☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

FARMERS : ಪ್ರತಿ ಟನ್ ಕಬ್ಬಿಗೆ 3,600 ರೂ. ನಿಗದಿ, 12 ದಿನಗಳ ಬೆಳಗಾವಿ ರೈತ ಹೋರಾಟಕ್ಕೆ ತೆರೆ

Image of Sugarcane farmers protest
ಪ್ರತಿ ಟನ್ ಕಬ್ಬಿಗೆ 3,600 ರೂಪಾಯಿ ದರ ನಿಗದಿ, 12 ದಿನಗಳ ಬೆಳಗಾವಿ ಕಬ್ಬು ಬೆಳೆಗಾರರ (farmers) ಬೃಹತ್ ಹೋರಾಟ ಕೊನೆಗೂ ಅಂತ್ಯಗೊಂಡಿದೆ.

ಮುಖ್ಯಾಂಶಗಳು

  • ಕೊನೆಗೂ ಪ್ರೊಟೆಸ್ಟ್ ಕೈಬಿಟ್ಟ ರೈತರು
  • ಕಬ್ಬು ಪ್ರತಿ ಟನ್ ಗೆ 3600/- ನಿಗದಿ

ಬೆಳಗಾವಿ: ಪ್ರತಿ ಟನ್ ಕಬ್ಬಿಗೆ 3,600 ರೂಪಾಯಿ ದರ ನಿಗದಿ, 12 ದಿನಗಳ ಬೆಳಗಾವಿ ಕಬ್ಬು ಬೆಳೆಗಾರರ (farmers) ಬೃಹತ್ ಹೋರಾಟ ಕೊನೆಗೂ ಅಂತ್ಯಗೊಂಡಿದೆ. ಪ್ರತಿ ಟನ್ ಕಬ್ಬಿಗೆ 5,500 ರೂಪಾಯಿ ದರ ನೀಡಬೇಕು ಎಂದು ಪಟ್ಟು ಹಿಡಿದು ಬೆಳಗಾವಿ ಜಿಲ್ಲೆಯಲ್ಲಿ ಕಳೆದ 12 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದ ರೈತರು, ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ನಿಗದಿಪಡಿಸಿದ 3,600 ರೂಪಾಯಿ ದರಕ್ಕೆ ಸಮ್ಮತಿಸಿ ಇಂದು ಸಂಜೆ ಗುರ್ಲಾಪುರದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆದುಕೊಂಡಿದ್ದಾರೆ. ಈ ನಿರ್ಧಾರದೊಂದಿಗೆ ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣಕ್ಕೆ ತಾತ್ಕಾಲಿಕ ತೆರೆ ಬಿದ್ದಂತಾಗಿದೆ.

ಇಂದಿನಿಂದ ಸಕ್ಕರೆ ಖಾರ್ಕನೆಗಳ ಆರಂಭ ..!

ರೈತ ಮುಖಂಡ ಚೂನಪ್ಪ ಪೂಜಾರಿ ಅವರು ಮಾತನಾಡಿ, ಸಕ್ಕರೆ ಕಾರ್ಖಾನೆಗಳು ನಾಳೆಯಿಂದ ಅಂದರೆ ನವೆಂಬರ್ 6 ರಿಂದ ಆರಂಭವಾಗಲಿವೆ. ಹೀಗಾಗಿ ಯಾರೂ ಕಾರ್ಖಾನೆಗಳ ಆರಂಭಕ್ಕೆ ಅಡ್ಡಿ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಗುರ್ಲಾಪುರದಲ್ಲಿ ಎಲ್ಲ ರೈತರ ಸಭೆ ನಡೆಸಲಾಗುವುದು ಎಂದೂ ತಿಳಿಸಿದ್ದಾರೆ. ನಾವು 3,800 ರೂಪಾಯಿ ದರ ಕೇಳಿದ್ದೆವು. ಸಚಿವ ಸತೀಶ್ ಜಾರಕಿಹೊಳಿ ಅವರು ಮಧ್ಯಸ್ಥಿಕೆ ವಹಿಸಿ 3,600 ರೂಪಾಯಿ ದರ ನಿಗದಿ ಮಾಡಿಸಿದ್ದಾರೆ. ಈ ದರ ನಮಗೆ ತೃಪ್ತಿ ತಂದಿದೆ ಎಂದು ಅವರು ಹೇಳಿದ್ದಾರೆ. ಸಕ್ಕರೆ ಮಾರಾಟದ ಮೇಲೂ ರೈತರಿಗೆ ಲಾಭಾಂಶ ಸಿಗಲಿದೆ. ಮೊದಲ ಹಂತದಲ್ಲಿ ನಮಗೆ ಜಯ ಸಿಕ್ಕಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಸರ್ಕಾರ 1,000 ರೂಪಾಯಿ ಪ್ರೋತ್ಸಾಹಧನ ನೀಡುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಸಿದ್ದಾರೆ. ಮುಖ್ಯಮಂತ್ರಿಗಳು 1,000 ರೂಪಾಯಿ ಹಣ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಅವರು ಗುಡುಗಿದ್ದಾರೆ.

