ದಿನಭವಿಷ್ಯ: ಇಂದು ಈ ರಾಶಿಯವರು ಪಡೆಯಬೇಕಾದುದನ್ನು ಕಾನೂನಾತ್ಮಕವಾಗಿ ಪಡೆಯುವರು; ನಿಮ್ಮ ರಾಶಿ ಫಲ ಹೇಗಿದೆ?

ದಿನಭವಿಷ್ಯ

Photo Credits: AI Generated

ಆಗಸ್ಟ್ 26, 2026 ರ ನಿತ್ಯ ಭವಿಷ್ಯವು ನಿಮ್ಮ ರಾಶಿ ಫಲವನ್ನು ವಿವರವಾಗಿ ತಿಳಿಸುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳಿಗೆ ಇಂದು ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಪ್ರಮುಖ ಕಾರ್ಯಗಳಲ್ಲಿ ಯಶಸ್ಸು, ನಿರ್ಧಾರಗಳು ಮತ್ತು ಆರ್ಥಿಕ ಸ್ಥಿತಿಯ ಕುರಿತು ಮಾರ್ಗದರ್ಶನ ಇಲ್ಲಿದೆ.

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ಚತುರ್ದಶೀ ತಿಥಿಯ ಬುಧವಾರದಂದು ವಿವಾದ, ಧಾರ್ಮಿಕ ಆಚರಣೆ, ವಸ್ತುಸ್ಥಿತಿಯ ಅವಲೋಕನ, ಆರ್ಥಿಕತೆಯ ಆತಂಕ, ನಿರುದ್ಯೋಗದಿಂದ ಮನಸ್ತಾಪ, ಸ್ಪರ್ಧೆಯಲ್ಲಿ ಗೆಲುವು ಇವೆಲ್ಲ ಈ ದಿನದ ವಿಶೇಷ.

ಗ್ರಹಗಳ ಪ್ರಭಾವವು ನಿಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ದಿನದ ಶುಭ ಮತ್ತು ಅಶುಭ ಸಮಯಗಳ ವಿವರ ಇಲ್ಲಿದೆ. ಯಾವ ರಾಶಿಯವರು ಎಚ್ಚರಿಕೆಯಿಂದಿರಬೇಕು ಎಂದು ಈ ಕೆಳಗೆ ನೋಡಿ.

ಮೇಷ ರಾಶಿ…

ನಿಮ್ಮ ಉತ್ಸಾಹವೇ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ. ಸ್ವಂತ ಉದ್ಯೋಗದ ಮೇಲಿನ ಕಾಳಜಿ ಕಡಿಮೆಯಾಗದಂತೆ ನೋಡಿಕೊಳ್ಳಿ, ಇಲ್ಲದಿದ್ದರೆ ನಷ್ಟವಾಗಬಹುದು. ಬಂದದ್ದನ್ನು ಎದುರಿಸುವ ಮನೋಬಲ ನಿಮಗಿರಲಿದೆ. ಅಪರೂಪದ ಸ್ನೇಹಿತರನ್ನು ಮನೆಗೆ ಕರೆದು ಸಂತೋಷಪಡುವಿರಿ.

ವೃಷಭ ರಾಶಿ…

ಒತ್ತಡವಿದ್ದರೂ ಅದನ್ನು ಸರಿಯಾಗಿ ನಿಭಾಯಿಸುವಿರಿ. ವಹಿಸಿದ ಕೆಲಸ ಬಿಟ್ಟು ಬೇರೆ ಕಾರ್ಯಗಳಲ್ಲಿ ಮಗ್ನರಾಗುವ ಸಾಧ್ಯತೆ ಇದೆ. ಅನಗತ್ಯ ಸ್ವೇಚ್ಛಾಚಾರದ ವರ್ತನೆ ಅಪ್ತರಿಗೆ ಇಷ್ಟವಾಗದು. ದೀರ್ಘಕಾಲದ ಸ್ನೇಹ ಮತ್ತೆ ಹೊಸದಾಗಿ ಆರಂಭವಾಗಲಿದೆ.

