊಡ್ಡ ಮಟ್ಟದ ಕಾನೂನು ಬೆಳವಣಿಗೆಗಳು ನಿರೀಕ್ಷಿಸಲಾಗಿದೆ. ಇದರಿಂದ ಕುತೂಹಲ ಹೆಚ್ಚಾಗಿದೆ.

ಸಾಕ್ಷಿ ಪುನೀತ್ ಕ್ರಾಸ್ ಎಕ್ಸಾಮಿನೇಷನ್

ಪ್ರಮುಖ ಪ್ರತ್ಯಕ್ಷ ಸಾಕ್ಷಿ ಪುನೀತ್ ವಿಚಾರಣೆಯು ಇಂದು ಅತ್ಯಂತ ಮಹತ್ವದ್ದಾಗಿದೆ. ಪ್ರಾಸಿಕ್ಯೂಷನ್ ಕೇಳಿದ ಪ್ರತಿಯೊಂದು ಪ್ರಶ್ನೆಗೂ ಪುನೀತ್ ಗೊತ್ತಿಲ್ಲ ಎಂದು ಉತ್ತರಿಸಿದ್ದ.

ಹೀಗಾಗಿ ಆತನನ್ನು ಪ್ರತಿಕೂಲ ಸಾಕ್ಷಿ (ಹಾಸ್ಟೈಲ್ ವಿಟ್ನೆಸ್) ಎಂದು ಪರಿಗಣಿಸಲು ಎಸ್‌ಪಿಪಿ ಪ್ರಸನ್ನ ಕುಮಾರ್ ಮನವಿ ಮಾಡಿದ್ದರು. ತನಿಖೆ ವೇಳೆ ಸಿಆರ್‌ಪಿಸಿ 164 ಅಡಿ ಪುನೀತ್ ನೀಡಿದ್ದ ಮೂಲ ಹೇಳಿಕೆಯನ್ನು ಕೋರ್ಟ್‌ಗೆ ತರಿಸಿಕೊಳ್ಳಲಾಗಿದೆ.

ಈ 164 ಹೇಳಿಕೆಯನ್ನು ಮುಂದಿಟ್ಟುಕೊಂಡು ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಇಂದು ಕಠಿಣ ಹಾಗೂ ಖಡಕ್ ಪ್ರಶ್ನೆಗಳನ್ನು ಕೇಳಲಿದ್ದಾರೆ. ಈ ವಿಚಾರಣೆ ಪ್ರಕರಣದ ದಿಕ್ಕನ್ನೇ ಬದಲಿಸುವ ಸಾಧ್ಯತೆಯಿದೆ.

ಇದನ್ನು ಓದಿ:Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಂದು ತಿರುವು; ಸಾಕ್ಷಿ ಪುನೀತ್ ವಿಚಾರಣೆ ನಾಳೆಗೆ ಮುಂದೂಡಿಕೆ

Darshan Case: ದರ್ಶನ್ ವೈದ್ಯಕೀಯ ಅರ್ಜಿಗೆ ಆಕ್ಷೇಪಣೆ

ಇದೇ ವೇಳೆ ನಟ ದರ್ಶನ್ ಬೆನ್ನುನೋವಿನ ಚಿಕಿತ್ಸೆಗಾಗಿ ಸಲ್ಲಿಸಿರುವ ವೈದ್ಯಕೀಯ ಅರ್ಜಿಯ ವಿಚಾರಣೆಯೂ ಇಂದು ನಡೆಯಲಿದೆ. ದರ್ಶನ್‌ಗೆ ಅಗತ್ಯ ಸೌಲಭ್ಯ ಕೋರಿ ವಕೀಲರು ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಗೆ ಸಂಬಂಧಿಸಿದಂತೆ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಇಂದು ತೀವ್ರ ಆಕ್ಷೇಪಣೆ ಸಲ್ಲಿಸಲಿದ್ದಾರೆ. ಆರೋಪಿಗಳು ಜೈಲಿನಲ್ಲಿರುವುದರಿಂದ ವಿಚಾರಣೆ ವಿಳಂಬವಾಗಬಾರದು ಎಂದು ವಾದಿಸಲಾಗಿದೆ.

ಸುಪ್ರೀಂಕೋರ್ಟ್ ನಿರ್ದೇಶನದಂತೆ ತ್ವರಿತ ವಿಚಾರಣೆ ನಡೆಸುವಂತೆ ಕೋರ್ಟ್ ಸೂಚಿಸಿದೆ. ಇಂದಿನ ಕಲಾಪದಲ್ಲಿ ದರ್ಶನ್ ಚಿಕಿತ್ಸೆ ಹಾಗೂ ಸಾಕ್ಷಿ ವಿಚಾರಣೆಯ ಅಂತಿಮ ಹಂತ ಕುತೂಹಲ ಮೂಡಿಸಿದೆ.