☔ Weather
Bengaluru: ☀️ 25°C | AQI 128
Mysore: ☀️ 23°C | AQI 152
Mangalore: ☀️ 28°C | AQI 184
Bengaluru: ☀️ 25°C | AQI 128
☔ Weather
Bengaluru: ☀️ 25°C | AQI 128
Mysore: ☀️ 23°C | AQI 152
Mangalore: ☀️ 28°C | AQI 184
Bengaluru: ☀️ 25°C | AQI 128

BBK 13: ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಸೋನಿಕಾ ಎಲಿಮಿನೇಷನ್; ಸೇಫ್ ಆದ ಜಗ್ಗ ಮಮ್ಮಿ ಹಾಗೂ ಪ್ರಶಾಂತ್

BBK 13: Sonika Evicted From House After 50 Days Kiccha Sudeep Weekend
ಬಿಗ್ ಬಾಸ್ ಕನ್ನಡ ಮನೆಯಿಂದ ಈ ವಾರ ಸೋನಿಕಾ ಎಲಿಮಿನೇಟ್ ಆಗಿ ಹೊರಬಂದಿದ್ದು, ಪ್ರಶಾಂತ್ ಹಾಗೂ ಜಗ್ಗ ಮಮ್ಮಿ ಸೇಫ್ ಆಗಿದ್ದಾರೆ.

ಮುಖ್ಯಾಂಶಗಳು

  • ಬಿಗ್ ಬಾಸ್ ಮನೆಯಿಂದ ಸೋನಿಕಾ ಎಲಿಮಿನೇಷನ್.
  • ಸೇಫ್ ಆದ ಜಗ್ಗ ಮಮ್ಮಿ ಹಾಗೂ ಪ್ರಶಾಂತ್.
  • 50 ದಿನಗಳ ಆಟದ ಬಳಿಕ ಹೊರಬಂದ ಸೋನಿಕಾ.

ಬಿಗ್ ಬಾಸ್ ಕನ್ನಡ (BBK 13) ಮನೆಯಿಂದ ಮತ್ತೊಬ್ಬ ಸ್ಪರ್ಧಿ ಅಧಿಕೃತವಾಗಿ ಹೊರಬಂದಿದ್ದಾರೆ. ಪ್ರತಿ ವಾರದಂತೆ ಈ ವಾರವೂ ಕೂಡ ಹಲವು ಪ್ರಮುಖ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು.

ಆಸಿಯಾ, ಗಾನವಿ, ಧನುಶ್, ಸೋನಿಕಾ, ಜಗ್ಗ ಮಮ್ಮಿ ಹಾಗೂ ಪ್ರಶಾಂತ್ ಸೇರಿದಂತೆ ಹಲವರು ನಾಮಿನೇಟ್ ಆಗಿ ಡೇಂಜರ್ ಜೋನ್‌ನಲ್ಲಿದ್ದರು.

ವಾರಾಂತ್ಯದಲ್ಲಿ ಶೋ ನಿರೂಪಕ ಕಿಚ್ಚ ಸುದೀಪ್ ಅವರು ಆಸಿಯಾ, ಧನುಶ್ ಹಾಗೂ ಗಾನವಿ ಅವರನ್ನು ಮೊದಲು ಸೇಫ್ ಮಾಡಿದರು.

ಕೊನೆಯಲ್ಲಿ ಉಳಿದುಕೊಂಡ ಪ್ರಮುಖ ಮೂವರು ಸ್ಪರ್ಧಿಗಳು

ಆಟದ ಅಂತಿಮ ಘಟ್ಟದಲ್ಲಿ ಸೋನಿಕಾ, ಜಗದೀಶ್ (ಜಗ್ಗ ಮಮ್ಮಿ) ಮತ್ತು ಪ್ರಶಾಂತ್ ಮಾತ್ರ ಉಳಿದುಕೊಂಡರು. ಈ ಮೂವರನ್ನು ಬಿಗ್ ಬಾಸ್ ಮನೆಯ ಮುಖ್ಯ ದ್ವಾರದ ಹಿಂದೆ ನಿಲ್ಲಿಸಲಾಯಿತು.

ಸ್ವಲ್ಪ ಹೊತ್ತಿನ ಬಳಿಕ ಸ್ಟೇಜ್ ಮೇಲೆ ದಟ್ಟವಾದ ಹೊಗೆ ಆವರಿಸಿಕೊಂಡಿತು. ಆ ಹೊಗೆಯ ನಡುವೆ ಸೋನಿಕಾ ಅವರು ಹೊರಬರುವುದು ಕನ್ಫರ್ಮ್ ಆಯಿತು.

ಇದನ್ನು ಓದಿ: BBK 13: ಯಶಸ್ vs ಮಂಜು ಟಾಸ್ಕ್ ಗೊಂದಲಕ್ಕೆ ಬಿತ್ತು ತೆರೆ; ಎಐ ಸಹಾಯದಿಂದ ಗೆದ್ದವರು ಯಾರು ಗೊತ್ತಾ?

ಪ್ರಶಾಂತ್ ಮತ್ತು ಜಗದೀಶ್ ಅವರು ಮನೆಯೊಳಗೆ ಸುರಕ್ಷಿತವಾಗಿ ಉಳಿದುಕೊಂಡರು. ವೈಲ್ಡ್ ಕಾರ್ಡ್ ಮೂಲಕ ಬಂದಿದ್ದ ಸೋನಿಕಾ ಈಗ ಮನೆಯಿಂದ ಹೊರಬಿದ್ದಿದ್ದಾರೆ.

BBK 13: ಸೋನಿಕಾ ಎಲಿಮಿನೇಷನ್‌ಗೆ ಅಸಲಿ ಕಾರಣವೇನು?

ಸೋನಿಕಾ ಅವರು ಗಾನವಿ ಹಾಗೂ ಪ್ರಶಾಂತ್ ಜೊತೆ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಬರೋಬ್ಬರಿ 50 ದಿನಗಳ ಬಳಿಕ ಅವರು ಈಗ ಮನೆಯಿಂದ ಹೊರನಡೆದಿದ್ದಾರೆ.

ಆರಂಭದಲ್ಲಿ ಹೆಚ್ಚು ಮಾತನಾಡದೇ ಇದ್ದಿದ್ದೆ ತಾವು ಹೊರಹೋಗಲು ಕಾರಣವಾಯಿತೆಂದು ಸೋನಿಕಾ ಬೇಸರ ವ್ಯಕ್ತಪಡಿಸಿದರು. ಸುದೀಪ್ ಜೊತೆ ಮಾತನಾಡುತ್ತಾ ತಮ್ಮ ತಪ್ಪನ್ನು ಒಪ್ಪಿಕೊಂಡರು.

ಫ್ಯಾಷನ್ ಉದ್ಯಮದಲ್ಲಿದ್ದ ಅವರಿಗೆ ಸಿನಿಮಾ ಹಾಗೂ ಟಿವಿಯಲ್ಲಿ ನಟಿಸುವ ಆಸೆಯಿತ್ತು. ಆ ಕನಸಿನೊಂದಿಗೆ ಬಿಗ್ ಬಾಸ್ ಪ್ರವೇಶಿಸಿದ್ದ ಅವರ ಪಯಣ ಸದ್ಯಕ್ಕೆ ಅಂತ್ಯಗೊಂಡಿದೆ.