ಮಿಥುನ ರಾಶಿ…

ತಿಳಿಯದ ಕೆಲಸಗಳಿಗೂ ಕೈಹಾಕಿ ಒಪ್ಪಿಕೊಳ್ಳುವಿರಿ. ಮಕ್ಕಳಿಗಾಗಿ ಹಣ ಖರ್ಚು ಮಾಡಬೇಕಾಗಬಹುದು. ಎದುರಾಳಿಗಳ ಬಲ ತಿಳಿದು ವ್ಯವಹರಿಸುವುದು ಒಳಿತು. ಆತುರದ ನಿರ್ಧಾರಗಳು ಇತರರ ಹಾಸ್ಯಕ್ಕೆ ಈಡಾಗದಂತೆ ನೋಡಿಕೊಳ್ಳಿ.

ಕರ್ಕಾಟಕ ರಾಶಿ…

ವ್ಯಾಪಾರ ಮಾಡುವ ಸ್ಥಳದಲ್ಲಿ ಸಣ್ಣಪುಟ್ಟ ಕಲಹವಾಗುವ ಸಾಧ್ಯತೆ ಇದೆ. ಸಂದರ್ಭಕ್ಕೆ ತಕ್ಕಂತೆ ಮಾತನಾಡುವುದು ಒಳಿತು. ನಿಮ್ಮ ಸ್ಥಾನಮಾನ ಉಳಿಸಿಕೊಳ್ಳಲು ಶ್ರಮಪಡುವಿರಿ. ವಿವಾಹಕ್ಕೆ ಬರುವ ಉತ್ತಮ ಸಂಬಂಧಗಳನ್ನು ಕಳೆದುಕೊಳ್ಳಬೇಡಿ.

ಸಿಂಹ ರಾಶಿ…

ಉದ್ಯೋಗಕ್ಕೆ ಸಂಬಂಧಿಸಿದಂತೆ ಕೆಲವು ಅನಿರೀಕ್ಷಿತ ಬೆಳವಣಿಗೆಗಳು ಎದುರಾಗಬಹುದು. ಮನೆಗಾಗಿ ಅಗತ್ಯ ವಸ್ತುಗಳನ್ನು ಖರೀದಿಸುವಿರಿ. ದೇಹದ ಅಸ್ವಾಸ್ಥ್ಯವನ್ನು ಯೋಗ ಮತ್ತು ವ್ಯಾಯಾಮದ ಮೂಲಕ ಸರಿಪಡಿಸಿಕೊಳ್ಳಿ.

ಕನ್ಯಾ ರಾಶಿ…

ಬದ್ಧತೆಯಿಂದ ಮಾಡಿದ ಕೆಲಸಕ್ಕೆ ಸೂಕ್ತ ಶ್ರೇಯಸ್ಸು ಸಿಗಲಿದೆ. ಆಕಸ್ಮಿಕವಾಗಿ ಬರುವ ಶುಭ ಸುದ್ದಿಯಿಂದ ಮನಸ್ಸಿಗೆ ಸಂತೋಷವಾಗಲಿದೆ. ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ಯಶಸ್ಸು ಲಭಿಸಬಹುದು. ರಾತ್ರಿ ವೇಳೆ ಒಂಟಿ ಪ್ರಯಾಣ ಬೇಡ.

ತುಲಾ ರಾಶಿ…

ನಿಮ್ಮ ಸೇವೆಗೆ ತಕ್ಕ ಗೌರವ ಸಿಗಲು ಕೊಂಚ ಕಾಯಬೇಕಾಗಬಹುದು. ಪ್ರಭಾವಿ ವ್ಯಕ್ತಿಗಳ ಜೊತೆ ಸೆಣಸುವ ವಾತಾವರಣ ಬರಬಹುದು. ಅನಧಿಕೃತ ವ್ಯವಹಾರಗಳಿಂದ ದೂರವಿರಿ. ವಿದೇಶ ಪ್ರವಾಸದ ಕನಸು ಕಾಣುತ್ತಿರುವವರಿಗೆ ಶುಭ ಯೋಗವಿದೆ.

ವೃಶ್ಚಿಕ ರಾಶಿ…

ನ್ಯಾಯಾಲಯದ ಕಾರ್ಯಗಳು ಮಂದಗತಿಯಲ್ಲಿ ಸಾಗಲಿವೆ. ಹಿಂದೆ ಮಾಡಿದ ಉಪಕಾರ ಇಂದು ನಿಮಗೆ ಧನಾತ್ಮಕವಾಗಿ ಮರಳಲಿದೆ. ಕಠಿಣ ಶ್ರಮದಿಂದ ಸವಾಲುಗಳನ್ನು ಎದುರಿಸುವಿರಿ. ಮೇಲ್ನೋಟಕ್ಕೆ ಯಾವುದನ್ನೂ ತೀರ್ಮಾನ ಮಾಡಬೇಡಿ.

