TOXIC MOVIE: ‘ಯಶ್ ಜೊತೆ ತಂಗಿ ಪಾತ್ರ ಮಾಡಲ್ಲ’; ‘ಟಾಕ್ಸಿಕ್’ ಆಫರ್ ರಿಜೆಕ್ಟ್ ಮಾಡಿದ್ಯಾಕೆ ಬಾಲಿವುಡ್ ನಟಿ?

'ಟಾಕ್ಸಿಕ್' ಆಫರ್ ರಿಜೆಕ್ಟ್ ಮಾಡಿದ್ಯಾಕೆ ಬಾಲಿವುಡ್ ನಟಿ?

Phot Credits: @kareenakapoorkhan (Instagram)

                        @nseries_music (Instagram)

‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಮತ್ತು ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ ವಿಶ್ವಾದ್ಯಂತ ಧೂಳೆಬ್ಬಿಸುತ್ತಿದೆ. ಈ ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ ಹಾಗೂ ರುಕ್ಮಿಣಿ ವಸಂತ್ ಸೇರಿದಂತೆ ಬರೋಬ್ಬರಿ ಐವರು ಖ್ಯಾತ ನಟಿಯರು ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ತಂದೆ-ಮಗನ ಸೆಂಟಿಮೆಂಟ್ ಜೊತೆಗೆ ಅಕ್ಕ-ತಮ್ಮನ ಬಾಂಧವ್ಯವೂ ಕಥೆಯ ಬಹುಮುಖ್ಯ ಭಾಗವಾಗಿದೆ. ಯಶ್ ನಟನೆಯ ರಾಯ ಪಾತ್ರದ ಸಹೋದರಿ ‘ಗಂಗಾ’ ಆಗಿ ಲೇಡಿ ಸೂಪರ್‌ಸ್ಟಾರ್ ನಯನತಾರಾ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಆದರೆ ಈ ಗಂಭೀರ ಪಾತ್ರಕ್ಕೆ ನಯನತಾರಾಗಿಂತ ಮೊದಲು ಆಯ್ಕೆಯಾಗಿದ್ದು ಬಾಲಿವುಡ್ ನಟಿ ಕರೀನಾ ಕಪೂರ್. ಅವರು ಕೊನೆ ಕ್ಷಣದಲ್ಲಿ ಈ ಬಹುಕೋಟಿ ಪ್ರಾಜೆಕ್ಟ್‌ನಿಂದ ಹೊರನಡೆದಿದ್ದು ಸಿನಿವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು.

ಯಶ್ ಎದುರು ‘ಸಹೋದರಿ’ ಪಾತ್ರಕ್ಕೆ ಕರೀನಾ ನೋ ಅಂದಿದ್ದೇಕೆ?

ಗೀತು ಮೋಹನ್‌ದಾಸ್ ಅವರು ಮೊದಲು ‘ಗಂಗಾ’ ಪಾತ್ರಕ್ಕಾಗಿ ಕರೀನಾ ಕಪೂರ್ ಅವರನ್ನೇ ಸಂಪರ್ಕಿಸಿದ್ದರು. ಕರೀನಾ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಸ್ವತಃ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.

ಆದರೆ ಪ್ಯಾನ್-ಇಂಡಿಯಾ ಸ್ಟಾರ್ ಯಶ್ ಎದುರು ಸಹೋದರಿ ಪಾತ್ರದಲ್ಲಿ ನಟಿಸಲು ಕರೀನಾ ಅವರಿಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. “ಯಶ್ ಜೊತೆ ನಟಿಸುವುದಾದರೆ ನಾಯಕಿಯಾಗಿಯೇ ನಟಿಸುತ್ತೇನೆ, ತಂಗಿ ಪಾತ್ರ ಮಾಡುವುದಿಲ್ಲ” ಎಂದು ಸ್ಪಷ್ಟಪಡಿಸಿ ಅವರು ಪ್ರಾಜೆಕ್ಟ್‌ನಿಂದ ಹಿಂದೆ ಸರಿದರು.

