☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

BBK 13: ವೈಲ್ಡ್ ಕಾರ್ಡ್ ಕುಮಾರಿ ಎಲಿಮಿನೇಟ್; ಬಿಗ್ಬಾಸ್ ಮನೆಯಿಂದ ಲೇಟೆಸ್ಟ್ ಎಕ್ಸಿಟ್

BBK 13: Wild Card Entrant Kumari Evicted
ಬಿಗ್‌ಬಾಸ್ ಕನ್ನಡ ಸೀಸನ್ 13ರ ಮನೆಯಿಂದ ವೈಲ್ಡ್ ಕಾರ್ಡ್ ಸ್ಪರ್ಧಿ ಕುಮಾರಿ ಈ ವಾರ ಹೊರಬಂದಿದ್ದಾರೆ. ಫಿರಂಗಿ ಟಾಸ್ಕ್ ಮೂಲಕ ಕುಮಾರಿ ಎವಿಕ್ಟ್ ಆಗಿದ್ದಾರೆ.

ಮುಖ್ಯಾಂಶಗಳು

  • ವೈಲ್ಡ್ ಕಾರ್ಡ್ ಸ್ಪರ್ಧಿ ಕುಮಾರಿ ಬಿಗ್ಬಾಸ್ ಮನೆಯಿಂದ ಔಟ್.
  • ಫಿರಂಗಿ ಟಾಸ್ಕ್ ಮೂಲಕ ನಿರ್ಧಾರವಾದ ಎಲಿಮಿನೇಷನ್ ಪ್ರಕ್ರಿಯೆ.
  • ಭಾವುಕರಾಗಿ ಕಣ್ಣೀರಿಟ್ಟು ಕುಮಾರಿಯನ್ನು ಕಳುಹಿಸಿದ ಸ್ಪರ್ಧಿಗಳು.

ಬಿಗ್‌ಬಾಸ್ ಕನ್ನಡ ಸೀಸನ್ 13ರ (BBK 13) ಆಟವು ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ ಕಿರಿದಾಗುತ್ತಾ ಬರುತ್ತಿದ್ದು, ಆಟದ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ.

ವೈಲ್ಡ್ ಕಾರ್ಡ್ ಮೂಲಕ ಈಗಾಗಲೇ ಒಟ್ಟು ಐದು ಜನರನ್ನು ಮನೆ ಒಳಗೆ ಕರೆದುಕೊಂಡು ಬರಲಾಗಿದೆ. ಆದರೆ ಹೀಗೆ ಬಂದವರು ಇತರೆ ಸ್ಪರ್ಧಿಗಳ ಜೊತೆಗೆ ಹೊಂದಿಕೊಂಡು ಆಟ ಆಡುವಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸುತ್ತಿದ್ದಾರೆ.

ಬಂದ ಐವರು ವೈಲ್ಡ್ ಕಾರ್ಡ್ ಎಂಟ್ರಿಗಳಲ್ಲಿ ಇದೀಗ ಇಬ್ಬರು ಹೊರಗೆ ಹೋಗಿದ್ದಾರೆ. ಕಳೆದ ವಾರ ಲಕ್ಷ್ಮಿ ಅವರು ಹೊರನಡೆದರೆ, ಈ ವಾರ ಮತ್ತೊಬ್ಬ ವೈಲ್ಡ್ ಕಾರ್ಡ್ ಸ್ಪರ್ಧಿ ಕುಮಾರಿ ಅವರು ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ.

ಅಗ್ನಿಪರೀಕ್ಷೆಯಿಂದ ಬಂದ ಸ್ಪರ್ಧಿಗಳ ಪಯಣ ಅಂತ್ಯ

ಲಕ್ಷ್ಮಿ ಮತ್ತು ಕುಮಾರಿ ಇಬ್ಬರೂ ಸಹ ಅಗ್ನಿಪರೀಕ್ಷೆ ಸ್ಪರ್ಧಿಗಳಾಗಿದ್ದು, ಅಂತಿಮ ಸುತ್ತಿಗೆ ಆಯ್ಕೆ ಆಗಿರಲಿಲ್ಲ. ಮಂಜು ಹಾಗೂ ಸಂಗೀತಾ ಅವರು ಹೊರಹೋದ ಬಳಿಕ ಅವರ ಸ್ಥಾನ ತುಂಬಲು ಇವರನ್ನು ಕಳುಹಿಸಲಾಗಿತ್ತು.

