ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ನಟ ಧನ್ವೀರ್ (Dhanveerah-Vijayalakshmi) ನಡುವಿನ ಜಗಳ ಈಗ ಕೋರ್ಟ್ ಮೆಟ್ಟಿಲೇರಿದ್ದು, ಧನ್ವೀರ್ಗೆ ದೊಡ್ಡ ಶಾಕ್ ಎದುರಾಗಿದೆ. ವಿಜಯಲಕ್ಷ್ಮೀ ಅವರ ವಿರುದ್ಧ ಬೇಕಾಬಿಟ್ಟಿ ಹೇಳಿಕೆ ನೀಡಿದ್ದ ಧನ್ವೀರ್ಗೆ ನ್ಯಾಯಾಲಯ ಮಧ್ಯಂತರ ಪ್ರತಿಬಂಧಕ ಆದೇಶ ಹೊರಡಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಸೇರಿದಂತೆ ದರ್ಶನ್ ಮತ್ತು ವಿಜಯಲಕ್ಷ್ಮೀ ಅವರ ಕುಟುಂಬದ ಕುರಿತು ಯಾವುದೇ ಸುಳ್ಳು ಹಾಗೂ ಮಾನಹಾನಿಕರ ಹೇಳಿಕೆಗಳನ್ನು ನೀಡದಂತೆ ನಗರದ 12ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಎಚ್ಚರಿಕೆ ನೀಡಿದೆ. ಧನ್ವೀರ್ ಅಥವಾ ಅವರ ಬೆಂಬಲಿಗರು ಯಾವುದೇ ಮಾಧ್ಯಮಗಳಲ್ಲಿ ಮಾತನಾಡುವಂತಿಲ್ಲ ಎಂದು ಕೋರ್ಟ್ ಆದೇಶಿಸಿದೆ.
ತಮ್ಮ ಕುಟುಂಬದ ಖಾಸಗಿ, ಹಣಕಾಸು ಹಾಗೂ ಕಾನೂನು ವಿಚಾರಗಳ ಬಗ್ಗೆ ಧನ್ವೀರ್ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿ ದರ್ಶನ್ ಮತ್ತು ವಿಜಯಲಕ್ಷ್ಮೀ ಕೋರ್ಟ್ಗೆ ಮೂಲದಾವೆ ಸಲ್ಲಿಸಿದ್ದರು. ವಾದ ಆಲಿಸಿದ ನ್ಯಾಯಾಲಯವು ಧನ್ವೀರ್ಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಡಿಸೆಂಬರ್ 7ಕ್ಕೆ ಮುಂದೂಡಿದೆ.
10 ಕೋಟಿ ರೂ. ವಹಿವಾಟು ಹಾಗೂ ಧನ್ವೀರ್ ವಿರುದ್ಧ ಎಫ್ಐಆರ್
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಲಕ್ಷ್ಮಿ ಹಾಗೂ ಧನ್ವೀರ್ ನಡುವೆ ದೊಡ್ಡ ಮಟ್ಟದ ಸಮರವೇ ನಡೆದಿದೆ. ದರ್ಶನ್ ಅವರ ಕಾನೂನು ಹೋರಾಟದ ವೆಚ್ಚಕ್ಕಾಗಿ ವಿಜಯಲಕ್ಷ್ಮಿ ಹಾಗೂ ಧನ್ವೀರ್ ನಡುವೆ 10 ಕೋಟಿ ರೂಪಾಯಿ ಅಕ್ರಮ ನಗದು ವಹಿವಾಟು ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಇದಲ್ಲದೆ, ಹಣ ಕೇಳಲು ಧನ್ವೀರ್ ಮನೆಗೆ ಹೋಗಿದ್ದ ದರ್ಶನ್ ಮ್ಯಾನೇಜರ್ ನಾಗರಾಜ್ ಅವರಿಗೆ ನಟ ಧನ್ವೀರ್ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಕೋರ್ಟ್ ಅನುಮತಿ ಪಡೆದ ಆರ್ಆರ್ ನಗರ ಪೊಲೀಸರು ಧನ್ವೀರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಜೊತೆಗೆ ನಟ ಧನ್ವೀರ್ ವಿರುದ್ಧ ಇನ್ನೆರಡು ಪ್ರತ್ಯೇಕ ಎಫ್ಐಆರ್ಗಳು ಕೂಡ ದಾಖಲಾಗಿದ್ದು, ಅವರ ಕಾನೂನು ಸಂಕಷ್ಟಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.
ಇದನ್ನು ಓದಿ: Dhanveerah: ನಟ ಧನ್ವೀರ್ಗೆ 3 ಠಾಣೆಗಳಿಂದ ನೋಟಿಸ್
Dhanveerah-Vijayalakshmi: ಡಿಸೆಂಬರ್ 7ಕ್ಕೆ ವಿಚಾರಣೆ ಮುಂದೂಡಿಕೆ
ಟಿವಿ ವಾಹಿನಿಗಳು, ಸೋಶಿಯಲ್ ಮೀಡಿಯಾ ಅಥವಾ ಮುದ್ರಣ ಮಾಧ್ಯಮಗಳಲ್ಲಿ ದರ್ಶನ್ ಕುಟುಂಬದ ವಿರುದ್ಧ ಧನ್ವೀರ್ ಮಾತನಾಡದಂತೆ ಕೋರ್ಟ್ ಕಟ್ಟುನಿಟ್ಟಿನ ಏಕಪಕ್ಷೀಯ ತಡೆಯಾಜ್ಞೆ ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧನ್ವೀರ್ಗೆ ನೋಟಿಸ್ ತಲುಪಿಸಲಾಗಿದ್ದು, ಮುಂದಿನ ವಿಚಾರಣೆಯನ್ನು ಡಿಸೆಂಬರ್ 7ಕ್ಕೆ ಕೋರ್ಟ್ ಮುಂದೂಡಿದೆ. ಕೋರ್ಟ್ ನೀಡಿದ ಈ ಬಿಗ್ ಶಾಕ್ನಿಂದಾಗಿ ಧನ್ವೀರ್ ತಮ್ಮ ಮಾತುಗಳಿಗೆ ಬ್ರೇಕ್ ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೋರ್ಟ್ನ ಈ ಮಧ್ಯಂತರ ಆದೇಶದಿಂದಾಗಿ ದರ್ಶನ್ ಹಾಗೂ ವಿಜಯಲಕ್ಷ್ಮೀ ಕುಟುಂಬಕ್ಕೆ ದೊಡ್ಡ ಮಟ್ಟದ ಲೀಗಲ್ ರಿಲೀಫ್ ಸಿಕ್ಕಂತಾಗಿದೆ.




