☔ Weather
Bengaluru: ☁️ 21°C | AQI 59
Mysore: ☁️ 21°C | AQI 63
Mangalore: ☁️ 26°C | AQI 69
Bengaluru: ☁️ 21°C | AQI 59

THE TOXIC: ‘ಟಾಕ್ಸಿಕ್’ ಪ್ರಚಾರಕ್ಕಾಗಿ ಬೆಂಗಳೂರಿನಲ್ಲಿ ಥಾರ್ ರ‍್ಯಾಲಿ; ಯಶ್ ಅಭಿಮಾನಿಗಳಿಂದ ಮಾಸ್ ಶೋಆಫ್

'ಟಾಕ್ಸಿಕ್' ಪ್ರಚಾರಕ್ಕೆ ಬೆಂಗಳೂರಿನಲ್ಲಿ ಥಾರ್ ರ್ಯಾಲಿ

Photo Credits: @rajnish_hn (Instagram)

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ಪ್ರಪಂಚದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಸಿನಿಮಾ ಬಿಡುಗಡೆಗೆ ಇನ್ನು ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಇವೆ. ಚಿತ್ರದ ರಿಲೀಸ್ ದಿನ ಹತ್ತಿರವಾಗುತ್ತಿದ್ದಂತೆ ಅಭಿಮಾನಿಗಳ ಉತ್ಸಾಹ ಗಗನಕ್ಕೇರಿದೆ. ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ.

ಚಿತ್ರದ ಪ್ರಚಾರಕ್ಕಾಗಿ ಯಶ್ ಅಭಿಮಾನಿಗಳು ಬೆಂಗಳೂರಿನ ಮುಖ್ಯ ರಸ್ತೆಯಲ್ಲಿ ಬೃಹತ್ ಮಹೀಂದ್ರಾ ಥಾರ್ ವಾಹನಗಳ ರ‍್ಯಾಲಿ ಆಯೋಜಿಸಿದ್ದರು. ಸಾಲು ಸಾಲಾಗಿ ಸಾಗಿದ ಈ ರ‍್ಯಾಲಿ ಹಾದಿಹೋಕರ ಗಮನ ಸೆಳೆದಿದೆ.

ಟಾಕ್ಸಿಕ್ ಪೋಸ್ಟರ್‌ಗಳೊಂದಿಗೆ ಸಾಲು ಸಾಲು ಥಾರ್‌ಗಳು…

ರ‍್ಯಾಲಿಯಲ್ಲಿ ಭಾಗವಹಿಸಿದ್ದ ಪ್ರತಿಯೊಂದು ಥಾರ್ ವಾಹನದ ಮುಂಭಾಗ ಹಾಗೂ ಹಿಂಭಾಗದ ಗ್ಲಾಸ್‌ಗಳಲ್ಲಿ ‘ಟಾಕ್ಸಿಕ್’ ಸಿನಿಮಾದ ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು. ಯಶ್ ಅವರ ಮಾಸ್ ಲುಕ್ ಮತ್ತು ಗನ್ ಹಿಡಿದಿರುವ ಭಂಗಿಯ ಪೋಸ್ಟರ್‌ಗಳು ರಸ್ತೆಯಲ್ಲಿ ಸಾಗುವಾಗ ಪ್ರೇಕ್ಷಕರನ್ನು ಆಕರ್ಷಿಸಿದವು. ಕೆಲವು ವಾಹನಗಳ ಮೇಲೆ ‘TOXIC’ ಎಂದು ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿತ್ತು. ಕಾರುಗಳ ಬಾನೆಟ್ ಹಾಗೂ ಬದಿಗಳಲ್ಲಿ ವಿಶೇಷ ಗ್ರಾಫಿಕ್ಸ್ ವಿನ್ಯಾಸಗೊಳಿಸಲಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್…

ಸಾಲು ಸಾಲಾಗಿ ಕಪ್ಪು ಮತ್ತು ಬಿಳಿ ಬಣ್ಣದ ಥಾರ್ ಕಾರುಗಳು ಹೆದ್ದಾರಿಯಲ್ಲಿ ಸಾಗುತ್ತಿರುವ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡ್ ಆಗುತ್ತಿದೆ. ಹಿನ್ನೆಲೆಯಲ್ಲಿ ‘ಟಾಕ್ಸಿಕ್’ ಸಿನಿಮಾದ ಮಾಸ್ ಮ್ಯೂಸಿಕ್ ಹಾಗೂ ಬಿಜಿಎಂ ಪ್ಲೇ ಮಾಡಲಾಗಿದೆ. ಅಭಿಮಾನಿಗಳ ಈ ವಿಭಿನ್ನ ಪ್ರಚಾರ ಶೈಲಿಗೆ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ.

ಆಗಸ್ಟ್ 26ಕ್ಕೆ ಜಾಗತಿಕ ಮಟ್ಟದಲ್ಲಿ ಬಿಡುಗಡೆ…

ಗೀತು ಮೋಹನ್‌ದಾಸ್ ನಿರ್ದೇಶನದ ಈ ಬಿಗ್ ಬಜೆಟ್ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಿಸಿದೆ. ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಹಾಗೂ ಹುಮಾ ಖುರೇಷಿ ನಟಿಸಿದ್ದಾರೆ.

ಈ ಚಿತ್ರವು ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಆಗಸ್ಟ್ 26ರಂದು ರಿಲೀಸ್ ಆಗುತ್ತಿದೆ. ಅಭಿಮಾನಿಗಳ ಈ ರ‍್ಯಾಲಿಯು ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.