‘ಬಿಗ್ ಬಾಸ್ ಕನ್ನಡ ಸೀಸನ್ 13’ರ (BBK 13) ಆಟಕ್ಕೆ ಈಗ 80 ದಿನಗಳು ಕಳೆದಿವೆ. ಫಿನಾಲೆ ಹತ್ತಿರವಾಗುತ್ತಿದ್ದಂತೆ ದೊಡ್ಮನೆಯಲ್ಲಿ ಹಲವು ಹೊಸ ಟ್ವಿಸ್ಟ್ಗಳನ್ನು ನೀಡಲಾಗುತ್ತಿದೆ.
ಸದ್ಯ ಮನೆಯಲ್ಲಿ ‘ಗುಳ್ಳೆನರಿ’ ಆಟ ಶುರುವಾಗಿದೆ. ಇಡೀ ಮನೆಯಲ್ಲಿ ಒಬ್ಬರು ಗುಳ್ಳೆನರಿಯಾಗಿದ್ದು, ತಂಡದ ಒಳಗೇ ಇದ್ದುಕೊಂಡು ಆಟವನ್ನು ಕೆಡಿಸುವ ಟಾಸ್ಕ್ ಅವರಿಗೆ ಸಿಕ್ಕಿದೆ.
ಅಸಲಿಗೆ ಯಶಸ್ ಅವರೇ ಗುಳ್ಳೆನರಿಯಾಗಿದ್ದಾರೆ. ಆದರೆ ಈ ಸತ್ಯ ತಿಳಿಯದ ಗಗನ್ ಚಿನ್ನಪ್ಪ ಅವರು ಗಾನವಿ ಮೇಲೆ ಹೆಚ್ಚು ಅನುಮಾನ ವ್ಯಕ್ತಪಡಿಸಿದ್ದಾರೆ.
ಗಾನವಿ ಮೇಲೆ ಗಗನ್ ಚಿನ್ನಪ್ಪ ಅನುಮಾನ ಏಕೆ?
ಗಾನವಿ ಮತ್ತು ಗಗನ್ ಚಿನ್ನಪ್ಪ ನಡುವೆ ಮೊದಲಿನಿಂದಲೂ ಕಿರಿಕ್ ನಡೆಯುತ್ತಲೇ ಇದೆ. ಈ ಹಿಂದೆ ಇಬ್ಬರೂ ಪರಸ್ಪರ ಹೀನಾಯ ಮಾತುಗಳಿಂದ ನಿಂದಿಸಿಕೊಂಡಿದ್ದರು.
ಬಳಿಕ ರಾಜಿ ಮಾಡಿಕೊಳ್ಳುವ ಪ್ರಯತ್ನ ನಡೆದಿದ್ದರೂ, ಇಬ್ಬರ ನಡುವಿನ ಭಿನ್ನಾಭಿಪ್ರಾಯ ಮುಂದುವರಿದಿದೆ. ಹೀಗಾಗಿ ಅವರಿಗೆ ಒಬ್ಬರ ಮೇಲೆ ಒಬ್ಬರಿಗೆ ಅನುಮಾನ ಮೂಡಿದೆ.
ಗಾನವಿ ಮಾತನಾಡುವ ಶೈಲಿ ಸಂಪೂರ್ಣ ಬದಲಾಗಿದೆ ಎಂಬುದು ಗಗನ್ ಅಭಿಪ್ರಾಯವಾಗಿದೆ. ಆದ್ದರಿಂದ ಗಾನವಿ ಅವರೇ ಗುಳ್ಳೆನರಿ ಎಂದು ಗಗನ್ ಬಲವಾಗಿ ಭಾವಿಸಿದ್ದಾರೆ.
