☔ Weather
Bengaluru: 🌧️ 24°C | AQI 50
Mysore: ☁️ 25°C | AQI 51
Mangalore: 🌧️ 28°C | AQI 60
Bengaluru: 🌧️ 24°C | AQI 50

PM MODI : ಕಾಂಗ್ರೆಸ್ ವಿಫಲ ಉತ್ಪನ್ನವನ್ನು ಮತ್ತೆ ಮತ್ತೆ ಬಿಡುಗಡೆ ಮಾಡುತ್ತಿದೆ – ರಾಹುಲ್ ಕುರಿತು ಮೋದಿ ವ್ಯಂಗ್ಯ

Image of PM Modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವರ್ಲ್ಡ್ ಸಮಿಟ್ 2026ರ ಉದ್ಘಾಟನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ಪಕ್ಷದ ಕಾರ್ಯವೈಖರಿ, ವಿರೋಧ ಪಕ್ಷಗಳು ಅನುಸರಿಸುತ್ತಿರುವ ರಾಜಕೀಯ ನಿಲುವು ಹಾಗೂ ವಿದೇಶಗಳಲ್ಲಿ ಭಾರತದ ಬಗ್ಗೆ ನೀಡಲಾಗುತ್ತಿರುವ ಹೇಳಿಕೆಗಳನ್ನು ಕಟುವಾಗಿ ಟೀಕಿಸಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ವಿಫಲ ಉತ್ಪನ್ನವನ್ನು ಮತ್ತೆ ಮತ್ತೆ ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದೆ ಎಂದು ವ್ಯಂಗ್ಯವಾಡಿದ ಪ್ರಧಾನಿ, ಇನ್ನೆಷ್ಟು ಬಾರಿ ಇದೇ ಪ್ರಯತ್ನವನ್ನು ಮುಂದುವರಿಸುತ್ತೀರಿ ಎಂದು ಪ್ರಶ್ನಿಸಿದರು. ಅಧಿಕಾರ ಕಳೆದುಕೊಂಡ ನಂತರ ಕಾಂಗ್ರೆಸ್ ಗೆ ಎಲ್ಲವೂ ಕಹಿಯಾಗಿ ಕಾಣುತ್ತಿದೆ ಮತ್ತು ಇತರರು ಬೆಳೆಯುವುದಕ್ಕೂ ಅವಕಾಶ ನೀಡದ ಪರಾವಲಂಬಿ ಪಕ್ಷವಾಗಿ ಅದು ವರ್ತಿಸುತ್ತಿದೆ ಎಂದು ಆರೋಪಿಸಿದರು.

ಜಗತ್ತು ಹೊಸ ವ್ಯವಸ್ಥೆಯ ಹುಡುಕಾಟದಲ್ಲಿದೆ..!

ಜಗತ್ತಿನಾದ್ಯಂತ ಅನೇಕ ಸವಾಲುಗಳು ಎದುರಾಗಿರುವ ಈ ಸಂದರ್ಭದಲ್ಲಿ ಭಾರತ ತನ್ನ ಶಕ್ತಿಯುತ ಚಿತ್ರಣವನ್ನು ಜಗತ್ತಿನ ಮುಂದೆ ಪ್ರಸ್ತುತಪಡಿಸಬೇಕು ಎಂದು ಮೋದಿ ಹೇಳಿದರು. ಇಡೀ ಜಗತ್ತು ಹೊಸ ವ್ಯವಸ್ಥೆಯ ಹುಡುಕಾಟದಲ್ಲಿರುವಾಗ ಭಾರತದಲ್ಲಿ ಕೆಲವರು ಅರಾಜಕತೆಯ ಕನಸು ಕಾಣುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಜಗತ್ತಿನಲ್ಲಿ ಇಷ್ಟೊಂದು ಅಸ್ಥಿರತೆ ಇರುವಾಗ ಭಾರತ ತನ್ನ ಬಲಿಷ್ಠ ಚಿತ್ರಣವನ್ನು ಜಗತ್ತಿನ ಮುಂದೆ ಇಡಬೇಕು, ಆದರೆ ಕೆಲವರು ದೇಶದ ವರ್ಚಸ್ಸಿಗೆ ಧಕ್ಕೆ ತರುವುದರಲ್ಲೇ ಆಸಕ್ತಿ ಹೊಂದಿದ್ದಾರೆ ಎಂದು ಅವರು ಹೇಳಿದರು. ವಿದೇಶಗಳಿಗೆ ತೆರಳಿ ಭಾರತದ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಲಾಗುತ್ತಿದೆ ಮತ್ತು ಭಾರತದ ಆಂತರಿಕ ವಿಚಾರಗಳಲ್ಲಿ ವಿದೇಶಿಯರು ಮಧ್ಯಪ್ರವೇಶಿಸಬೇಕೆಂದು ಕೆಲವರು ಕೇಳಿಕೊಳ್ಳುತ್ತಿದ್ದಾರೆ ಎಂದು ಮೋದಿ ಗಂಭೀರ ಆರೋಪ ಮಾಡಿದರು.

ಇದನ್ನೂ ಓದಿ : ಮುಂದಿನ 3 ದಶಕ ಕಾಂಗ್ರೆಸ್‌ಗೆ ಅಧಿಕಾರ ಇಲ್ಲ : ರಾಹುಲ್ ಅಮಿತ್ ಶಾ ಕೌಂಟರ್

ಈ ಹೇಳಿಕೆಗಳು ಕೇವಲ ರಾಹುಲ್ ಗಾಂಧಿ ಅವರ ವೈಯಕ್ತಿಕ ಟೀಕೆಗೆ ಸೀಮಿತವಾಗಿಲ್ಲ, ಬದಲಾಗಿ ಕಾಂಗ್ರೆಸ್ ನ ನಾಯಕತ್ವದ ಬಿಕ್ಕಟ್ಟು ಮತ್ತು ವಿರೋಧ ಪಕ್ಷದ ರಾಜಕೀಯದ ದಿಕ್ಕಿನ ಬಗ್ಗೆ ಬಿಜೆಪಿಯ ದೀರ್ಘಕಾಲದ ನಿಲುವನ್ನು ಮತ್ತೆ ಪ್ರತಿಪಾದಿಸಿದಂತಾಗಿದೆ. ವಿದೇಶದಲ್ಲಿ ದೇಶದ ಆಂತರಿಕ ವಿಷಯಗಳನ್ನು ಪ್ರಸ್ತಾಪಿಸುವುದು ಮತ್ತು ವಿದೇಶಿ ಹಸ್ತಕ್ಷೇಪವನ್ನು ಬಯಸುವುದು ದೇಶದ ಘನತೆಗೆ ವಿರುದ್ಧವಾದ ನಡೆ ಎಂಬುದು ಮೋದಿ ಮಾತಿನ ಮರ್ಮ. ಮತ್ತೊಂದೆಡೆ ವಿರೋಧ ಪಕ್ಷಗಳು ಇದನ್ನು ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ತಂತ್ರ ಎಂದು ಕಾಣುತ್ತಿವೆ. ಜಾಗತಿಕ ಅಸ್ಥಿರತೆಯ ನಡುವೆ ಭಾರತದ ಇಮೇಜ್ ಬಗ್ಗೆ ನಡೆಯುತ್ತಿರುವ ಈ ಚರ್ಚೆ ಮುಂಬರುವ ದಿನಗಳಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ.