ಸ್ನಾತಕೋತ್ತರ ದಂತ ವೈದ್ಯಕೀಯ (MDS-26) ಕೋರ್ಸ್ಗಳ ಪ್ರವೇಶಾತಿಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಮಾಹಿತಿಯೊಂದನ್ನು ನೀಡಿದೆ.
ಎರಡನೇ ಸುತ್ತಿನ ಸೀಟು ಹಂಚಿಕೆಯ ಅಧಿಕೃತ ವೇಳಾಪಟ್ಟಿಯನ್ನು ಕೆಇಎ (KEA MDS 2026) ಈಗ ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗಿದೆ.
ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ಐಎಎಸ್ ಅವರು ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.
ಕಾಷನ್ ಡೆಪಾಸಿಟ್ ಪಾವತಿ ನಿಯಮಗಳು
- ಮೊದಲ ಸುತ್ತಿನಲ್ಲಿ ಚಾಯ್ಸ್-3 ಆಯ್ಕೆ ಮಾಡಿದ ಅಭ್ಯರ್ಥಿಗಳು ಎರಡನೇ ಸುತ್ತಿಗೆ ಅರ್ಹತೆ ಪಡೆಯಲು ಕಾಷನ್ ಡೆಪಾಸಿಟ್ (Caution Deposit) ಪಾವತಿಸುವುದು ಕಡ್ಡಾಯ.
- ಸಾಮಾನ್ಯ ಅಭ್ಯರ್ಥಿಗಳು ₹1,00,000 ಹಾಗೂ SC/ST ಅಭ್ಯರ್ಥಿಗಳು ₹50,000 ಡೆಪಾಸಿಟ್ ನೀಡಬೇಕು.
- ಈ ಹಣವನ್ನು ಸೆಪ್ಟೆಂಬರ್ 19 ರಿಂದ 22 ರೊಳಗೆ ಪಾವತಿಸಬೇಕಾಗುತ್ತದೆ.
- ಡೆಪಾಸಿಟ್ ಹಣ ಪಾವತಿಸಿದ ನಂತರವೇ ಆಪ್ಷನ್ಸ್ ದಾಖಲಿಸಲು ಅವಕಾಶ ಸಿಗಲಿದೆ.
- ಮೊದಲ ಸುತ್ತಿನಲ್ಲಿ ಚಾಯ್ಸ್-2 ಆಯ್ಕೆ ಮಾಡಿ ಈಗಾಗಲೇ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳು ಕಾಷನ್ ಡೆಪಾಸಿಟ್ ಪಾವತಿಸುವ ಅಗತ್ಯವಿಲ್ಲ.
- ಸೀಟು ಹಂಚಿಕೆಯಾದಲ್ಲಿ ಅಭ್ಯರ್ಥಿ ಪಾವತಿಸಿದ ಕಾಷನ್ ಡೆಪಾಸಿಟ್ ಅನ್ನು ಕಾಲೇಜು ಶುಲ್ಕಕ್ಕೆ ಹೊಂದಾಣಿಕೆ ಮಾಡಲಾಗುತ್ತದೆ.
ಇದನ್ನು ಓದಿ: ನೀಟ್ ಎಂಡಿಎಸ್ ಮೊದಲ ಸುತ್ತಿನ ಫಲಿತಾಂಶ ಪ್ರಕಟ; ಕೆಇಎಯಿಂದ ಅಧಿಕೃತ ಮಾಹಿತಿ
ಸೀಟ್ ಮ್ಯಾಟ್ರಿಕ್ಸ್ ಮತ್ತು ಆಪ್ಷನ್ ಎಂಟ್ರಿ ದಿನಾಂಕ
- ಸೆಪ್ಟೆಂಬರ್ 19: ಬೆಳಿಗ್ಗೆ 11 ಗಂಟೆಗೆ ಎರಡನೇ ಸುತ್ತಿನ ಸೀಟ್ ಮ್ಯಾಟ್ರಿಕ್ಸ್ ಪ್ರಕಟವಾಗಲಿದೆ.
- ಸೆಪ್ಟೆಂಬರ್ 19 ರಿಂದ 23: ಅಭ್ಯರ್ಥಿಗಳು ತಮ್ಮ ಆಪ್ಷನ್ಗಳನ್ನು ಬದಲಿಸಲು, ಅಳಿಸಲು ಅಥವಾ ಮಾರ್ಪಡಿಸಲು ಅವಕಾಶ ನೀಡಲಾಗಿದೆ.
ಫಲಿತಾಂಶ ಮತ್ತು ಕಾಲೇಜು ಪ್ರವೇಶಾತಿ ಸಮಯ
- ಸೆಪ್ಟೆಂಬರ್ 23: ಸಂಜೆ 4 ಗಂಟೆಗೆ ತಾತ್ಕಾಲಿಕ ಫಲಿತಾಂಶ ಹೊರಬರಲಿದೆ.
- ಸೆಪ್ಟೆಂಬರ್ 24: ಬೆಳಿಗ್ಗೆ 10 ಗಂಟೆಗೆ ಅಂತಿಮ ಫಲಿತಾಂಶ ಪ್ರಕಟವಾಗಲಿದೆ.
- ಸೆಪ್ಟೆಂಬರ್ 24 ರಿಂದ 28: ಚಲನ್ ಡೌನ್ಲೋಡ್ ಮಾಡಿಕೊಂಡು ನಿಗದಿತ ಶುಲ್ಕ ಪಾವತಿಸಬೇಕು.
- ಇದೇ ಅವಧಿಯಲ್ಲಿ (ಸೆ. 24 – 28) ಮೂಲ ದಾಖಲೆಗಳನ್ನು ಕೆಇಎ (KEA) ಕಚೇರಿಯಲ್ಲಿ ಖುದ್ದು ಹಾಜರಾಗಿ ಸಲ್ಲಿಸಬೇಕು.
- ಸೆಪ್ಟೆಂಬರ್ 29: ಅಭ್ಯರ್ಥಿಗಳು ಪ್ರವೇಶ ಆದೇಶ (Admission Order) ಡೌನ್ಲೋಡ್ ಮಾಡಿಕೊಂಡು, ಸಂಬಂಧಪಟ್ಟ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಲು ಕೊನೆಯ ದಿನವಾಗಿದೆ.