ಈ ನಿರ್ಧಾರದ ನಂತರ ಕರೀನಾ ಕಪೂರ್ ಇಂತಹ ಗಟ್ಟಿಯಾದ ಪಾತ್ರವನ್ನು ಕಳೆದುಕೊಂಡರು ಎಂಬ ಮಾತುಗಳು ಇದೀಗ ಗಾಂಧಿನಗರದಲ್ಲಿ ಕೇಳಿಬರುತ್ತಿವೆ.

ಕರೀನಾ ಬೇಡ ಅಂದಿದ್ದಕ್ಕೆ ಅಖಾಡಕ್ಕಿಳಿದ ನಯನತಾರಾ

ಕರೀನಾ ಹೊರನಡೆದ ನಂತರ ಚಿತ್ರತಂಡ ನಯನತಾರಾ ಅವರನ್ನು ಸಂಪರ್ಕಿಸಿತು. ಆರಂಭದಲ್ಲಿ ನಯನತಾರಾ ಕೂಡ ಸಹೋದರಿಯ ಪಾತ್ರವೆಂಬ ಕಾರಣಕ್ಕೆ ಕೊಂಚ ಹಿಂಜರಿದಿದ್ದರು.

ಆದರೆ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ‘ಗಂಗಾ’ ಪಾತ್ರದ ತೀವ್ರತೆ ಹಾಗೂ ಕಥೆಗೆ ಆ ಪಾತ್ರವೇ ಹೇಗೆ ಬೆನ್ನೆಲುಬಾಗಿದೆ ಎಂಬುದನ್ನು ವಿವರಿಸಿದರು. ಕಥೆಯ ಗಟ್ಟಿತನವನ್ನು ಅರಿತ ನಯನತಾರಾ ತಕ್ಷಣವೇ ಗ್ರೀನ್ ಸಿಗ್ನಲ್ ನೀಡಿದರು.

ಇದೀಗ ಚಿತ್ರ ಬಿಡುಗಡೆಯಾಗಿದ್ದು, ನಯನತಾರಾ ಅವರ ಆಕ್ಷನ್ ಮತ್ತು ಎಮೋಷನಲ್ ಅಭಿನಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಯಶ್ ದ್ವಿಪಾತ್ರದ ಎದುರು ಕಮಾಲ್ ಮಾಡಿದ ಲೇಡಿ ಸೂಪರ್‌ಸ್ಟಾರ್

ಚಿತ್ರದಲ್ಲಿ ಯಶ್ ‘ರಾಯ’ ಮತ್ತು ಆತನ ಮಗ ‘ರೂಮಿ’ ಎಂಬ ದ್ವಿಪಾತ್ರದಲ್ಲಿ ಕಾಣಿಸಿಕೊಂಡು ಧಮಾಕಾ ಸೃಷ್ಟಿಸಿದ್ದಾರೆ. ಅವರ ಎದುರು ನಯನತಾರಾ ಅವರ ನಟನೆ ಅತ್ಯಂತ ಪರ್ಫೆಕ್ಟ್ ಆಗಿ ಸೆಟ್ ಆಗಿದೆ.

ಕರೀನಾ ಬಿಟ್ಟ ಈ ಬಿಗ್ ಆಫರ್ ನಯನತಾರಾ ಪಾಲಿಗೆ ದೊಡ್ಡ ಮೈಲೇಜ್ ತಂದುಕೊಟ್ಟಿದೆ. ಪ್ರೇಕ್ಷಕರು ಕೂಡ ಕರೀನಾ ಬದಲು ನಯನತಾರಾ ಅವರೇ ಈ ಪಾತ್ರಕ್ಕೆ ಬೆಸ್ಟ್ ಚಾಯ್ಸ್ ಎಂದು ಕೊಂಡಾಡುತ್ತಿದ್ದಾರೆ.