☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

KEA UGNEET 2026: ಮೆಡಿಕಲ್, ಡೆಂಟಲ್ 3ನೇ ಸುತ್ತಿನ ಫಲಿತಾಂಶ ಪ್ರಕಟ

KEA UGNEET 2026: Medical & Dental Round 3 Final Results Declared

KEA UGNEET 2026: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ನೀಡಿದೆ. UGNEET 3ನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕೆಇಎ ಅಧಿಕೃತವಾಗಿ ಪ್ರಕಟಿಸಿದೆ. ಸೀಟು ಪಡೆದ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕಾಗಿದೆ.

ಪ್ರವೇಶ ಪ್ರಕ್ರಿಯೆಗೆ ಅಕ್ಟೋಬರ್ 11 ಕೊನೆ ದಿನ

ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ದಿನಾಂಕ ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳು ಅಕ್ಟೋಬರ್ 10ರೊಳಗೆ ನಿಗದಿತ ಶುಲ್ಕವನ್ನು ಪಾವತಿಸಬೇಕಾಗಿದೆ. ಅದರ ನಂತರ ಅಕ್ಟೋಬರ್ 11ರ ಒಳಗಾಗಿ ತಮಗೆ ಹಂಚಿಕೆಯಾಗಿರುವ ಕಾಲೇಜುಗಳಿಗೆ ಭೇಟಿ ನೀಡಿ ಪ್ರವೇಶ ಪಡೆಯಬೇಕು.

ಶುಲ್ಕ ಮತ್ತು ಕಾಷನ್ ಡೆಪಾಸಿಟ್ ಹೊಂದಾಣಿಕೆ

ಈ ಹಿಂದೆ ನಡೆಸಿದ ಸುತ್ತುಗಳಲ್ಲಿ ಅಭ್ಯರ್ಥಿಗಳು ಪಾವತಿಸಿದ್ದ ಶುಲ್ಕವನ್ನು ಈ ಸುತ್ತಿಗೆ ಹೊಂದಾಣಿಕೆ ಮಾಡಲಾಗುತ್ತದೆ. ಹಿಂದಿನ ಹಂತದಲ್ಲಿ ಪಾವತಿಸಿದ ಶುಲ್ಕ ಮತ್ತು ಕಾಷನ್ ಡೆಪಾಸಿಟ್ ಅನ್ನು 3ನೇ ಸುತ್ತಿನ ಅಂತಿಮ ಶುಲ್ಕಕ್ಕೆ ಕೆಇಎ ಸರಿದೂಗಿಸಲಿದೆ.

ಮೂಲ ದಾಖಲೆಗಳ ಪರಿಶೀಲನೆ ಕಡ್ಡಾಯ

ಅಭ್ಯರ್ಥಿಗಳು ಮೊದಲು ಕೆಇಎ ವೆಬ್‌ಸೈಟ್‌ನಿಂದ ಸೀಟು ಖಾತರಿ ಚೀಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಅದರ ನಂತರ ತಮ್ಮ ಎಲ್ಲಾ ಮೂಲ ದಾಖಲೆಗಳನ್ನು ತೆಗೆದುಕೊಂಡು ಕಾಲೇಜಿಗೆ ಹೋಗಬೇಕು. ಅಲ್ಲಿ ದಾಖಲೆ ಪರಿಶೀಲನೆ ನಡೆಸಿ ಪ್ರವೇಶ ಖಚಿತಪಡಿಸಿಕೊಳ್ಳಬೇಕು.

KEA UGNEET 2026: ಮೆಡಿಕಲ್ ಹಾಗೂ ಡೆಂಟಲ್ ಸೀಟುಗಳ ವಿವರ

ರಾಜ್ಯದಲ್ಲಿ ಒಟ್ಟು 12,010 ವೈದ್ಯಕೀಯ ಸೀಟುಗಳು ಲಭ್ಯವಿದ್ದವು. ಇವುಗಳಲ್ಲಿ ಇದುವರೆಗೆ 11,354 ಸೀಟುಗಳು ಹಂಚಿಕೆಯಾಗಿವೆ. ಇನ್ನೂ 656 ಮೆಡಿಕಲ್ ಸೀಟುಗಳು ಖಾಲಿ ಉಳಿದಿವೆ. ಆದರೆ ದಂತ ವೈದ್ಯಕೀಯ ಕೋರ್ಸ್‌ನ ಎಲ್ಲಾ 2,689 ಸೀಟುಗಳು ಸಂಪೂರ್ಣವಾಗಿ ಹಂಚಿಕೆಯಾಗಿವೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಐಎಎಸ್ ತಿಳಿಸಿದ್ದಾರೆ.