☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

Premada Oorali: ‘ಪ್ರೇಮದ ಊರಲಿ’ ಚಿತ್ರದ ಬಾಕ್ಸ್ ಆಫೀಸ್ ಧಮಾಕಾ; ಗಾಂಧಿ ಜಯಂತಿಯಂದು ಭಾರಿ ಕಲೆಕ್ಷನ್, 10 ಕೋಟಿ ಮೈಲಿಗಲ್ಲಿನತ್ತ ಸಿನಿಮಾ

Premada Oorali: Film Sees Massive Jump on Day 8, Crosses ₹9.8 Crore

Premada Oorali: ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಬೆಂಬಲದೊಂದಿಗೆ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸತತ ಮುನ್ನಡೆ ಸಾಧಿಸುತ್ತಿದೆ. ಗಾಂಧಿ ಜಯಂತಿಯಂದು 3.46 ಕೋಟಿ ರೂಪಾಯಿ ಗಳಿಸುವ ಮೂಲಕ ಒಟ್ಟು 9.82 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ವೀಕೆಂಡ್‌ನಲ್ಲಿ ಚಿತ್ರವು 10 ಕೋಟಿ ರೂಪಾಯಿಗಳ ಬೃಹತ್ ಮೈಲಿಗಲ್ಲನ್ನು ಸುಲಭವಾಗಿ ದಾಟುವ ನಿರೀಕ್ಷೆಯಿದೆ.

ದಿನದಿಂದ ದಿನಕ್ಕೆ ಹೆಚ್ಚಿದ ಪ್ರೇಕ್ಷಕರ ಬೆಂಬಲ

ಚಿತ್ರಮಂದಿರಗಳಲ್ಲಿ ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಮುನ್ನುಗ್ಗುತ್ತಿರುವ ‘ಪ್ರೇಮದ ಊರಲಿ’ ಸಿನಿಮಾ ಧಮಾಕಾ ಎಬ್ಬಿಸಿದೆ. ಪ್ರದರ್ಶನ ಆರಂಭವಾದ ಮೊದಲ ದಿನದಿಂದಲೇ ಹಂತ ಹಂತವಾಗಿ ಕಲೆಕ್ಷನ್ ಹೆಚ್ಚಿಸಿಕೊಳ್ಳುತ್ತಿದ್ದ ಈ ಚಿತ್ರ, ರಜಾದಿನದ ಲಾಭವನ್ನು ಪಡೆದುಕೊಂಡಿದೆ. ಗಾಂಧಿ ಜಯಂತಿಯ ಶುಭದಿನದಂದು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಜಿಗಿತ ಕಾಣುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ.

2,190 ಪ್ರದರ್ಶನಗಳ ಮೂಲಕ ಬೃಹತ್ ಯಶಸ್ಸು

ವಿಶ್ವಾದ್ಯಂತ ಒಟ್ಟು 2,190 ಪ್ರದರ್ಶನಗಳನ್ನು ಕಂಡು ಈ ಸಿನಿಮಾ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಇದುವರೆಗೆ ಭಾರತದಲ್ಲೇ ಒಟ್ಟು 9.82 ಕೋಟಿ ರೂಪಾಯಿ ಗ್ರಾಸ್ ಹಾಗೂ 8.59 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಸಾಧಾರಣ ಆರಂಭ ಪಡೆದಿದ್ದ ಚಿತ್ರವು ಇದೀಗ 10 ಕೋಟಿ ರೂಪಾಯಿ ಗಳಿಕೆಯ ಗಡಿಯ ಸಮೀಪಕ್ಕೆ ಬಂದು ತಲುಪಿದೆ.

ಮಾತು ಪ್ರಚಾರದಿಂದ ಬದಲಾದ ಗಲ್ಲಾಪೆಟ್ಟಿಗೆ ಚಿತ್ರಣ

ಮೊದಲ ದಿನ (ಸೆಪ್ಟೆಂಬರ್ 25) ಕೇವಲ 13 ಲಕ್ಷ ರೂಪಾಯಿ ಗಳಿಕೆಯೊಂದಿಗೆ ಸಿನಿಮಾ ಸಾಧಾರಣವಾಗಿ ಆರಂಭವಾಗಿತ್ತು. ಆದರೆ ಪ್ರೇಕ್ಷಕರ ಬಾಯ್ಮಾತಿನ ಪ್ರಚಾರದಿಂದಾಗಿ ವಾರದ ದಿನಗಳಲ್ಲೂ ಸತತ ಏರಿಕೆ ಕಾಣುತ್ತಾ ಬಂದಿದೆ. ಸೆಪ್ಟೆಂಬರ್ 29ರಂದು 1.09 ಕೋಟಿ, ಸೆಪ್ಟೆಂಬರ್ 30ರಂದು 1.28 ಕೋಟಿ ಹಾಗೂ ಅಕ್ಟೋಬರ್ 1ರಂದು 1.86 ಕೋಟಿ ರೂಪಾಯಿ ಬಾಚಿಕೊಂಡಿದೆ.

Premada Oorali: 8 ನೇ ದಿನದಲ್ಲಿ ಧೂಳೆಬ್ಬಿಸಿದ ‘ಪ್ರೇಮದ ಊರಲಿ’

ಅಕ್ಟೋಬರ್ 2ರ ಗಾಂಧಿ ಜಯಂತಿಯ ಸಾರ್ವಜನಿಕ ರಜಾದಿನವು ಚಿತ್ರತಂಡದ ಪಾಲಿಗೆ ದೊಡ್ಡ ಕೊಡುಗೆಯಾಗಿ ಪರಿಣಮಿಸಿತು. ಚಿತ್ರವು 8ನೇ ದಿನ ಬರೋಬ್ಬರಿ 3.46 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ದೂಳೆಬ್ಬಿಸಿದೆ. ಶೇಕಡಾ 82 ರಷ್ಟು ಹೌಸ್‌ಫುಲ್ ಪ್ರದರ್ಶನ ಕಾಣುವ ಮೂಲಕ ಚಿತ್ರಮಂದಿರಗಳತ್ತ ಜನಸಾಗರವೇ ಹರಿದುಬರುತ್ತಿದೆ.