☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

Darshan Case: ದರ್ಶನ್ಗೆ ಹಳೆಯ ತಪ್ಪೇ ಮುಳುವಾಗುತ್ತಾ? ಚಿಕಿತ್ಸೆ ಅರ್ಜಿಗೆ ಎಸ್ಪಿಪಿ ಬಿಗ್ ಶಾಕ್

Darshan Case: Medical Treatment Application SPP Objections and Court Hearing Details
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬೆನ್ನು ನೋವಿನ ಚಿಕಿತ್ಸೆ ಅರ್ಜಿಗೆ ಎಸ್ಪಿಪಿ ಆಕ್ಷೇಪಿಸಿದ್ದು, 59ನೇ ಸಿಸಿಎಚ್ ಕೋರ್ಟ್ ವಿಚಾರಣೆ ಇತ್ಯರ್ಥಪಡಿಸುವ ಸಾಧ್ಯತೆಯಿದೆ.

ಮುಖ್ಯಾಂಶಗಳು

  • ದರ್ಶನ್ ಬೆನ್ನು ನೋವಿನ ಅರ್ಜಿಗೆ ಆಕ್ಷೇಪ.
  • ಎಸ್ಪಿಪಿ ವಾದದ ಮೇಲೆ ಚಿಕಿತ್ಸೆ ಭವಿಷ್ಯ.
  • 59ನೇ ಸಿಸಿಎಚ್ ಕೋರ್ಟ್ನಲ್ಲಿ ನಿರ್ಣಾಯಕ ವಿಚಾರಣೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಜೈಲಿನಲ್ಲಿರುವ ನಟ ದರ್ಶನ್ (Darshan Case) ಅವರಿಗೆ ಸದ್ಯ ಮತ್ತೆ ಬೆನ್ನು ನೋವು ತೀವ್ರಗೊಂಡಿದೆ. ಈ ಹಿಂದೆ ಅವರಿಗೆ ವೈದ್ಯಕೀಯ ಆಧಾರದ ಮೇಲೆ ಮಧ್ಯಂತರ ಜಾಮೀನು ಸಿಕ್ಕಿತ್ತು.

ಆ ನಂತರ ನಟ ದರ್ಶನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಈಗ ಜೈಲಿನಲ್ಲಿ ನಟನಿಗೆ ಮತ್ತೆ ಬೆನ್ನು ನೋವು ಮರುಕಳಿಸಿದ್ದು, ಅವರು ತೀವ್ರ ನೋವಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.

ಇದೀಗ ನಟ ದರ್ಶನ್ ಅವರಿಗೆ ಜೈಲಿನಲ್ಲಿ ಅಗತ್ಯ ಫಿಸಿಯೋಥೆರಪಿ ಹಾಗೂ ಸೂಕ್ತ ವೈದ್ಯಕೀಯ ಚಿಕಿತ್ಸೆಗೆ ಅನುಮತಿ ಸಿಗುತ್ತದೆಯೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಇಂದು ಕೋರ್ಟ್ ನೀಡುವ ಆದೇಶದ ಮೇಲೆ ದರ್ಶನ್ ಅವರ ಚಿಕಿತ್ಸೆಯ ಭವಿಷ್ಯ ಆಧಾರಿತವಾಗಿದೆ.

59ನೇ ಸಿಸಿಎಚ್ ಕೋರ್ಟ್ ನೀಡುವ ಆದೇಶದ ಮೇಲೆ ಚಿಕಿತ್ಸೆ ಭವಿಷ್ಯ

ನಟ ದರ್ಶನ್ ಅವರಿಗೆ ವಿಪರೀತ ಬೆನ್ನುನೋವು ಇರುವ ಕಾರಣ ತಕ್ಷಣವೇ ಸೂಕ್ತ ಫಿಸಿಯೋಥೆರಪಿ ಚಿಕಿತ್ಸೆ ನೀಡಬೇಕು ಎಂದು ಕೋರ್ಟ್‌ಗೆ ಮನವಿ ಮಾಡಲಾಗಿದೆ. ದರ್ಶನ್ ಅವರಿಗೆ ಕಳೆದ 12 ವರ್ಷಗಳಿಂದ ಬೆನ್ನುಹುರಿಯ L4, L5 (ಹಾಗೂ L6) ಸಮಸ್ಯೆ ಇದೆ.

