Toxic Twitter Review: 4 ವರ್ಷದ ಬಳಿಕ ಥಿಯೇಟರ್‌ ಯಶ್ ಎಂಟ್ರಿ; ಟ್ವಿಟರ್‌ನಲ್ಲಿ ‘ಟಾಕ್ಸಿಕ್’ ವಿಮರ್ಶೆ ಹೇಗಿದೆ?

Yash, Kiara Advani, Nayanthara starrer Toxic movie twitter review

Toxic Twitter Review: ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಇಂದು (ಆಗಸ್ಟ್ 26) ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಫಸ್ಟ್ ಡೇ ಫಸ್ಟ್ ಶೋ ಸಿನಿಮಾವನ್ನು ಕಣ್ತುಂಬಿ ಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದ ಅಭಿಮಾನಿಗಳು ಬೆಳಗ್ಗೆ ಆರು ಗಂಟೆಯಿಂದಲೇ ಚಿತ್ರಮಂದಿರಕ್ಕೆ ಸಾಕಷ್ಟು ನಿರೀಕ್ಷೆಯೊಂದಿಗೆ ನುಗ್ಗಿದ್ದಾರೆ. ‘ಕೆಜಿಎಫ್ 2’ ಅಂತಹ ಮೆಗಾ ಬ್ಲಾಕ್ ಬಸ್ಟ್ ನೀಡಿದ ಬಳಿಕ ರಿಲೀಸ್ ಆಗುತ್ತಿರುವ ಸಿನಿಮಾವಿದು.

ಮಲಯಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಆಕ್ಷನ್ ಕಟ್ ಹೇಳಿದ್ದು ಬಿಡುಗಡೆಗೂ ಮುನ್ನ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಾಕಿತ್ತು. ಯಶ್ ಜೊತೆ ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ ಹಾಗೂ ಹುಮಾ ಖುರೇಶಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಸಿನಿಮಾದ ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್‌ನಿಂದ ಕುತೂಹಲವನ್ನು ಕೆರಳಿಸಿತ್ತು. ಅದ್ದೂರಿ ವಿಜ್ಯೂವಲ್ಸ್‌ ಗಮನ ಸೆಳೆದಿತ್ತು.

‘ಟಾಕ್ಸಿಕ್’ ಅಡ್ವಾನ್ಸ್ ಬುಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಬುಕ್‌ ಮೈ ಶೋನಲ್ಲಿ ಲಕ್ಷಗಳ ಲೆಕ್ಕದಲ್ಲಿ ಟಿಕೆಟ್‌ಗಳು ಸೇಲ್ ಆಗಿದ್ದವು. ‘ಟಾಕ್ಸಿಕ್’ ಮೊದಲ ದಿನದ ಕಲೆಕ್ಷನ್‌ ಬಗ್ಗೆ ಲೆಕ್ಕಾಚಾರ ಕೂಡ ಹಾಕಲಾಗಿತ್ತು. ಮೊದಲ ವಿಶ್ವದಾದ್ಯಂತ ಸುಮಾರು 100 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ. ಈ ಬೆನ್ನಲ್ಲೇ ಈಗಾಗಲೇ ಬೆಳಗ್ಗೆ 6 ಗಂಟೆಯಿಂದ ಆರಂಭ ಆಗಿರುವ ಫ್ಯಾನ್ ಶೋ ವೀಕ್ಷಿಸಿ ಟ್ವಿಟರ್‌ನಲ್ಲಿ (ಎಕ್ಸ್‌) ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರಿಗೆ ‘ಟಾಕ್ಸಿಕ್’ ಕಿಕ್ ಕೊಟ್ಟಿದ್ದರೆ, ಮತ್ತೆ ಕೆಲವರಿಗೆ ಈ ಸಿನಿಮಾ ಟಾರ್ಚರ್ ಅಂತ ಅನಿಸಿದೆ. ಒಟ್ನಲ್ಲಿ ಫಸ್ಟ್ ಡೇ ಫಸ್ಟ್ ಶೋ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ಟಾಕ್ಸಿಕ್‌’ನಲ್ಲಿ ಯಶ್ ಅದ್ಭುತ

