☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

BBK 13: ಕ್ಯಾಪ್ಟನ್ ಪಟ್ಟಕ್ಕೇರಿದ ಯಶಸ್, ‘ಉತ್ತಮ’ನಾದ ತಾಂಡವ್; ಅನಾಮಧೇಯ ಪತ್ರದಿಂದ ಶುರುವಾಯ್ತು ಕಿರಿಕ್

BBK 13: Yashas Becomes Captain Tandav Ram Wins Uttama Anonymous Letter Controversy
ಬಿಗ್ ಬಾಸ್ ಕನ್ನಡ 13ರಲ್ಲಿ ಯಶಸ್ ಗೌಡ ಕ್ಯಾಪ್ಟನ್ ಆಗಿದ್ದು, ತಾಂಡವ್ ರಾಮ್ ಉತ್ತಮ ಪಟ್ಟ ಪಡೆದಿದ್ದಾರೆ. ಇದೇ ವೇಳೆ ಅನಾಮಧೇಯ ಪತ್ರದ ಚಟುವಟಿಕೆ ಮನೆಯಲ್ಲಿ ವಾಗ್ವಾದಕ್ಕೆ ಕಾರಣವಾಗಿದೆ.

ಮುಖ್ಯಾಂಶಗಳು

  • ಯಶಸ್ ಗೌಡ ಬಿಗ್ ಬಾಸ್ ಕ್ಯಾಪ್ಟನ್.
  • ತಾಂಡವ್ ರಾಮ್ಗೆ 'ಉತ್ತಮ' ಪಟ್ಟ.
  • ಕಟು ಅನಾಮಧೇಯ ಪತ್ರಗಳ ಶಾಕ್.

‘ಬಿಗ್ ಬಾಸ್ ಕನ್ನಡ ಸೀಸನ್ 13’ (BBK 13) ರಿಯಾಲಿಟಿ ಶೋನಲ್ಲಿ ಈ ವಾರದ ಕ್ಯಾಪ್ಟನ್ಸಿ ಓಟ ಅತ್ಯಂತ ಕಠಿಣವಾಗಿತ್ತು. ಅಂತಿಮವಾಗಿ ಗಾನವಿ ಗೌಡ ಅವರನ್ನು ಮಣಿಸಿದ ಯಶಸ್ ಗೌಡ ಅತ್ಯಂತ ವೇಗವಾಗಿ ಟಾಸ್ಕ್ ಪೂರ್ಣಗೊಳಿಸಿ ಮನೆಯ ಕ್ಯಾಪ್ಟನ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.

ಯಶಸ್ ಕ್ಯಾಪ್ಟನ್ ಆಗಿದ್ದಕ್ಕೆ ಮನೆಯಲ್ಲಿದ್ದ ಆಸಿಯಾ ಫಿರ್ದೋಸ್ ಹಾಗೂ ಸೌಂದರ್ಯ ಶೆಟ್ಟಿ ಭಾರಿ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ, ಈ ವಾರದ ಅತ್ಯುತ್ತಮ ಆಟ ಪ್ರದರ್ಶಿಸಿದ ನಟ ತಾಂಡವ್ ರಾಮ್ ಅವರಿಗೆ ಮನೆಮಂದಿ ‘ಉತ್ತಮ’ ಪಟ್ಟ ನೀಡಿದ್ದಾರೆ.

ಜಗದೀಶ್, ಗಗನ್ ಚಿನ್ನಪ್ಪ, ಪ್ರಶಾಂತ್ ಹಾಗೂ ಯಶಸ್ ಅವರ ಮತಗಳನ್ನು ಪಡೆದು ತಾಂಡವ್ ಈ ಗೌರವಕ್ಕೆ ಪಾತ್ರರಾದರು. ಇದರ ನಡುವೆ ಬಿಗ್ ಬಾಸ್ ನೀಡಿದ ಅನಾಮಧೇಯ ಪತ್ರದ ಚಟುವಟಿಕೆ ಮನೆಯಲ್ಲಿ ದೊಡ್ಡ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.

ಗಾನವಿಯನ್ನು ಮಣಿಸಿ ಕ್ಯಾಪ್ಟನ್ ಪಟ್ಟಕ್ಕೇರಿದ ಯಶಸ್

ಈ ವಾರದ ಕ್ಯಾಪ್ಟನ್ಸಿ ರೇಸ್‌ಗೆ ಅಂತಿಮವಾಗಿ ಘಾಟಿ ಗಾನವಿ ಹಾಗೂ ಯಶಸ್ ಗೌಡ ಮುಖಾಮುಖಿಯಾಗಿದ್ದರು. ಬಿಗ್ ಬಾಸ್ ನೀಡಿದ ರೋಚಕ ಟಾಸ್ಕ್ ಅನ್ನು ಅತ್ಯಂತ ಜಾಣ್ಮೆಯಿಂದ ಪೂರ್ಣಗೊಳಿಸಿದ ಯಶಸ್ ಗೌಡ ಮೊದಲ ಬಾರಿಗೆ ಮನೆಯ ಕ್ಯಾಪ್ಟನ್ ಆಗಿ ಹೊರಹೊಮ್ಮಿದರು.