ಹೊರಗಡೆ ಇದ್ದಾಗ ಅವರು ನಿರಂತರವಾಗಿ ಫಿಸಿಯೋಥೆರಪಿ ಮಾಡಿಸಿಕೊಳ್ಳುತ್ತಿದ್ದರು ಮತ್ತು ಸ್ಟಿರಾಯ್ಡ್ ಇಂಜೆಕ್ಷನ್ ಕೂಡ ಪಡೆಯುತ್ತಿದ್ದರು. ಆದರೆ ಜೈಲಿಗೆ ಹೋದ ಬಳಿಕ ಸರಿಯಾದ ಫಿಸಿಯೋಥೆರಪಿ ಸಿಕ್ಕಿಲ್ಲ.

ಇದನ್ನು ಓದಿ: Darshan: ದರ್ಶನ್ಗೆ ಮತ್ತೆ ತೀವ್ರ ಬೆನ್ನು ನೋವು; ಫಿಸಿಯೋಥೆರಪಿಗೆ ವಕೀಲರ ಭರ್ಜರಿ ವಾದ

ಇದರಿಂದಾಗಿ ಬೆನ್ನುನೋವಿನ ಸಮಸ್ಯೆ ಇನ್ನಷ್ಟು ಹೆಚ್ಚಾಗಿದ್ದು, ಸರಿಯಾಗಿ ಕುಳಿತುಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅರ್ಜಿ ಪರಿಶೀಲಿಸಿ ತಕ್ಷಣವೇ ವೈದ್ಯಕೀಯ ಚಿಕಿತ್ಸೆಗೆ ಆದೇಶ ನೀಡುವಂತೆ ವಕೀಲರು ಕೋರಿದ್ದಾರೆ.

Darshan Case: ಕಳೆದ ಬಾರಿ ಜಾಮೀನು ಸಿಕ್ಕರೂ ಚಿಕಿತ್ಸೆ ಪಡೆದಿರಲಿಲ್ಲವೇ?

ಇನ್ನೊಂದೆಡೆ ಪ್ರಾಸಿಕ್ಯೂಷನ್ (SPP) ನಟನ ಚಿಕಿತ್ಸೆಯ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದು, ಇಂದು ಪ್ರಮುಖ ವಾದ ಮಂಡಿಸಲಿದೆ. ಕಳೆದ ಬಾರಿ ಬೆನ್ನುನೋವಿನ ನೆಪದಲ್ಲೇ ಜಾಮೀನು ಪಡೆದಿದ್ದ ದರ್ಶನ್, ಆ ಸಂದರ್ಭದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪೂರ್ಣ ಚಿಕಿತ್ಸೆಗೆ ಒಳಪಟ್ಟಿರಲಿಲ್ಲ.

ಜೊತೆಗೆ ಪರಪ್ಪನ ಅಗ್ರಹಾರದಲ್ಲಿದ್ದಾಗ ಫಿಸಿಯೋಥೆರಪಿ ಅಗತ್ಯವಿಲ್ಲ ಎಂದು ಕೆಲ ವೈದ್ಯರು ವರದಿ ನೀಡಿದ್ದರು. ಈ ಹಿಂದಿನ ಅಂಶಗಳನ್ನೇ ಪ್ರಮುಖ ಅಸ್ತ್ರವಾಗಿಟ್ಟುಕೊಂಡು ವಿಶೇಷ ಸರ್ಕಾರಿ ಅಭಿಯೋಜಕರು (SPP) ಕೋರ್ಟ್‌ನಲ್ಲಿ ವಾದ ಮಂಡಿಸುವ ಸಾಧ್ಯತೆಯಿದೆ.

ಒಟ್ಟಾರೆಯಾಗಿ ಕಳೆದ ಬಾರಿ ದರ್ಶನ್ ಮಾಡಿದ ನಿರ್ಧಾರವೇ ಈಗ ಅವರಿಗೆ ತಿರುಗುಬಾಣವಾಗುತ್ತದೆಯೇ ಅಥವಾ ಕೋರ್ಟ್ ಅವರಿಗೆ ವೈದ್ಯಕೀಯ ನೆರವು ನೀಡಲು ಸಮ್ಮತಿಸುತ್ತದೆಯೇ ಎಂಬುದು ಇಂದಿನ ವಿಚಾರಣೆಯಲ್ಲಿ ಸ್ಪಷ್ಟವಾಗಲಿದೆ.