“ನಿರೀಕ್ಷೆ ಮಾಡಿದಷ್ಟು ಕೆಟ್ಟದಾಗಿ ಇಲ್ಲ. ಚಿತ್ರಕಥೆಯಲ್ಲಿ ಗೊಂದಲವಿದೆ. ಆದರೆ, ಅದ್ಭುತ ವಿಜ್ಯೂವಲ್ಸ್, ತೆರೆಮೇಲೆ ಯಶ್ ಕಾಣಿಸಿಕೊಂಡ ರೀತಿ ಜನರನ್ನು ಎಂಗೇಜಿಂಗ್ ಆಗಿ ಇಡುತ್ತೆ. ಯಶ್ ಹಾಗೂ ಕಿಯಾರಾ ಅಡ್ವಾಣಿ ದೃಶ್ಯಗಳು ಚೆನ್ನಾಗಿವೆ. ಇಂಟರ್‌ವಲ್ ಫಸ್ಟ್‌ ಹಾಫ್‌ಗೆ ಬೂಸ್ಟ್ ಕೊಟ್ಟಿದೆ. ಹಿನ್ನೆಲೆ ಸಂಗೀತ ಹಾಗೂ ಕೆಲವು ಆಕ್ಷನ್ ದೃಶ್ಯಗಳು ಇನ್ನಷ್ಟು ಅದ್ಭುತವಾಗಿ ಇರಬೇಕಿತ್ತು. ಒಟ್ಟಿನಲ್ಲಿ ಮೊದಲಾರ್ದ ಒಕೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಟಾಕ್ಸಿಕ್’ ನಿರಾಸೆ ಮೂಡಿಸಿದೆ

“ಅದ್ಭುತ ವಿಜ್ಯೂವಲ್ಸ್ ಮತ್ತು ನಿರ್ಮಾಣ. ಆದರೆ, ಸಿನಿಮಾದ ಚಿತ್ರಕಥೆ, ವೇಗ ಹಾಗೂ ಭಾವನೆಗಳು ವೀಕ್ ಆಗಿವೆ. ಸಿನಿಮಾದಲ್ಲಿ ಯಶ್ ಅದ್ಭುತವಾಗಿ ಕಾಣಿಸುತ್ತಾರೆ. ಆದರೆ, ಬರವಣಿಗೆಯಲ್ಲಿ ಸೋತಿದ್ದಾರೆ. ಕಥಾವಸ್ತುವಿಗಿಂತ ಸ್ಟೈಲ್ ಮೇಲುಗೈ ಸಾಧಿಸಿದೆ. 2026ರ ಅತ್ಯಂತ ನಿರಾಸೆ ಮಾಡಿದ ಸಿನಿಮಾಗಳಲ್ಲಿ ಒಂದು.” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

ರಾಯನ ಲುಕ್‌ಗೆ ಚಪ್ಪಳೆ ತಟ್ಟಬೇಕು

“ರಾಯನ ಲುಕ್ ಅನ್ನು ಯಾರು ಡಿಸೈನ್ ಮಾಡಿದ್ದಾರೋ ಅವರಿಗೆ ಚಪ್ಪಾಳೆ ತಟ್ಟಲೇ ಬೇಕು. ಪ್ರತಿಯೊಂದು ಪ್ರೇಮ್‌ನಲ್ಲಿಯೂ ಯಶ್ ಗ್ಲಾಮರಸ್ ಹಾಗೂ ಗ್ಯಾಂಗ್‌ಸ್ಟರ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ರಾವಣನನ್ನೇ ಮೀರಿಸುತ್ತಾರೆ ಯಶ್” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.