ಧನು ರಾಶಿ…

ತಪ್ಪುಗಳನ್ನು ತಿದ್ದುಕೊಂಡು ಎಲ್ಲರಿಂದ ಸೈ ಎನಿಸಿಕೊಳ್ಳುವಿರಿ. ಹೊಸ ಕೆಲಸಗಳನ್ನು ಪ್ರಾರಂಭಿಸುವಾಗ ಎಚ್ಚರಿಕೆ ಇರಲಿ. ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಅಗತ್ಯ. ಸ್ನೇಹಿತರೊಂದಿಗೆ ವ್ಯವಹರಿಸುವಾಗ ಹಣಕಾಸಿನ ವಿಷಯದಲ್ಲಿ ಜಾಗರೂಕರಾಗಿರಿ.

ಮಕರ ರಾಶಿ…

ಆಪ್ತರೇ ನಂಬಿಕೆದ್ರೋಹ ಬಗೆಯದಂತೆ ಎಚ್ಚರ ವಹಿಸಿ. ನೇರ ಹಾಗೂ ಸ್ಪಷ್ಟ ಮಾತುಕತೆ ಒಳಿತು. ಕಳೆದುಹೋದ ವಸ್ತುಗಳು ಮರಳಿ ಸಿಗುವ ಸಾಧ್ಯತೆ ಇದೆ. ಆರ್ಥಿಕ ಲಾಭಕ್ಕಾಗಿ ಹೊಸ ಯೋಜನೆಗಳನ್ನು ರೂಪಿಸುವಿರಿ.

ಕುಂಭ ರಾಶಿ…

ಉದ್ಯೋಗ ಬದಲಾವಣೆಗೆ ಇದು ಸೂಕ್ತ ಸಮಯವಲ್ಲ. ಇತರರಿಗೆ ಸಹಾಯ ಮಾಡಲು ಹೋಗಿ ಸಮಸ್ಯೆಗೆ ಸಿಲುಕಬೇಡಿ. ಅಪವಾದಗಳು ಬರದಂತೆ ನಡೆದುಕೊಳ್ಳಿ. ಪರಿಚಿತರ ಮೂಲಕ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ.

ಮೀನ ರಾಶಿ…

ಅನಿರೀಕ್ಷಿತ ಭೇಟಿ ಪ್ರೀತಿಯಾಗಿ ಬದಲಾಗುವ ಸಾಧ್ಯತೆ ಇದೆ. ಮಕ್ಕಳೊಂದಿಗೆ ಸಂತೋಷದ ಸಮಯ ಕಳೆಯುವಿರಿ. ವಹಿಸಿದ ಹೊಣೆಗಾರಿಕೆಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿ. ಕೇಳಿಕೊಂಡು ಬಂದವರಿಗೆ ಸಹಾಯ ಮಾಡುವಿರಿ.

ಇಂದಿನ ಪಂಚಾಂಗ (26 ಆಗಸ್ಟ್ 2026)…

ಸಂವತ್ಸರ: ಪರಾಭವ

ಅಯನ: ದಕ್ಷಿಣಾಯನ | ಋತು: ವರ್ಷ ಋತು

ಮಾಸ: ಶ್ರಾವಣ (ಮಾಸ) | ಪಕ್ಷ: ಶುಕ್ಲ ಪಕ್ಷ

ತಿಥಿ: ಚತುರ್ದಶೀ | ವಾರ: ಬುಧವಾರ

ನಕ್ಷತ್ರ: ಧನಿಷ್ಠಾ | ಯೋಗ: ಆಯುಷ್ಮಾನ್ | ಕರಣ: ಬಾಲವ

ಸೂರ್ಯೋದಯ: ಬೆಳಿಗ್ಗೆ 06:09 | ಸೂರ್ಯಾಸ್ತ: ಸಂಜೆ 06:33

ರಾಹು ಕಾಲ: 12:21 PM – 01:54 PM

ಯಮಗಂಡ ಕಾಲ: 07:42 AM – 09:15 AM

ಗುಳಿಕ ಕಾಲ: 10:48 AM – 12:21 PM