Daily Horoscope: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಕೃಷ್ಣ ಪಕ್ಷದ ದ್ವಾದಶೀ ತಿಥಿಯ ಮಂಗಳವಾರದ ಈ ದಿನ ಕೃಷಿಯಲ್ಲಿ ಪ್ರಗತಿ, ನೌಕರರಿಗೆ ಭಡ್ತಿ ಹಾಗೂ ಆಪ್ತರಿಂದ ಭರವಸೆಯ ಮಾತುಗಳು ಸಿಗಲಿವೆ. ರೋಗಬಾಧೆ, ಅಸಹಿಷ್ಣುತೆ ಮತ್ತು ಆಪ್ತರಿಂದ ಅಶುಭವಾರ್ತೆ ಕೇಳುವ ಸಾಧ್ಯತೆಯೂ ಇರುವುದರಿಂದ ಜಾಗರೂಕರಾಗಿರುವುದು ಒಳಿತು.
ಇಂದಿನ ಚಾಂದ್ರಮಾನ ಭಾದ್ರಪದ, ಸೌರಮಾನ ಕನ್ಯಾ ಮಾಸ, ಹಸ್ತಾ ಮಹಾನಕ್ಷತ್ರ ಹಾಗೂ ಮಘಾ ನಿತ್ಯನಕ್ಷತ್ರಗಳ ಶುಭ ಸಂಯೋಗವಿದೆ. ಸಾಧ್ಯ ಯೋಗ ಮತ್ತು ಬಾಲವ ಕರಣವಿದ್ದು, ಸೂರ್ಯೋದಯ ಬೆಳಿಗ್ಗೆ 06:10ಕ್ಕೆ ಹಾಗೂ ಸೂರ್ಯಾಸ್ತ ಸಂಜೆ 06:04ಕ್ಕೆ ಆಗಲಿದೆ.
ಇಂದಿನ ಶುಭಾಶುಭ ಕಾಲಗಳನ್ನು ಗಮನಿಸುವುದಾದರೆ, ಮಧ್ಯಾಹ್ನ 12:17 ರಿಂದ 01:37 ರವರೆಗೆ ರಾಹು ಕಾಲವಿರುತ್ತದೆ. ಯಮಗಂಡ ಕಾಲ ಬೆಳಿಗ್ಗೆ 07:39 ರಿಂದ 09:09 ಹಾಗೂ ಗುಳಿಕ ಕಾಲ ಬೆಳಿಗ್ಗೆ 10:38 ರಿಂದ 12:07 ರವರೆಗೆ ಇರಲಿದೆ.
ಮೇಷ ರಾಶಿ
ಹಣಕಾಸಿನ ವಿಚಾರದಲ್ಲಿ ಎಷ್ಟೇ ಎಚ್ಚರದಿಂದಿದ್ದರೂ ವೆಚ್ಚ ಹೆಚ್ಚಾಗಬಹುದು. ಆಸ್ತಿ ಹಂಚಿಕೆ ವಿವಾದ ಇತ್ಯರ್ಥವಾಗಲಿದೆ. ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳುವ ಅವಕಾಶ ಸಿಗಲಿದೆ. ಹಣಕಾಸಿನ ವ್ಯವಹಾರವನ್ನು ತಕ್ಷಣ ಬಗೆಹರಿಸಿಕೊಳ್ಳಿ. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಇರಲಿದೆ.
ವೃಷಭ ರಾಶಿ
ಹಳೆಯ ಗೆಳೆಯರಿದ್ದರೂ ಸಂಪೂರ್ಣ ಮನಸ್ಸು ಹಂಚಿಕೊಳ್ಳಲು ಆಗದು. ವಿವಿಧ ಮೂಲಗಳಿಂದ ಆದಾಯ ಹರಿದುಬರಲಿದೆ. ಸಾಲದ ಹಣ ಕೈಸೇರಲಿದ್ದು, ವಿದೇಶಿ ವ್ಯವಹಾರದಲ್ಲಿ ಲಾಭವಾಗಲಿದೆ. ಸಾಹಸದ ಕೆಲಸಗಳಲ್ಲಿ ಎಚ್ಚರ ಅಗತ್ಯ. ಆಪ್ತರಿಂದ ಆಸ್ತಿ ಅಥವಾ ಸಂಪತ್ತು ಸಿಗಲಿದೆ.
