☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

Dhanveerah: ನೋಟಿಸ್ಗೆ ಸಿಗದ ಉತ್ತರ; ನಟ ಧನ್ವೀರ್ಗೆ ಅಂಡರ್ವರ್ಲ್ಡ್ ಲಿಂಕ್ ಇದೆಯಾ?

Dhanveerah: Under Scanner Over Underworld Links And Police Notice Response
ನಟ ಧನ್ವೀರ್ ತಂದೆ ಸಿಸಿಟಿವಿ ನೀಡದ ಹಿನ್ನೆಲೆಯಲ್ಲಿ ಅನುಮಾನ ಹೆಚ್ಚಾಗಿದ್ದು, ಧನ್ವೀರ್ ಅಂಡರ್ವರ್ಲ್ಡ್ ಲಿಂಕ್ ಬಗ್ಗೆ ತನಿಖೆಗೆ ಕಮಿಷನರ್ ಸೂಚಿಸಿದ್ದಾರೆ.

ಮುಖ್ಯಾಂಶಗಳು

  • ಸಿಸಿಟಿವಿ ದೃಶ್ಯ ನೀಡದ ಧನ್ವೀರ್ ತಂದೆಗೆ ಮೂಡಿದ ಅನುಮಾನ.
  • ಅಂಡರ್ವರ್ಲ್ಡ್ ಲಿಂಕ್ ತನಿಖೆಗೆ ಕಮಿಷನರ್ ಕಟ್ಟುನಿಟ್ಟಿನ ಸೂಚನೆ.
  • ಸೋಮವಾರದಿಂದ ಮೂರು ಠಾಣೆಗಳಲ್ಲಿ ಧನ್ವೀರ್ ವಿಚಾರಣೆ.

ಸ್ಯಾಂಡಲ್‌ವುಡ್ ನಟ ಧನ್ವೀರ್ (Dhanveerah) ಗೌಡ ವಿರುದ್ಧದ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೊಸ ಬೆಳವಣಿಗೆಗಳು ನಡೆಯುತ್ತಲೇ ಇವೆ. ಇತ್ತೀಚೆಗೆ ಧನ್ವೀರ್ ತಂದೆ ತಿಮ್ಮೇಗೌಡ ಅವರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ವಿಜಯಲಕ್ಷ್ಮೀ ಹಾಗೂ ಮ್ಯಾನೇಜರ್ ನಾಗರಾಜ್ ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ ಎಂದು ಧನ್ವೀರ್ ತಂದೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಘಟನೆ ನಡೆದ ದಿನದ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವಂತೆ ರಾಜಾಜಿನಗರ ಪೊಲೀಸರು ತಿಮ್ಮೇಗೌಡ ಅವರಿಗೆ ನೋಟಿಸ್ ನೀಡಿದ್ದರು.

ನೋಟ್ಸ್ ನೀಡಿ ಮೂರು ದಿನ ಕಳೆದರೂ ಧನ್ವೀರ್ ಕುಟುಂಬದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸಿಸಿಟಿವಿ ನೀಡದಿರುವುದು ಅಂದು ನಿಜಕ್ಕೂ ವಿಜಯಲಕ್ಷ್ಮಿ ಬಂದಿದ್ದರಾ ಎಂಬ ಅನುಮಾನ ಮೂಡಿಸಿದೆ. ಹೀಗಾಗಿ ಎನ್‌ಸಿಆರ್ ಅನ್ನು ಎಫ್‌ಐಆರ್ ಮಾಡಲು ಪೊಲೀಸರು ಕೋರ್ಟ್ ಅನುಮತಿ ಕೋರಿದ್ದಾರೆ.

ಧನ್ವೀರ್‌ಗೆ ಇದೆಯಾ ಅಂಡರ್‌ವರ್ಲ್ಡ್ ಲಿಂಕ್?

ಇನ್ನೊಂದೆಡೆ ನಟ ಧನ್ವೀರ್ ಅವರಿಗೆ ಭೂಗತ ಪಾತಕಿಗಳ (ಅಂಡರ್‌ವರ್ಲ್ಡ್) ಜೊತೆ ನಂಟು ಇದೆಯಾ ಎಂಬ ದೊಡ್ಡ ಅನುಮಾನ ಮೂಡಿದೆ. ಈಗಾಗಲೇ ಕೆಲವು ಅಂಡರ್‌ವರ್ಲ್ಡ್ ವ್ಯಕ್ತಿಗಳ ಜೊತೆ ಧನ್ವೀರ್ ಇರುವ ವೀಡಿಯೋಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ರೌಡಿಗಳನ್ನು ಕರೆದುಕೊಂಡು ಹೋಗಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸಲು ಕಮಿಷನರ್ ಸೂಚಿಸಿದ್ದಾರೆ. ಈ ಅಂಡರ್‌ವರ್ಲ್ಡ್ ಲಿಂಕ್ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಚೆಕ್ ಮಾಡುವಂತೆ ಎಫ್‌ಐಆರ್ ದಾಖಲಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಇದರ ಜೊತೆಗೆ ಧನ್ವೀರ್ ಬಳಸುತ್ತಿದ್ದ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆಯಲು ಪೊಲೀಸರು ಸಜ್ಜಾಗಿದ್ದಾರೆ. ವಿಚಾರಣೆಗೆ ಹಾಜರಾಗುವಾಗ ತಮ್ಮ ಮೊಬೈಲ್ ಸಮೇತ ಬರುವಂತೆ ತನಿಖಾಧಿಕಾರಿಗಳು ಧನ್ವೀರ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇದನ್ನು ಓದಿ: Dhanveerah: ನಟ ಧನ್ವೀರ್ಗೆ 3 ಠಾಣೆಗಳಿಂದ ನೋಟಿಸ್

Dhanveerah: ಸೋಮವಾರದಿಂದ ಸಾಲು ಸಾಲು ಠಾಣೆಗಳಲ್ಲಿ ವಿಚಾರಣೆ

ನಟ ಧನ್ವೀರ್ ಅವರಿಗೆ ಸೋಮವಾರದಿಂದ ಪೊಲೀಸ್ ಕಂಟಕ ಎದುರಾಗಲಿದೆ. ಬೆಂಗಳೂರಿನ ಮೂರು ಪ್ರತ್ಯೇಕ ಠಾಣೆಗಳ ಪೊಲೀಸರು ನಟನನ್ನು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ.

ಆರ್‌ಆರ್ ನಗರ, ಚಾಮರಾಜಪೇಟೆ ಹಾಗೂ ಬಸವೇಶ್ವರ ನಗರ ಪೊಲೀಸ್ ಠಾಣೆಗಳ ಅಧಿಕಾರಿಗಳು ಧನ್ವೀರ್ ವಿಚಾರಣೆ ನಡೆಸಲಿದ್ದಾರೆ. ಧನ್ವೀರ್ ನೀಡುವ ಹೇಳಿಕೆ ಹಾಗೂ ಮೊಬೈಲ್ ಮಾಹಿತಿಯಿಂದ ಹಲವು ರಹಸ್ಯಗಳು ಹೊರಬೀಳುವ ಸಾಧ್ಯತೆಯಿದೆ.

ಸಾಲಾಗಿ ಎದುರಾಗುತ್ತಿರುವ ಈ ಕಾನೂನು ಸಂಕಷ್ಟಗಳಿಂದ ನಟ ಧನ್ವೀರ್ ಹೇಗೆ ಪಾರಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.