Naval Dockyard 2026: ಐಟಿಐ ಪಾಸಾದ ಅಭ್ಯರ್ಥಿಗಳಿಗೆ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುವ ಸುವರ್ಣ ಅವಕಾಶ ಸಿಕ್ಕಿದೆ. ಕಾರವಾರ ಮತ್ತು ಗೋವಾ ನೌಕಾ ನೆಲೆಗಳಲ್ಲಿ ಒಟ್ಟು 210 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
2027-28ನೇ ಸಾಲಿನ ತರಬೇತಿಗಾಗಿ ಈ ನೇಮಕಾತಿ ನಡೆಯುತ್ತಿದೆ. ಅರ್ಹ ಮತ್ತು ಆಸಕ್ತ ಯುವಕ-ಯುವತಿಯರಿಂದ ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಅರ್ಜಿಗಳನ್ನು ಕೋರಲಾಗಿದೆ.
ಯಾವುದೇ ಅರ್ಜಿ ಶುಲ್ಕವಿಲ್ಲದೆ ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಕೆಳಗಿನಂತಿದೆ.
ಹುದ್ದೆಗಳ ವಿವರ ಹಾಗೂ ಪ್ರಮುಖ ಸ್ಥಳಗಳು
- ಸಂಸ್ಥೆ: ಭಾರತೀಯ ನೌಕಾಪಡೆ (Naval Dockyard)
- ಒಟ್ಟು ಹುದ್ದೆಗಳು: 210 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳು
- ಸ್ಥಳಗಳು: ಕಾರವಾರ ನೇವಲ್ ಬೇಸ್ (180 ಸೀಟುಗಳು) ಹಾಗೂ ಗೋವಾದ ದಾಬೋಲಿಮ್ ನೇವಲ್ ಏರ್ಕ್ರಾಫ್ಟ್ ಯಾರ್ಡ್ (30 ಸೀಟುಗಳು).
- ಪ್ರಮುಖ ಟ್ರೇಡ್ಗಳು: ಫಿಟ್ಟರ್, ಮೆಷಿನಿಸ್ಟ್, ವೆಲ್ಡರ್, ಎಲೆಕ್ಟ್ರಿಷಿಯನ್, ಕಾರ್ಪೆಂಟರ್, ಪ್ಲಂಬರ್ ಮತ್ತು ಮರೈನ್ ಇಂಜಿನ್ ಫಿಟ್ಟರ್.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 9, 2026
ಇದನ್ನು ಓದಿ: Free Online Training 2026: ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಉಚಿತ ಆನ್ಲೈನ್ ಕೋಚಿಂಗ್
ವಿದ್ಯಾರ್ಹತೆ, ವಯೋಮಿತಿ ಮತ್ತು ಸ್ಟೈಫಂಡ್
- ವಿದ್ಯಾರ್ಹತೆ: ಐಟಿಐ ಟ್ರೇಡ್ಗಳಿಗೆ 10ನೇ ತರಗತಿಯೊಂದಿಗೆ ಐಟಿಐ (NCVT/SCVT) ಪಾಸಾಗಿರಬೇಕು. ನಾನ್-ಐಟಿಐಗೆ 10ನೇ ತರಗತಿ ಹಾಗೂ ರಿಗ್ಗರ್ ಹುದ್ದೆಗೆ 8ನೇ ತರಗತಿ ತೇರ್ಗಡೆ ಸಾಕು.
- ವಯೋಮಿತಿ: 12 ಏಪ್ರಿಲ್ 2027ಕ್ಕೆ ಅನ್ವಯವಾಗುವಂತೆ ಕನಿಷ್ಠ 14 ಅಥವಾ 18 ವರ್ಷ ತುಂಬಿರಬೇಕು. ಗರಿಷ್ಠ ವಯೋಮಿತಿ ಇರುವುದಿಲ್ಲ.
- ಸ್ಟೈಫಂಡ್ (ವೇತನ): ಐಟಿಐ ಅಭ್ಯರ್ಥಿಗಳಿಗೆ ತಿಂಗಳಿಗೆ ₹9,600 ಹಾಗೂ ಇತರರಿಗೆ ನಿಯಮಾನುಸಾರ ₹3,400 ರಿಂದ ₹9,020 ಸಿಗಲಿದೆ.
Naval Dockyard 2026: ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಕೆ ವಿಧಾನ
- ಆಯ್ಕೆ ಹಂತಗಳು: ಮೆರಿಟ್ ಪಟ್ಟಿ, 100 ಅಂಕಗಳ ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಹಾಗೂ ವೈದ್ಯಕೀಯ ತಪಾಸಣೆ.
- ಅರ್ಜಿ ಸಲ್ಲಿಕೆ: ಮೊದಲು Apprenticeship India ಪೋರ್ಟಲ್ನಲ್ಲಿ ಆನ್ಲೈನ್ ಅರ್ಜಿ ಸಲ್ಲಿಸಿ. ಬಳಿಕ ಪ್ರಿಂಟ್ ತೆಗೆದುಕೊಂಡು ಅಗತ್ಯ ದಾಖಲೆಗಳೊಂದಿಗೆ “ದಿ ಆಫೀಸರ್ ಇನ್ ಚಾರ್ಜ್, ಡಾಕ್ ಯಾರ್ಡ್ ಅಪ್ರೆಂಟಿಸ್ ಸ್ಕೂಲ್, ನೇವಲ್ ಡಾಕ್ ಯಾರ್ಡ್, ನೇವಲ್ ಬೇಸ್, ಕಾರವಾರ, ಕರ್ನಾಟಕ – 581308” ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಬೇಕು.