ನಂಬಿಕೆದ್ರೋಹ ಮಾಡಿದ್ರಾ ಗಾನವಿ? ಗಗನ್ ವಾರ್ನಿಂಗ್
ವಾಸ್ತವದಲ್ಲಿ ಗಾನವಿ ಗುಳ್ಳೆನರಿ ಅಲ್ಲ. ಆದರೂ ಗಗನ್ ಪಾಲಿಗೆ ಗಾನವಿ ನಂಬಿಕೆದ್ರೋಹ ಮಾಡಿದಂತಾಗಿದೆ. ತಮ್ಮ ವಿಶೇಷ ಅಧಿಕಾರ ಬಳಸಿ ಗಾನವಿ ಅವರು ಗಗನ್ ಅವರ ಗುಟ್ಟನ್ನು ರಟ್ಟು ಮಾಡಿದ್ದಾರೆ. ಈ ಘಟನೆ ಬಳಿಕ ಗಗನ್ ಅವರಿಗೆ ತೀವ್ರ ಕೋಪ ಬಂದಿದೆ.
ಇದನ್ನು ಓದಿ: BBK 13: ಫಿನಾಲೆ ಹತ್ತಿರವಾಗುತ್ತಿದ್ದಂತೆ ಮನೆಯೊಳಗೆ ದ್ರೋಹದ ಆಟ; ಗಾನವಿ-ಗಗನ್ ಆಯ್ಕೆ ಯಾರ ಮೇಲೆ?
ಈಗ ನನ್ನ ಗೇಮ್ ಶುರು, ಇನ್ಮೇಲೆ ನಿನ್ನನ್ನು ಎಲ್ಲಿ ಇಡಬೇಕೋ ಅಲ್ಲಿ ಇಡುತ್ತೇನೆ ಎಂದು ಗಗನ್ ತಿರುಗೇಟು ನೀಡಿದ್ದಾರೆ. ಸಿಕ್ಕ ಸಿಕ್ಕ ಕಡೆ ನನ್ನನ್ನು ಎಕ್ಸ್ಪೋಸ್ ಮಾಡುವುದೇ ಅವಳ ಉದ್ದೇಶ ಎಂದು ತಾಂಡವ್ ಬಳಿ ಗಗನ್ ಹೇಳಿಕೊಂಡಿದ್ದಾರೆ. ಈ ಬೆಳವಣಿಗೆಯಿಂದ ಗಾನವಿ ಮತ್ತು ಗಗನ್ ನಡುವಿನ ಬಿರುಕು ಇನ್ನಷ್ಟು ದೊಡ್ಡದಾಗಿದೆ.
BBK 13: ಕಣ್ಣೀರು ಹಾಕಿ ಆಟ ಬಿಡುವ ಮಾತನಾಡಿದ ಆಸಿಯಾ
ಇತ್ತ ಗಾನವಿ ಮತ್ತು ಆಸಿಯಾ ಅವರು ಮನೆಯಲ್ಲಿ ಯಾರಿಂದಲೂ ನಂಬಿಕಸ್ಥರ ಸ್ಥಾನ ಪಡೆದಿಲ್ಲ. ಅದರಲ್ಲೂ ಆಸಿಯಾ ಅವರೇ ಗುಳ್ಳೆನರಿ ಎಂದು ಯಶಸ್ ಪದೇ ಪದೇ ಅನುಮಾನ ವ್ಯಕ್ತಪಡಿಸಿದ್ದಾರೆ.
ಇದರಿಂದ ಆಸಿಯಾ ಅವರಿಗೆ ತೀವ್ರವಾಗಿ ನೋವಾಗಿದೆ. ಮನಸ್ಸಿಗೆ ಬೇಸರವಾಗಿ ಅವರು ಕಣ್ಣೀರು ಹಾಕಿದ್ದಾರೆ. ತಮ್ಮ ಮೇಲೆ ಸುಖಾಸುಮ್ಮನೆ ಅನುಮಾನ ಪಡುತ್ತಿರುವುದರಿಂದ ಬೇಸತ್ತ ಆಸಿಯಾ, ಆಟವನ್ನು ಅರ್ಧಕ್ಕೆ ತೊರೆಯಲು ಕೂಡ ತಾವು ಸಿದ್ಧ ಎಂದು ಹೇಳಿದ್ದಾರೆ.