ಇದನ್ನೂ ಓದಿ : ಬಸ್ ಪ್ರಯಾಣ ದರ ಹೆಚ್ಚಳ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಬಿಜೆಪಿ ಕರೆ

ಈ ಬೆಳವಣಿಗೆ ರೈತರಿಗೆ ಅರ್ಧ ಜಯ, ಸರ್ಕಾರಕ್ಕೆ ತಾತ್ಕಾಲಿಕ ನೆಮ್ಮದಿ ತಂದಿದೆ. 5,500 ರೂಪಾಯಿ ಬೇಡಿಕೆಯಿಂದ 3,600 ರೂಪಾಯಿಗೆ ಇಳಿದಿರುವುದು ರೈತರ ಒತ್ತಡ ಕಡಿಮೆಯಾಗಿದೆ ಎಂಬುದನ್ನು ತೋರಿಸುತ್ತದೆ. ಆದರೆ ಸಚಿವರ ಮಧ್ಯಸ್ಥಿಕೆ ಹಾಗೂ ಲಾಭಾಂಶದ ಭರವಸೆ ಹೋರಾಟವನ್ನು ಸದ್ಯಕ್ಕೆ ತಣ್ಣಗಾಗಿಸಿದೆ. ನಿಜವಾದ ಪರೀಕ್ಷೆ ಮುಂದಿದೆ. ನಿಗದಿಯಾದ ದರ ಸಕಾಲದಲ್ಲಿ ರೈತರ ಕೈ ಸೇರುತ್ತದೆಯೇ, ಲಾಭಾಂಶದ ಲೆಕ್ಕಾಚಾರ ಪಾರದರ್ಶಕವಾಗಿರುತ್ತದೆಯೇ ಎಂಬುದು ಮುಖ್ಯವಾಗುತ್ತದೆ. 1,000 ರೂಪಾಯಿ ಪ್ರೋತ್ಸಾಹಧನದ ಬೇಡಿಕೆ ಈಡೇರದಿದ್ದರೆ ಅಧಿವೇಶನದ ವೇಳೆ ಮತ್ತೆ ಹೋರಾಟ ತೀವ್ರಗೊಳ್ಳುವ ಸಾಧ್ಯತೆ ಇದೆ. ಸರ್ಕಾರ ಕೇವಲ ಘೋಷಣೆಗೆ ಸೀಮಿತವಾಗದೆ, ಕಬ್ಬು ಬೆಳೆಗಾರರ ಉತ್ಪಾದನಾ ವೆಚ್ಚ, ಕಾರ್ಖಾನೆಗಳ ಲಾಭ ಹಾಗೂ ಸಕ್ಕರೆ ಮಾರುಕಟ್ಟೆಯ ವಾಸ್ತವವನ್ನು ಗಮನದಲ್ಲಿಟ್ಟುಕೊಂಡು ಶಾಶ್ವತ ದರ ನೀತಿಯನ್ನು ರೂಪಿಸಬೇಕಾಗಿದೆ. ಇಲ್ಲದಿದ್ದರೆ ಪ್ರತಿ ವರ್ಷವೂ ಇದೇ ರೀತಿಯ ಹೋರಾಟ ಮರುಕಳಿಸುವುದು ತಪ್ಪುವುದಿಲ್ಲ.