ಬಿಗ್ ಬಾಸ್ ಕನ್ನಡ (BBK 13) ವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ವಿನೂತನ ಹಾಗೂ ಮಜಾವಾದ ಟಾಸ್ಕ್ ಒಂದನ್ನು ನೀಡಿದ್ದಾರೆ. ಈ ಆಟದಲ್ಲಿ ಸ್ಪರ್ಧಿಗಳು ಪರಸ್ಪರ ಪಾಸಿಟಿವ್ ಹಾಗೂ ನೆಗೆಟಿವ್ ವಿಷಯಗಳನ್ನು ಮಾತಾಡಬೇಕಿತ್ತು.
ಸ್ಪರ್ಧಿಗಳ ಈ ತಮಾಷೆಯ ಆಟವನ್ನು ನೋಡುತ್ತಾ ಕಿಚ್ಚ ಸುದೀಪ್ ಕೂಡ ಸಿಕ್ಕಾಪಟ್ಟೆ ನಕ್ಕು ನಲಿದಿದ್ದಾರೆ. ಮನೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳು ಈ ಟಾಸ್ಕ್ ಅನ್ನು ಎಂಜಾಯ್ ಮಾಡಿದ್ದು, ವೀಕ್ಷಕರಿಗೂ ಇದು ಭರ್ಜರಿ ಮನರಂಜನೆ ನೀಡಿದೆ.
ಸೂಪರ್ ಸಂಡೆ ವಿತ್ ಬಾದ್ಷಾ ಸಂಚಿಕೆಯಲ್ಲಿ ಈ ಹಾಸ್ಯಮಯ ಆಟಗಳು ನಡೆದಿವೆ. ವಾರದ ಪಂಚಾಯ್ತಿಯಲ್ಲಿ ಶನಿವಾರದ ಕ್ಲಾಸ್ ಸ್ವಲ್ಪ ಸಾಫ್ಟ್ ಆಗಿದ್ದರೂ, ಭಾನುವಾರ ಮಾತ್ರ ಸಂಪೂರ್ಣ ಮಜಾ ಮತ್ತು ನಗುವಿನ ಅಲೆ ಹಬ್ಬಿತ್ತು.
ಗಗನ್ – ಪ್ರಶಾಂತ್ ಹಾಗೂ ಸೌಂದರ್ಯ ಆಟದ ಹೈಲೈಟ್ಸ್
ಈ ಟಾಸ್ಕ್ನಲ್ಲಿ ಥಂಬ್ಸ್ ಅಪ್ ಮಾಡಿದರೆ ಪಾಸಿಟಿವ್ ಆಗಿ, ಥಂಬ್ಸ್ ಡೌನ್ ಮಾಡಿದರೆ ನೆಗೆಟಿವ್ ಆಗಿ ಮಾತನಾಡಬೇಕಿತ್ತು. ಪ್ರಶಾಂತ್ ಅವರು ಗಗನ್ ಬಗ್ಗೆ ಮೊದಲು ಪಾಸಿಟಿವ್ ಆಗಿ ಆಡಿ, ನಂತರ ನೆಗೆಟಿವ್ ವಿಷಯಗಳನ್ನು ಹೇಳಿದರು.
ಆದರೆ ಗಗನ್ ಮಾತ್ರ ಇತರರಂತೆ ಮನಸ್ಸು ಬಿಚ್ಚಿ ಆಡಲಿಲ್ಲ ಎಂಬುದು ಪ್ರೋಮೋದಲ್ಲಿಯೂ ತಿಳಿಯುತ್ತದೆ. ಮತ್ತೊಂದೆಡೆ ಸೌಂದರ್ಯ ಶೆಟ್ಟಿ ಈ ಆಟವನ್ನು ಸಖತ್ ಆಗಿ ಆಡಿದ್ದು, ಕಿರಣ್ ಶಾಸ್ತ್ರಿ ಅವರನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡರು. ಕಿರಣ್ ಶಾಸ್ತ್ರಿ ಕೂಡ ಇದಕ್ಕೆ ಕಮ್ಮಿ ಎಂಬಂತೆ ಪಾಸಿಟಿವ್ ಮತ್ತು ನೆಗೆಟಿವ್ ಎರಡನ್ನೂ ಸಮರ್ಥವಾಗಿ ತಿಳಿಸಿದರು.
BBK 13: ‘ಶೆಟ್ಟಿ ಡಾನ್’ ಆಟವನ್ನು ಪ್ರಶ್ನಿಸಿದ ಕಿಚ್ಚ ಸುದೀಪ್
ಈ ವಾರ ಸೌಂದರ್ಯ ಶೆಟ್ಟಿ ‘ಶೆಟ್ಟಿ ಡಾನ್’ ಪಾತ್ರದಲ್ಲಿ ಮಿಂಚಿದ್ದರು. ಗಗನ್ ಹಾಗೂ ಯಶಸ್ ಈ ಶೆಟ್ಟಿ ಡಾನ್ ಅನ್ನು ಇಂಪ್ರೆಸ್ ಮಾಡಬೇಕಿತ್ತು. ಈ ಆಟದಲ್ಲಿ ಯಶಸ್ ಸಕ್ಸಸ್ ಆಗಿ ಅವರ ಫ್ಯಾಮಿಲಿ ವಿನ್ ಆಗಿತ್ತು.
ಆದರೆ ಈ ‘ಶೆಟ್ಟಿ ಡಾನ್’ ಆಟದ ಬಗ್ಗೆ ಕಿಚ್ಚ ಸುದೀಪ್ ಕೆಲವು ಪ್ರಶ್ನೆಗಳನ್ನು ಎತ್ತಿದರು. ಸೌಂದರ್ಯ ಮೊದಲೇ ಫಿಕ್ಸ್ ಆಗಿದ್ದರೇ? ಯಶಸ್ ಅವರನ್ನು ಗೆಲ್ಲಿಸಬೇಕು ಅಂತಲೇ ಪ್ಲಾನ್ ಮಾಡಿದ್ದರೇ ಎಂದು ಸುದೀಪ್ ಪ್ರಶ್ನಿಸಿ ಉತ್ತರ ಪಡೆದರು.
ಇದೇ ವೇಳೆ ಯಶಸ್ ಹಾಗೂ ಗಾನವಿ ಗೌಡ ಅವರಿಗೂ ಸುದೀಪ್ ಲೈಟಾಗಿ ಕ್ಲಾಸ್ ತೆಗೆದುಕೊಂಡರು. ಒಟ್ಟಾರೆಯಾಗಿ ಈ ವಾರದ ಬಿಗ್ ಬಾಸ್ ಸಂಚಿಕೆ ಕೌತುಕ ಹಾಗೂ ನಗುವಿನ ಜೊತೆಗೆ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದೆ.