ಮಿಥುನ ರಾಶಿ
ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಯಾಣ ಬೆಳೆಸಬೇಕಾಗಬಹುದು. ಮಹಿಳೆಯರಿಗೆ ಸಣ್ಣಪುಟ್ಟ ತೊಂದರೆಗಳು ಎದುರಾಗಬಹುದು. ಅನಾರೋಗ್ಯದ ಕಾರಣ ಉತ್ಸಾಹ ಕಡಿಮೆಯಾಗಲಿದೆ. ಆದಾಯವಿದ್ದರೂ ಖರ್ಚು ಹೆಚ್ಚಿರಲಿದೆ. ದೀರ್ಘ ದಿನಗಳ ನಂತರ ಸಂಗಾತಿಯೊಂದಿಗೆ ಸೌಹಾರ್ದಯುತ ಮಾತುಕತೆ ನಡೆಯಲಿದೆ.
ಕರ್ಕಾಟಕ ರಾಶಿ
ಅನಗತ್ಯ ಅಲೆದಾಟದಿಂದ ಬೇಸರ ಉಂಟಾಗಬಹುದು. ಕೆಲಸಗಳನ್ನು ಮುಂದೂಡುವಿರಿ. ಲಾಭದಾಯಕ ಕೆಲಸಗಳಿಗೆ ಮಾತ್ರ ಆದ್ಯತೆ ನೀಡುವಿರಿ. ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ಶುಭ ಸುದ್ದಿ ಬರಲಿದೆ. ವೃತ್ತಿಜೀವನಕ್ಕೆ ಮುಖ್ಯವಾದವರಿಂದ ಕೊಂಚ ಕಿರಿಕಿರಿ ಅನುಭವಿಸುವಿರಿ.
ಸಿಂಹ ರಾಶಿ
ಅವಿವಾಹಿತರಿಗೆ ವಿವಾಹದ ಚಿಂತೆ ಹೆಚ್ಚಾಗಲಿದೆ. ಪಿತ್ರಾರ್ಜಿತ ಆಸ್ತಿಯ ಬಗ್ಗೆ ಆಸಕ್ತಿ ಮೂಡಲಿದೆ. ಬಹುದಿನಗಳ ಕನಸಿನ ಕೆಲಸ ಸಫಲವಾಗಲಿದೆ. ಅಧಿಕಾರ ದುರುಪಯೋಗ ಮಾಡಿಕೊಳ್ಳಬೇಡಿ; ನೌಕರರು ಎದುರುಬೀಳಬಹುದು. ವಾತಾವರಣ ಸದಾ ನಿಮ್ಮ ಪರವಾಗಿ ಇರಲಾರದು.
ಕನ್ಯಾ ರಾಶಿ
ಇಂದು ಅನಿವಾರ್ಯವಾಗಿ ಅನ್ಯಸ್ಥಳದಲ್ಲಿ ವಾಸಿಸಬೇಕಾಗಬಹುದು. ಭೂ ವ್ಯವಹಾರಗಳನ್ನು ಕಾನೂನುಬದ್ಧವಾಗಿ ಮಾಡಿ. ಉಳಿತಾಯದ ಕಡೆ ಗಮನ ನೀಡುವುದು ಒಳಿತು. ನಿಮ್ಮ ನಂಬಿಕೆಯನ್ನು ಸಮರ್ಥಿಸಿಕೊಳ್ಳುವಿರಿ.
ತುಲಾ ರಾಶಿ
ಹೊಸ ತಂತ್ರಗಳನ್ನು ರೂಪಿಸಿಕೊಳ್ಳುವಿರಿ. ಮಾತು ಬದಲಿಸುವ ಜನರಿಂದ ದೂರವಿರಿ. ದಾಂಪತ್ಯದಲ್ಲಿ ಸಣ್ಣಪುಟ್ಟ ವಿರಸಗಳು ಬರಬಹುದು. ನೇರ ಮಾತು ಇತರರಿಗೆ ಬೇಸರ ತರಬಹುದು. ಮಕ್ಕಳ ವಿಚಾರದಲ್ಲಿ ವರ್ತನೆ ಸರಿಯಾಗಿರಲಿ. ಅಧಿಕಾರಿಗಳನ್ನು ಮೆಚ್ಚಿಸಲು ಸಮಯ ವ್ಯರ್ಥ ಮಾಡಬೇಡಿ.