ಆದರೆ ಈ ಇಬ್ಬರಿಗೂ ಮನೆಯ ಲಯಕ್ಕೆ ಸರಿಯಾಗಿ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಕೇವಲ ಎರಡೇ ವಾರಕ್ಕೆ ಲಕ್ಷ್ಮಿ ಹೊರಗೆ ಹೋದರೆ, ಈ ವಾರ ಕುಮಾರಿ ಕೂಡ ಮನೆಯಿಂದ ಹೊರನಡೆಯಬೇಕಾಯಿತು.

ಹಳ್ಳಿ ಹುಡುಗಿಯಾದ ಕುಮಾರಿ ತಮ್ಮ ಮುಗ್ಧತೆಯಿಂದ ಪ್ರೇಕ್ಷಕರ ಮನಗೆಲ್ಲುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕಳೆದ ವಾರ ಅನಾರೋಗ್ಯದ ಕಾರಣದಿಂದ ಅವರಿಗೆ ಯಾವ ಆಟದಲ್ಲೂ ಸರಿಯಾಗಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.

ಇದನ್ನು ಓದಿ: BBK 13: ಕಿಚ್ಚ ಸುದೀಪ್ ಕೊಟ್ಟ ಟಾಸ್ಕ್ನಲ್ಲಿ ನಕ್ಕು ನಲಿದ ಸ್ಪರ್ಧಿಗಳು

BBK 13: ಫಿರಂಗಿ ಟಾಸ್ಕ್ ಮೂಲಕ ಹೊರಬಂದ ಕುಮಾರಿ

ಈ ವಾರ ಆಸಿಯಾ, ಕಿರಣ್, ಕುಮಾರಿ, ಪ್ರಶಾಂತ್, ಧನುಶ್, ಗಗನ್ ಮತ್ತು ಜಗದೀಶ್ ನಾಮಿನೇಟ್ ಆಗಿದ್ದರು. ಕೊನೆಯಲ್ಲಿ ಆಸಿಯಾ, ಗಗನ್, ಧನುಶ್ ಹಾಗೂ ಕಿರಣ್ ಅವರು ಸುರಕ್ಷಿತವಾಗಿ ಸೇಫ್ ಆದರು.

ಅಂತಿಮವಾಗಿ ಜಗದೀಶ್, ಪ್ರಶಾಂತ್ ಮತ್ತು ಕುಮಾರಿ ಉಳಿದುಕೊಂಡಿದ್ದರು. ಸ್ಪರ್ಧಿಗಳ ಮುಂದಿರಿಸಿದ್ದ ಫಿರಂಗಿಯಿಂದ ಕೆಂಪು ಬಣ್ಣದ ವಸ್ತು ಹೊರಬಂದವರು ಔಟ್ ಎಂದು ಬಿಗ್‌ಬಾಸ್ ಸೂಚನೆ ನೀಡಿದರು.

ಮೊದಲು ಪ್ರಶಾಂತ್ ಸೇಫ್ ಆಗಿ ಮನೆಯೊಳಗೆ ಉಳಿದರು. ಬಳಿಕ ಕುಮಾರಿ ಮತ್ತು ಜಗದೀಶ್ ಅವರ ಫಿರಂಗಿ ಸಿಡಿದಾಗ, ಕುಮಾರಿ ಅವರ ಕಡೆಯಿಂದ ಕೆಂಪು ಪೇಪರ್ ಬಂದು ಅವರು ಎವಿಕ್ಟ್ ಆದರು. ಜಗದೀಶ್ ಹಾಗೂ ಇತರೆ ಸದಸ್ಯರು ಭಾವುಕರಾಗಿ ಕುಮಾರಿಯನ್ನು ಕಳುಹಿಸಿಕೊಟ್ಟರು.