Ranabaali Trailer: ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ ‘ರಣಬಾಲಿ’ ಸಿನಿಮಾದ ಭರ್ಜರಿ ಟ್ರೇಲರ್ ಗುರುವಾರ ಸಂಜೆ ಬಿಡುಗಡೆಯಾಗಿದೆ. ಸುಮಾರು 3 ನಿಮಿಷ 56 ಸೆಕೆಂಡ್‌ಗಳ ಈ ಟ್ರೇಲರ್ ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.
19ನೇ ಶತಮಾನದ ಬ್ರಿಟಿಷರ ದೌರ್ಜನ್ಯ, ಬರಗಾಲ ಮತ್ತು ಜನರ ಹೋರಾಟದ ಸುತ್ತ ಚಿತ್ರದ ಕಥೆ ಸಾಗಲಿದೆ ಎಂಬ ಸುಳಿವು ಟ್ರೇಲರ್‌ನಲ್ಲಿ ಸಿಕ್ಕಿದೆ. ಜನಪದ ಪ್ರದರ್ಶನದೊಂದಿಗೆ ಆರಂಭವಾಗುವ ಟ್ರೇಲರ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ.
ಹಲವು ತಲೆಮಾರುಗಳಿಂದ ಜನಪದ ಕಥೆಗಳ ಮೂಲಕ ಜೀವಂತವಾಗಿರುವ ‘ರಣಬಾಲಿ’ ಪರಂಪರೆಯನ್ನು ಚಿತ್ರತಂಡ ಬಿಗ್ ಸ್ಕ್ರೀನ್ ಮೇಲೆ ಅದ್ಧೂರಿಯಾಗಿ ತರಲು ಹೊರಟಿದೆ.
ಬ್ರಿಟಿಷರ ದೌರ್ಜನ್ಯ ಹಾಗೂ ಐತಿಹಾಸಿಕ ಹೋರಾಟದ ಕಥೆ
1870ರ ದಶಕದ ಬ್ರಿಟಿಷ್ ಆಳ್ವಿಕೆ ಮತ್ತು ದಕ್ಷಿಣ ಭಾರತದ ಬರಗಾಲದ ಹಿನ್ನೆಲೆಯಲ್ಲಿ ಈ ಕಥೆ ಸಾಗುತ್ತದೆ. ಹಳ್ಳಿಯ ಜನರ ಮೇಲೆ ಬ್ರಿಟಿಷರು ಎಸಗುವ ದೌರ್ಜನ್ಯ ಮತ್ತು ಶೋಷಣೆಯನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ.
ಬ್ರಿಟಿಷರ ಕ್ರೂರ ಆಡಳಿತದ ವಿರುದ್ಧ ಜನರು ಬದುಕುಳಿಯಲು ಹೇಗೆ ಹೋರಾಡುತ್ತಾರೆ ಎಂಬುದನ್ನು ಸಿನಿಮಾದಲ್ಲಿ ಪ್ರಮುಖವಾಗಿ ಚಿತ್ರಿಸಲಾಗಿದೆ. ಹೀಗಾಗಿ ‘ರಣಬಾಲಿ’ ಬರಿ ಆ್ಯಕ್ಷನ್ ಮಾತ್ರವಲ್ಲದೆ, ಐತಿಹಾಸಿಕ ಹೋರಾಟದ ಕಥೆಯನ್ನೂ ಹೊಂದಿದೆ.
ವಿಜಯ್ ದೇವರಕೊಂಡ-ರಶ್ಮಿಕಾ ಜಂಟಿ ಕಮಾಲ್
ಈ ಹಿಂದೆ ‘ಟ್ಯಾಕ್ಸಿವಾಲಾ’ ಸಿನಿಮಾ ಮಾಡಿದ್ದ ವಿಜಯ್ ದೇವರಕೊಂಡ ಮತ್ತು ನಿರ್ದೇಶಕ ರಾಹುಲ್ ಸಕೃತ್ಯನ್ ಈ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ವಿಜಯ್ ಅವರ ಮಾಸ್ ಹಾಗೂ ಆ್ಯಕ್ಷನ್ ಅವತಾರ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ರಶ್ಮಿಕಾ ಮಂದಣ್ಣ ಅವರು ‘ಜಯಮ್ಮ’ ಎಂಬ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೆ ತೆರೆಹಂಚಿಕೊಂಡಿರುವ ವಿಜಯ್-ರಶ್ಮಿಕಾ ಜೋಡಿಯನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
Ranabaali Trailer: ವಿಲನ್ ಪಾತ್ರದಲ್ಲಿ ಅರ್ನಾಲ್ಡ್ ವೋಸ್ಲೂ, ಅಕ್ಟೋಬರ್ 16ಕ್ಕೆ ರಿಲೀಸ್
ಹಾಲಿವುಡ್ ನಟ ಅರ್ನಾಲ್ಡ್ ವೋಸ್ಲೂ ಅವರು ಬ್ರಿಟಿಷ್ ಅಧಿಕಾರಿ ‘ಸರ್ ಥಿಯೋಡರ್ ಹೆಕ್ಟರ್’ ಎಂಬ ಖಳನಾಯಕನ ಪಾತ್ರದಲ್ಲಿದ್ದಾರೆ. ವಿಜಯ್ ಹಾಗೂ ಅರ್ನಾಲ್ಡ್ ನಡುವಿನ ಮುಖಾಮುಖಿ ಚಿತ್ರದ ಪ್ರಮುಖ ಆಕರ್ಷಣೆಯಾಗಲಿದೆ.
ಮೈತ್ರಿ ಮೂವಿ ಮೇಕರ್ಸ್ ಹಾಗೂ ಟಿ-ಸೀರೀಸ್ ಜಂಟಿಯಾಗಿ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದು, ಅಜಯ್-ಅತುಲ್ ಸಂಗೀತ ನೀಡಿದ್ದಾರೆ. ಅಕ್ಟೋಬರ್ 16ರಂದು ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ‘ರಣಬಾಲಿ’ ತೆರೆಗೆ ಬರಲಿದೆ.