ವೃಶ್ಚಿಕ ರಾಶಿ
ಅತಿಯಾದ ನಂಬಿಕೆಯಿಂದ ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಮನೆಯಲ್ಲಿ ಅಶಾಂತಿಯ ವಾತಾವರಣ ಇರಲಿದೆ. ನಿಮ್ಮ ವ್ಯವಹಾರದಲ್ಲಿ ಇತರರ ಹಸ್ತಕ್ಷೇಪ ಹೆಚ್ಚಾಗಬಹುದು. ಇಟ್ಟುಕೊಳ್ಳಲು ನೀಡಿದ ಹಣ ಕೈಸೇರುವುದು ಕಷ್ಟ. ಆತ್ಮವಿಶ್ವಾಸವನ್ನು ಸರಿಯಾಗಿ ಬಳಸಿ.
ಧನು ರಾಶಿ
ಯಾರ ಮೇಲೆಯೂ ಹಠ ಸಾಧಿಸುವುದು ಬೇಡ. ನಿಮ್ಮ ಮಾತಿಗೆ ವಿರೋಧ ವ್ಯಕ್ತವಾಗಬಹುದು, ಎಚ್ಚರದಿಂದಿರಿ. ಸ್ಪಷ್ಟ ಮಾತುಗಳಿಂದ ಉತ್ತಮ ಉದ್ಯೋಗ ಸಿಗಲಿದೆ. ಆರ್ಥಿಕ ನಷ್ಟ ಸರಿದೂಗಿಸಲು ಪರ್ಯಾಯ ಮಾರ್ಗ ಹುಡುಕುವಿರಿ.
ಮಕರ ರಾಶಿ
ಅತಿಯಾದ ಆಲೋಚನೆಯಿಂದ ಮನಸ್ಸು ದುರ್ಬಲವಾಗಬಹುದು. ಸ್ವಂತ ಉದ್ಯೋಗದಲ್ಲಿ ಕೆಲವು ಕಹಿ ಅನುಭವಗಳು ಎದುರಾಗಲಿವೆ. ಕಚೇರಿಯಲ್ಲಿ ನಿಮ್ಮ ಸಾಧನೆಗೆ ಸೂಕ್ತ ಮೆಚ್ಚುಗೆ ಸಿಗಲಿದೆ. ಹೊಸ ವಸ್ತುಗಳ ಖರೀದಿಗೆ ಮನಸ್ಸು ಮಾಡುವಿರಿ.
ಕುಂಭ ರಾಶಿ
ಆಪ್ತರ ಒಡನಾಟ ಹೆಚ್ಚಾಗಲಿದೆ. ಕೆಲಸದಲ್ಲಿ ಸಹೋದ್ಯೋಗಿಗಳ ನೆರವು ಪಡೆಯುವಿರಿ. ದಿನವನ್ನು ಆನಂದದಿಂದ ಕಳೆಯಲು ಬಯಸುವಿರಿ. ಅನಿರೀಕ್ಷಿತ ಪ್ರಯಾಣ ಎದುರಾಗಬಹುದು. ಸರಿಯಾದ ಸಮಯಕ್ಕೆ ಹಣ ಕೈಸೇರಿ ಸಂತೋಷ ತರಲಿದೆ.
ಮೀನ ರಾಶಿ (Daily Horoscope)
ಮನೆಯಲ್ಲಿ ಕೊಂಚ ನಿರಾಸೆಯ ಅನುಭವವಾಗಬಹುದು. ಆಲಸ್ಯದಿಂದ ಕೆಲಸ ಕಾರ್ಯಗಳು ವಿಳಂಬವಾಗಲಿವೆ. ಕೃಷಿಕರಿಗೆ ಉತ್ತಮ ಪ್ರಗತಿ ಕಾದಿದೆ. ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಭಾಗವಹಿಸುವಿರಿ. ಹಳೆಯ ದಿನಗಳನ್ನು ನೆನಪಿಸಿಕೊಂಡು ಸಂತಸಪಡುವಿರಿ.




