ಬಿಗ್ ಬಾಸ್ ಕನ್ನಡ ಸೀಸನ್ 13ರ ಮೊದಲ ‘ವಾರದ ಕಥೆ ಕಿಚ್ಚನ ಕಥೆ’ ಆರಂಭ ಆಗಿದೆ. ಮೊದಲ ಸಂಚಿಕೆಯಲ್ಲಿಯೇ ಕಿಚ್ಚ ಸುದೀಪ್ ವೀಕ್ಷಕರ ಮುಂದೆ ಕುತೂಹಲಕರ ವಿಷಯವನ್ನು ರಿವೀಲ್ ಮಾಡಿದ್ದಾರೆ. ಈ ವಾರ ಒಬ್ಬರು ಸ್ಪರ್ಧಿ ಎಲಿಮಿನೇಟ್ ಆಗಲಿದ್ದಾರೆ. ಬಿಗ್ ಬಾಸ್ ಆರಂಭ ಆಗಿ ಒಂದು ವಾರ ಕಳೆದರೂ ಇನ್ನೂ ಐದು ಮಂದಿ ಮನೆಯೊಳಗೆ ಪ್ರವೇಶ ಮಾಡಿಲ್ಲ. ಒಂದು ವೇಳೆ ಐದು ಮಂದಿಯಲ್ಲಿ ಒಬ್ಬರು ಎಲಿಮಿನೇಟ್ ಆದರೆ, ಇತಿಹಾಸದಲ್ಲಿ ಮನೆಯೊಳಗೆ ಪ್ರವೇಶ ಮಾಡದೇ ಎಲಿಮಿನೇಟ್ ಆದ ಮೊದಲ ಸ್ಪರ್ಧಿಯಾಗಲಿದ್ದಾರೆ.




