ಬಿಗ್ ಬಾಸ್ ಸೀಸನ್ 13ರ ಮೊದಲ ವಾರಾಂತ್ಯದ ಪಂಚಾಯಿತಿಗೆ ಕಿಚ್ಚ ಸುದೀಪ್ ಆಗಮಿಸಿದ್ದು, ಮನೆಯಲ್ಲಿ ನಡೆದ ಸೆಲೆಬ್ರಿಟಿ ಮತ್ತು ಕಾಮನ್ ಮ್ಯಾನ್ ಭೇದಭಾವದ ಬಗ್ಗೆ ಪ್ರಶ್ನಿಸಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿದ ಸ್ಪರ್ಧಿಗಳಿಗೆ ಸುದೀಪ್ ಖಡಕ್ ಎಚ್ಚರಿಕೆ ನೀಡಿದ್ದು, ಈ ವಿಶೇಷ ಸಂಚಿಕೆ ಶನಿವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.




