Astrology News: ಸೆಪ್ಟೆಂಬರ್ 20, 2026 ರ ನಿತ್ಯ ಭವಿಷ್ಯವು (Dina Bhavishya) ನಿಮ್ಮ ರಾಶಿ ಫಲವನ್ನು ವಿವರವಾಗಿ ತಿಳಿಸುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳಿಗೆ ಇಂದು ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಶುಕ್ಲ ಪಕ್ಷದ ದಶಮೀ ತಿಥಿಯ ಭಾನುವಾರದಂದು (Sunday Horoscope) ಬೋಧನೆ, ನಿಧಾನಗತಿ, ಪಿತ್ತದ ಪ್ರಕೋಪ, ಬಂಧನದ ಭೀತಿ, ತಂದೆಯ ಜೊತೆ ಕಲಹ, ಸ್ನೇಹಿತರಿಂದ ದುಃಖ, ಪ್ರಾಯಶ್ಚಿತ್ತ ಇವೆಲ್ಲ ಈ ದಿನದ ವಿಶೇಷ.
ಗ್ರಹಗಳ ಪ್ರಭಾವವು ನಿಮ್ಮ ರಾಶಿಗಳ ಮೇಲೆ ಬೀರುವ ಪರಿಣಾಮವನ್ನು ತಿಳಿದುಕೊಳ್ಳಿ. ದಿನದ ಶುಭ ಹಾಗೂ ಅಶುಭ ಸಮಯಗಳ ಪಂಚಾಂಗ ವಿವರಗಳು ಇಲ್ಲಿವೆ. ಯಾವ ರಾಶಿಯವರು ಇಂದು ಮುನ್ನೆಚ್ಚರಿಕೆ ವಹಿಸಬೇಕು ಎಂದು ಈ ಕೆಳಗೆ ನೋಡಿ.
ಮೇಷ ರಾಶಿ
ಪಾಲುದಾರಿಕೆಯಲ್ಲಿ ಹೊಸ ಉದ್ಯಮ ಆರಂಭಿಸಲು ಯೋಜನೆ ರೂಪಿಸುವಿರಿ. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ಪ್ರಸಿದ್ಧ ಸಂಸ್ಥೆಗೆ ಸೇರುವ ನಿಮ್ಮ ಕನಸು ದೃಢವಾಗಲಿದೆ. ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಆಸಕ್ತಿ ತೋರುವಿರಿ.
ವೃಷಭ ರಾಶಿ
ಅನಗತ್ಯ ಓಡಾಟದಿಂದ ಸಮಯ ವ್ಯರ್ಥವಾಗಬಹುದು, ಜಾಗರೂಕರಾಗಿರಿ. ಆತುರದ ನಿರ್ಧಾರಗಳನ್ನು ತಗೊಳ್ಳದೆ ಶಾಂತವಾಗಿ ಚಿಂತಿಸಿ. ಕುಟುಂಬ ಮತ್ತು ವೈವಾಹಿಕ ಜೀವನದಲ್ಲಿ ಸಾಮರಸ್ಯ ಕಾಯ್ದುಕೊಳ್ಳುವುದು ಅಗತ್ಯ.
ಮಿಥುನ ರಾಶಿ
ನಿಂತುಹೋಗಿದ್ದ ಕೆಲಸಗಳನ್ನು ಪುನಃ ಆರಂಭಿಸಿ ಪೂರ್ಣಗೊಳಿಸುವಿರಿ. ಸಹೋದರನ ಬೆಂಬಲ ಸಿಗಲಿದೆ. ನೂತನ ವಾಹನ ಖರೀದಿಸುವ ಯೋಗವಿದೆ. ಕಾನೂನಾತ್ಮಕ ವಿಚಾರಗಳಲ್ಲಿ ತಾಳ್ಮೆ ಹಾಗೂ ಎಚ್ಚರಿಕೆ ಇರಲಿ.
ಕರ್ಕಾಟಕ ರಾಶಿ
ಮನೆಯಲ್ಲಿ ನಿಂತಿದ್ದ ಕೆಲಸಗಳು ಮತ್ತೆ ಚುರುಕುಗೊಳ್ಳಲಿವೆ. ತಂದೆಯವರೊಂದಿಗೆ ಆತ್ಮೀಯವಾಗಿ ಮಾತನಾಡಿ ಸಮಾಧಾನ ಪಡೆಯುವಿರಿ. ಕಛೇರಿಯಲ್ಲಿ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಪ್ರಶಂಸೆ ಪಡೆಯುವಿರಿ.
ಸಿಂಹ ರಾಶಿ
ಬಂದ ಹಣ ಕೈಯಲ್ಲಿ ನಿಲ್ಲದೆ ಖರ್ಚಾಗಬಹುದು, ಆರ್ಥಿಕ ಜಾಗ್ರತೆ ಇರಲಿ. ಮಕ್ಕಳ ಆಸ್ತಿ ವಿಚಾರದಲ್ಲಿ ಸಕಾರಾತ್ಮಕ ನಿರ್ಧಾರ ಕೈಗೊಳ್ಳುವಿರಿ. ಉದ್ಯೋಗ ಕ್ಷೇತ್ರದಲ್ಲಿ ವೃತ್ತಿಪರತೆಗೆ ಮೊದಲ ಆದ್ಯತೆ ನೀಡಿ.
ಕನ್ಯಾ ರಾಶಿ
ವಿದ್ಯಾಭ್ಯಾಸಕ್ಕೆ ತಕ್ಕಂತೆ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗಾವಕಾಶ ಸಿಗಲಿದೆ. ತಂದೆಯವರಿಗೆ ಆರ್ಥಿಕ ಸಹಾಯ ಮಾಡುವಿರಿ. ವ್ಯಾಪಾರ-ವಹಿವಾಟು ಸಾಮಾನ್ಯ ಹದದಲ್ಲಿ ಸಾಗಲಿದೆ. ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಿ.
