ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ರಾಮಾಯಣ ಸಿನಿಮಾ ಬಿಡುಗಡೆಯಾದ ಒಂಬತ್ತನೇ ದಿನವೂ ತನ್ನ ಗೆಲುವಿನ ಓಟ ಮುಂದುವರಿಸಿದೆ. ಶುಕ್ರವಾರದಂದು 47.85 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಗಳಿಸುವ ಮೂಲಕ ಈ ಚಿತ್ರವು ಹೊಸ ದಾಖಲೆ ಬರೆದಿದೆ.
ಇದರೊಂದಿಗೆ ಭಾರತದ ಒಟ್ಟು ನಿವ್ವಳ ಕಲೆಕ್ಷನ್ 612.45 ಕೋಟಿ ರೂಪಾಯಿಗೆ ಏರಿದ್ದು, ವಿಶ್ವವ್ಯಾಪಿ ಒಟ್ಟು ಗ್ರಾಸ್ ಗಳಿಕೆ 1,110.70 ಕೋಟಿ ರೂಪಾಯಿ ಗಡಿ ದಾಟಿದೆ.
ಎರಡನೇ ಶುಕ್ರವಾರ ಭರ್ಜರಿ ಕಲೆಕ್ಷನ್ ದಾಖಲು
ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿರುವ ‘ರಾಮಾಯಣ’ ಸಿನಿಮಾ ಒಂಬತ್ತನೇ ದಿನವಾದ ಎರಡನೇ ಶುಕ್ರವಾರದಂದು (ನವೆಂಬರ್ 13) ಅದ್ಭುತ ಪ್ರದರ್ಶನ ನೀಡಿದೆ.
ಭಾರತದಾದ್ಯಂತ ಒಟ್ಟು 22,993 ಶೋಗಳಿಂದ ಸಿನಿಮಾ 47.85 ಕೋಟಿ ರೂಪಾಯಿ ನೆಟ್ ಹಾಗೂ 57.15 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.
ನವೆಂಬರ್ 13ರಂದು ಹಿಂದಿ ಅವತರಣಿಕೆಯಿಂದ 36.25 ಕೋಟಿ ರೂಪಾಯಿ ನೆಟ್ ಗಳಿಕೆ ಮಾಡುವ ಮೂಲಕ ಸಿನಿಮಾ ಮುಂಚೂಣಿಯಲ್ಲಿದೆ.
ದಕ್ಷಿಣ ಭಾರತದ ಭಾಷೆಗಳಲ್ಲೂ ಸಖತ್ ಕಲೆಕ್ಷನ್
ದಕ್ಷಿಣ ಭಾರತದ ಭಾಷೆಗಳಲ್ಲೂ ಚಿತ್ರವು ಅತ್ಯುತ್ತಮ ಪ್ರದರ್ಶನ ಕಂಡಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮಲಯಾಳಂನಲ್ಲಿ 3.25 ಕೋಟಿ ರೂಪಾಯಿ ಹಾಗೂ ಕನ್ನಡದಲ್ಲಿ 850 ಪ್ರದರ್ಶನಗಳಿಂದ 3 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಆಗಿದೆ. ಹಾಗೆಯೇ ತಮಿಳಿನಲ್ಲಿ 2.75 ಕೋಟಿ ರೂಪಾಯಿ ಮತ್ತು ತೆಲುಗಿನಲ್ಲಿ 2.60 ಕೋಟಿ ರೂಪಾಯಿ ನೆಟ್ ಗಳಿಕೆ ದಾಖಲಾಗಿದೆ.
ವಿಶ್ವವ್ಯಾಪಿ ಮಾರುಕಟ್ಟೆಯಲ್ಲಿ ರಾಮಾಯಣ ಅಬ್ಬರ
ವಾರದ ಮಧ್ಯದ ದಿನಗಳಲ್ಲೂ ತನ್ನ ಹಿಡಿತ ಕಾಯ್ದುಕೊಂಡಿದ್ದ ‘ರಾಮಾಯಣ’ ಸಿನಿಮಾ ಮೊದಲ ವಾರದ 8 ದಿನಗಳಲ್ಲಿ 675.05 ಕೋಟಿ ಗ್ರಾಸ್ ಗಳಿಸಿತ್ತು. ಈಗ ಒಂಭತ್ತನೇ ದಿನದ ಅಂತ್ಯಕ್ಕೆ ಭಾರತದಲ್ಲಿ ಒಟ್ಟು ಗ್ರಾಸ್ ಕಲೆಕ್ಷನ್ 732.20 ಕೋಟಿ ರೂಪಾಯಿಗೆ ತಲುಪಿದೆ.
ಇನ್ನು ವಿದೇಶಿ ಮಾರುಕಟ್ಟೆಯಲ್ಲೂ ಭಾರಿ ಬೇಡಿಕೆಯಿದ್ದು, ಸಾಗರೋತ್ತರ ಗ್ರಾಸ್ ಕಲೆಕ್ಷನ್ 378.50 ಕೋಟಿ ರೂಪಾಯಿಗೆ ಏರಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್, ಸಾಯಿ ಪಲ್ಲವಿ ಹಾಗೂ ಯಶ್ ನಟಿಸಿದ್ದಾರೆ.




