☔ Weather
Bengaluru: ☁️ 24°C | AQI 58
Mysore: ☁️ 26°C | AQI 73
Mangalore: ☁️ 29°C | AQI 92
Bengaluru: ☁️ 24°C | AQI 58

Darshan Case: ಪ್ರದೋಷ್‌ಗೆ ಶಾಕ್ ಕೊಟ್ಟ ದರ್ಶನ್; ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲೇನಿದೆ ಗೊತ್ತಾ?

Darshan Case: Actor Darshan Files New Petition Against Pradosh Becoming Approver in Renukaswamy Murder Case

Darshan Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಮುಂದಾಗಿರುವ ಪ್ರದೋಷ್‌ಗೆ ನಟ ದರ್ಶನ್ ಹೊಸ ಶಾಕ್ ನೀಡಿದ್ದಾರೆ. ದರ್ಶನ್ ಮತ್ತು ಅವರ ತಂಡ ಈಗಾಗಲೇ ಮಾಫಿ ಸಾಕ್ಷಿ ವಿರುದ್ಧ ಅರ್ಜಿಗಳನ್ನು ಸಲ್ಲಿಸಿದ್ದು, ಇದೀಗ ಮತ್ತೊಂದು ಪ್ರಮುಖ ಅರ್ಜಿಯನ್ನು ಸಲ್ಲಿಸಲಾಗಿದೆ. 59ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಈ ಅರ್ಜಿ ಸಲ್ಲಿಕೆಯಾಗಿದ್ದು, ಇಂದೇ ಈ ಬಗ್ಗೆ ನ್ಯಾಯಾಲಯದ ಆದೇಶ ಹೊರಬೀಳುವ ಸಾಧ್ಯತೆಯಿದೆ.

ಕೋರ್ಟ್‌ಗೆ ತರುವಾಗ ಯಾರೊಂದಿಗೂ ಮಾತನಾಡಬಾರದು

ಮಾಫಿ ಸಾಕ್ಷಿ ಹೇಳಿಕೆ ನೀಡುತ್ತಿರುವ ಪ್ರದೋಷ್ ಅವರನ್ನು ಜೈಲಿನಿಂದ ಕೋರ್ಟ್‌ಗೆ ಕರೆತರುವಾಗ ಯಾರೊಂದಿಗೂ ಮಾತನಾಡಲು ಅವಕಾಶ ನೀಡಬಾರದು ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದಾರೆ.

ಕೋರ್ಟ್‌ಗೆ ಬಂದಾಗ ಪ್ರದೋಷ್ ಬೇರೆ ಯಾರನ್ನೂ ಭೇಟಿಯಾಗದಂತೆ ಮತ್ತು ಮಾತನಾಡದಂತೆ ಸಿಆರ್ ಎಸ್ಕಾರ್ಟ್ ತಂಡಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ದರ್ಶನ್ ವಕೀಲರು Cr.P.C ಸೆಕ್ಷನ್ 267 ಮತ್ತು BNSS ಸೆಕ್ಷನ್ 302 ಅಡಿಯಲ್ಲಿ ಈ ಅರ್ಜಿಯನ್ನು ಸಲ್ಲಿಸಿದ್ದಾರೆ.

ಎಸ್.ಪಿ.ಪಿ ಅಕ್ಷೇಪಣೆ ಹಾಗೂ ಬಾಡಿ ಕ್ಯಾಮೆರಾ ಭದ್ರತೆ

ಕೋರ್ಟ್ ಆದೇಶದಂತೆ ಪ್ರದೋಷ್ ಅವರನ್ನು ಸಂಪೂರ್ಣ ಭದ್ರತೆಯೊಂದಿಗೆ ಹಾಜರುಪಡಿಸಲಾಗುತ್ತಿದೆ ಎಂದು ಎಸ್.ಪಿ.ಪಿ (ವಿಶೇಷ ಸರ್ಕಾರಿ ಅಭಿಯೋಜಕರು) ಕೋರ್ಟ್‌ಗೆ ತಿಳಿಸಿದ್ದಾರೆ.