ಇತ್ತ ಉತ್ತಮ ಪಟ್ಟದ ರೇಸ್‌ನಲ್ಲಿ ಯಶಸ್ ಹಾಗೂ ಧನುಷ್ ತಲಾ ಮೂರು ಮತಗಳನ್ನು ಪಡೆದಿದ್ದರು. ಆದರೆ ತಾಂಡವ್ ರಾಮ್ ಅವರ ಈ ವಾರದ ಒಟ್ಟಾರೆ ಆಟ ಹಾಗೂ ಪ್ರದರ್ಶನವನ್ನು ಬಹುತೇಕ ಸದಸ್ಯರು ಮೆಚ್ಚಿಕೊಂಡು ಅವರಿಗೆ ‘ಉತ್ತಮ’ ಪಟ್ಟ ನೀಡಿದರು.

ಅನಾಮಧೇಯ ಪತ್ರಗಳ ಕಟು ಮಾತು; ಹೆಚ್ಚಿದ ಮಾತಿನ ಚಕಮಕಿ

ಸ್ಪರ್ಧಿಗಳಿಗೆ ತಮ್ಮ ಕುಟುಂಬದ ಪತ್ರ ಸಿಕ್ಕ ಬೆನ್ನಲ್ಲೇ ಬಿಗ್ ಬಾಸ್ ಮತ್ತೊಂದು ಟ್ವಿಸ್ಟ್ ನೀಡಿದ್ದರು. ಮನೆಯ ಸದಸ್ಯರು ತಮಗೆ ಇಷ್ಟವಾಗದ ಸಹ-ಸ್ಪರ್ಧಿಗಳಿಗೆ ಅನಾಮಧೇಯವಾಗಿ ಕಟು ಮಾತುಗಳಲ್ಲಿ ಪತ್ರ ಬರೆಯುವ ಚಟುವಟಿಕೆ ಇದಾಗಿತ್ತು.

ಯಾರು ಬರೆದಿದ್ದಾರೆ ಎಂಬ ಸುಳಿವು ನೀಡದೆ ಪತ್ರಗಳನ್ನು ಹಂಚಲಾಯಿತು. ಸೌಂದರ್ಯ, ಪ್ರಶಾಂತ್ ಹಾಗೂ ಕಿರಣ್ ಶಾಸ್ತ್ರಿ ಅವರ ಕುರಿತು ಪತ್ರಗಳಲ್ಲಿ ಅತ್ಯಂತ ಕಟುವಾಗಿ ಟೀಕಿಸಲಾಗಿತ್ತು. ಈ ಮಾತುಗಳು ಸ್ಪರ್ಧಿಗಳ ಮನಸ್ಸಿಗೆ ತೀವ್ರ ಬೇಸರ ತಂದಿದ್ದು, ಮನೆಯಲ್ಲಿ ವಾಗ್ವಾದಗಳು ಹೆಚ್ಚಾದವು.

ಇದನ್ನು ಓದಿ: BBK 13: ಜಗ್ಗಿ ವರ್ಸಸ್ ಸೌಂದರ್ಯ ಜಗಳದಿಂದ ಅಲ್ಲೋಲಕಲ್ಲೋಲವಾದ ಬಿಗ್ ಬಾಸ್ ಮನೆ

BBK 13: ಕಿರಣ್ ಶಾಸ್ತ್ರಿಗೆ ಬಂತು ಕಟು ಪದಗಳ ಅನಾಮಧೇಯ ಪತ್ರ

ವಿಶೇಷವಾಗಿ ಸ್ಪರ್ಧಿ ಕಿರಣ್ ಶಾಸ್ತ್ರಿಗೆ ಬಂದ ಅನಾಮಧೇಯ ಪತ್ರದ ಮಾತುಗಳು ಎಲ್ಲರಿಗೂ ಶಾಕ್ ನೀಡಿದವು. “ವಯಸ್ಸಿನಲ್ಲಿ ಸಣ್ಣವ ಶಾಸ್ತ್ರಿ, ಗುಣ ಹಾಗೂ ನಡತೆಯಲ್ಲೂ ಸಣ್ಣವ. ಆಟದಲ್ಲಿ ಝೀರೋ” ಎಂದು ಕಟುವಾಗಿ ಬರೆಯಲಾಗಿತ್ತು.

“ಮತ್ತೊಬ್ಬರ ದುಃಖದಲ್ಲಿ ಖುಷಿ ಕಾಣುವ ನೀನು ತುಂಬಾ ನೀಚ, ಆದಷ್ಟು ಬೇಗ ಮನೆಗೆ ಹೊರಡು” ಎಂದು ಪತ್ರದಲ್ಲಿ ವೈಯಕ್ತಿಕವಾಗಿ ವಾಗ್ದಾಳಿ ನಡೆಸಲಾಗಿತ್ತು. ಈ ಪತ್ರದ ವಿಚಾರ ಬಿಗ್ ಬಾಸ್ ಮನೆಯಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.