ತುಲಾ ರಾಶಿ
ನಿಮ್ಮ ಚತುರತೆಯಿಂದ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಶತ್ರುಗಳ ವಿಚಾರದಲ್ಲಿ ಎಚ್ಚರವಿರಲಿ. ವಿದ್ಯಾರ್ಥಿಗಳು ವ್ಯಾಸಂಗದತ್ತ ಹೆಚ್ಚಿನ ಗಮನ ಹರಿಸುವುದು ಒಳಿತು. ಮಾತಿನಲ್ಲಿ ಮೃದುತ್ವ ಕಾಯ್ದುಕೊಳ್ಳಿ.
ವೃಶ್ಚಿಕ ರಾಶಿ
ಇಂದಿನ ನಿಮ್ಮ ಶ್ರಮಕ್ಕೆ ತಕ್ಕ ಉತ್ತಮ ಫಲ ಸಿಗಲಿದೆ. ತಂದೆಯ ಕಡೆಯಿಂದ ಆಸ್ತಿ ಅಥವಾ ಆರ್ಥಿಕ ಬೆಂಬಲ ಸಿಗುವ ಸಾಧ್ಯತೆ ಇದೆ. ಬರಬೇಕಾದ ಹಣವನ್ನು ಆತ್ಮವಿಶ್ವಾಸದಿಂದ ಪಡೆದುಕೊಳ್ಳುವಿರಿ.
ಧನು ರಾಶಿ
ಅಂದುಕೊಂಡ ಗುರಿಯನ್ನು ಸಾಧಿಸಿ ಸಮಾಧಾನ ಪಡೆಯುವಿರಿ. ಪ್ರಭಾವಿ ವ್ಯಕ್ತಿಗಳೊಂದಿಗೆ ಸೌಹಾರ್ದ ಸಂಬಂಧ ಏರ್ಪಡಲಿದೆ. ಸ್ನೇಹಿತರೊಡನೆ ಮಾತಿನ ಚಕಮಕಿ ಬೇಡ. ವೃತ್ತಿರಂಗದಲ್ಲಿ ನಿಷ್ಠೆಯಿಂದ ಮುನ್ನಡೆಯಿರಿ.
ಮಕರ ರಾಶಿ
ಇತರರಿಗೆ ಮಾಡುವ ಸಹಾಯದಿಂದ ಮನಸ್ಸಿಗೆ ಆನಂದ ಸಿಗಲಿದೆ. ಕೆಲಸದಲ್ಲಿ ಶಿಸ್ತು ಮತ್ತು ಸಮಯಪಾಲನೆಗೆ ಮೆಚ್ಚುಗೆ ಸಿಗಲಿದೆ. ವ್ಯಾಪಾರದಲ್ಲಿ ಅಂತರ ಕಾಯ್ದುಕೊಂಡು ಜಾಗರೂಕತೆಯಿಂದ ವ್ಯವಹರಿಸಿ.
ಕುಂಭ ರಾಶಿ
ಸವಾಲುಗಳು ಎದುರಾದರೂ ಧೈರ್ಯದಿಂದ ಮುನ್ನುಗ್ಗಿ. ಹೊಸ ವಿಷಯಗಳನ್ನು ಕಲಿಯಲು ಆಸಕ್ತಿ ತೋರುವಿರಿ. ಸ್ವತಂತ್ರ ನಿರ್ಧಾರಗಳನ್ನು ತಗೊಳ್ಳುವಾಗ ಹಿರಿಯರ ಮಾರ್ಗದರ್ಶನ ಪಡೆಯುವುದು ಸೂಕ್ತ.
ಮೀನ ರಾಶಿ
ಖರ್ಚುಗಳ ಮೇಲೆ ನಿಯಂತ್ರಣವಿರಲಿ. ಗುರುಹಿರಿಯರಲ್ಲಿ ಶ್ರದ್ಧೆ ಮತ್ತು ಗೌರವ ತೋರಿ. ನಿಮ್ಮ ಸಮಯಸ್ಫೂರ್ತಿಯಿಂದ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಹಳೆಯ ಅನಾರೋಗ್ಯ ಸಮಸ್ಯೆಯಿಂದ ಮುಕ್ತಿ ಸಿಗಲಿದೆ.
Horoscope Today 20 Sep 2026
ಸಂವತ್ಸರ: ಪರಾಭವ
ಅಯನ: ದಕ್ಷಿಣಾಯನ | ಋತು: ವರ್ಷ ಋತು
ಮಾಸ: ಭಾದ್ರಪದ (ಮಾಸ) | ಪಕ್ಷ: ಶುಕ್ಲ ಪಕ್ಷ
ತಿಥಿ: ದಶಮೀ | ವಾರ: ಭಾನುವಾರ
ನಕ್ಷತ್ರ: ಪೂರ್ವಾಷಾಢ | ಯೋಗ: ಸೌಭಾಗ್ಯ | ಕರಣ: ಕೌಲವ
ಸೂರ್ಯೋದಯ: ಬೆಳಿಗ್ಗೆ 06:09 | ಸೂರ್ಯಾಸ್ತ: ಸಂಜೆ 06:16
ರಾಹು ಕಾಲ: 04:45 PM – 06:16 PM
ಯಮಗಂಡ ಕಾಲ: 12:13 PM – 01:44 PM
ಗುಳಿಕ ಕಾಲ: 03:15 PM – 04:45 PM