ಪ್ರದೋಷ್ ಅವರನ್ನು ಬಾಡಿ ಕ್ಯಾಮೆರಾ ಧರಿಸಿದ ಪೊಲೀಸರ ಕಾವಲಿನಲ್ಲಿ ಕೋರ್ಟ್‌ಗೆ ಕರೆತರಲಾಗುತ್ತಿದೆ ಎಂದು ಮಾಹಿತಿ ನೀಡಲಾಗಿದೆ. ಎವಿಡೆನ್ಸ್ ಆ್ಯಕ್ಟ್ ಸೆಕ್ಷನ್ 137 ಮತ್ತು 138 ಅಡಿಯಲ್ಲಿ ಸಲ್ಲಿಸಲಾದ ಮತ್ತೊಂದು ಅರ್ಜಿಗೆ ಎಸ್.ಪಿ.ಪಿ ಇಂದು ತಮ್ಮ ಅಕ್ಷೇಪಣೆ ಸಲ್ಲಿಸಲಿದ್ದಾರೆ.

3 ದಿನಗಳಲ್ಲಿ 83 ಪುಟಗಳ ಹೇಳಿಕೆ ದಾಖಲು

ಪ್ರದೋಷ್ ಮಾಫಿ ಸಾಕ್ಷಿಯಾಗಲು ನಿರ್ಧರಿಸಿದ ಕ್ಷಣದಿಂದಲೇ ದರ್ಶನ್ ಅಂಡ್ ಗ್ಯಾಂಗ್‌ನಲ್ಲಿ ಆತಂಕ ಸೃಷ್ಟಿಯಾಗಿದೆ. ಕಳೆದ 3 ದಿನಗಳಲ್ಲಿ ಪ್ರದೋಷ್ ಬರೋಬ್ಬರಿ 83 ಪುಟಗಳ ಸುದೀರ್ಘ ಹೇಳಿಕೆಯನ್ನು 59ನೇ ಸಿಸಿಎಚ್ ಕೋರ್ಟ್‌ನಲ್ಲಿ ದಾಖಲಿಸಿದ್ದಾರೆ. ಇನ್ನೂ ಕೆಲವು ಹೇಳಿಕೆಗಳ ದಾಖಲಾತಿ ಬಾಕಿ ಇದ್ದು, ವಿಚಾರಣೆಯನ್ನು ಅಕ್ಟೋಬರ್ 5ರ ಸೋಮವಾರಕ್ಕೆ ಮುಂದೂಡಲಾಗಿದೆ.

Darshan Case: ತನಿಖೆಯಲ್ಲಿ ಬಯಲಾಗದ ರಹಸ್ಯಗಳು ಹೊರಗೆ

ಪೊಲೀಸರ ತನಿಖೆಯ ವೇಳೆ ಬಯಲಾಗದ ಹಲವು ರಹಸ್ಯ ವಿಚಾರಗಳನ್ನು ಪ್ರದೋಷ್ ತಮ್ಮ ಮಾಫಿ ಹೇಳಿಕೆಯಲ್ಲಿ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ. ಮೃತದೇಹವನ್ನು ಸಾತ್ವಾ ಅಪಾರ್ಟ್‌ಮೆಂಟ್ ಬಳಿ ಎಸೆದ ಘಟನೆಯಿಂದ ಹಿಡಿದು ರೇಣುಕಾಸ್ವಾಮಿ ಮೊಬೈಲ್ ನಾಶಪಡಿಸಿದವರೆಗಿನ ಸಂಪೂರ್ಣ ವಿವರಗಳನ್ನು ನೀಡಿದ್ದಾರೆ. ಪ್ರದೋಷ್ ನೀಡುತ್ತಿರುವ ಈ ಮಾಫಿ ಸಾಕ್ಷಿ ಹೇಳಿಕೆಗಳು ಮುಂಬರುವ ದಿನಗಳಲ್ಲಿ ದರ್ಶನ್ ಅಂಡ್ ಗ್ಯಾಂಗ್‌ಗೆ ದೊಡ್ಡ ಮುಳುವಾಗುವ ಸಾಧ್ಯತೆಯಿದೆ.