ಗಗನ್‌ಗೆ ಕಿಚ್ಚನ ಕ್ಲಾಸ್

ಮೊದಲ ವಾರದಲ್ಲಿ ಗಗನ್‌ ಕಿಚ್ಚನ ಕೆಂಗಣ್ಣಿಗೆ ಗುರಿಯಾದರು. ಗಗನ್ ಕಳೆದ ವಾರ ಚೆನ್ನಾಗಿ ಆಡಿ ವಿಐಪಿಯಾಗಿದ್ದರು. ಅವರ ಆಟವನ್ನು ಕಿಚ್ಚ ಸುದೀಪ್ ಮೆಚ್ಚಿ ಹೊಗಳುತ್ತಿದ್ದರು. ಇದೇ ವೇಳೆ ಗಗನ್ ಅವರ ಸ್ಟ್ರಾಟಜಿ ಬಗ್ಗೆನೂ ಮಾತಾಡುವುದಕ್ಕೆ ಶುರು ಮಾಡಿದ್ದರು. ಆ ವೇಳೆ ಗಗನ್ “ಹೊಗಳಿ ತಂದಿಡುತ್ತಿದ್ದೀರಲ್ಲ ಸರ್” ಎಂದು ಹೇಳಿದರು. ಅದನ್ನು ಕೇಳುತ್ತಿದ್ದಂತೆ ಸುದೀಪ್ ಗರಂ ಆದರು.