☔ Weather
Bengaluru: ☀️ 24°C | AQI 112
Mysore: ☀️ 22°C | AQI 135
Mangalore: ☀️ 27°C | AQI 180
Bengaluru: ☀️ 24°C | AQI 112
☔ Weather
Bengaluru: ☀️ 24°C | AQI 112
Mysore: ☀️ 22°C | AQI 135
Mangalore: ☀️ 27°C | AQI 180
Bengaluru: ☀️ 24°C | AQI 112

Daily Horoscope: ಇಂದು ಯಾವ ರಾಶಿಯವರು ಅಸ್ತಿತ್ವಕ್ಕೆ ಹೋರಾಟ ಮಾಡಬೇಕು?

Daily Horoscope: November 14 Zodiac Predictions And Astrological Updates
ನವೆಂಬರ್ 14ರ ಇಂದಿನ ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ. ಯಾವ ರಾಶಿಯವರಿಗೆ ಇಂದು ಎಚ್ಚರಿಕೆ ಅಗತ್ಯ ಹಾಗೂ ಯಾವ ರಾಶಿಗೆ ಶುಭಫಲವಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ನವೆಂಬರ್ 14, ಶನಿವಾರದ ಇಂದಿನ ರಾಶಿ ಭವಿಷ್ಯದ (Daily Horoscope) ಪ್ರಕಾರ, ಕೆಲ ನಿರ್ದಿಷ್ಟ ರಾಶಿಯವರು ಸಮಾಜದಲ್ಲಿ ಅಥವಾ ವೃತ್ತಿಜೀವನದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕಠಿಣ ಹೋರಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಲಿದೆ. ಇಂದಿನ ದಿನದಲ್ಲಿ ಪ್ರತಿಯೊಂದು ಪ್ರಮುಖ ನಿರ್ಧಾರಗಳಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಶರತ್ ಋತು, ಕಾರ್ತಿಕ ಮಾಸದ ಶುಕ್ಲ ಪಕ್ಷದ ಪಂಚಮೀ ತಿಥಿಯ ದಿನ ಇದಾಗಿದೆ. ಇಂದು ಅಮೂಲ್ಯ ಸಂಪತ್ತಿನ ಪ್ರಾಪ್ತಿ, ಪ್ರೇಮದಲ್ಲಿ ಮನಸ್ತಾಪ ಹಾಗೂ ಪ್ರಯಾಣದಲ್ಲಿ ಸೋಲಿನ ವಿಶೇಷತೆ ಇರಲಿದೆ.

ಇಂದಿನ ದ್ವಾದಶ ರಾಶಿಗಳ ಸಂಪೂರ್ಣ ಜ್ಯೋತಿಷ್ಯ ಫಲಗಳು ಮತ್ತು ದೈನಂದಿನ ಭವಿಷ್ಯವು ಹೇಗಿರಲಿದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದು ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಅವಶ್ಯವಾಗಿದೆ.

ಮೇಷ ರಾಶಿ

ಕಛೇರಿಯಲ್ಲಿ ಇಂದು ಹೆಚ್ಚಿನ ಕಾರ್ಯಭಾರವನ್ನು ನಿರ್ವಹಿಸಬೇಕಾದೀತು. ನಿಮ್ಮ ವೃತ್ತಿ ಜೀವನದಲ್ಲಿ ಹೊಸ ಸಾಧನೆಗಳನ್ನು ಮಾಡುವಿರಿ. ನಿಮ್ಮ ಜೀವನ ಸಂಗಾತಿಗಾಗಿ ಕೆಲವು ವಿಶೇಷ ಯೋಜನೆಗಳನ್ನು ರೂಪಿಸುವಿರಿ.

ವೃಷಭ ರಾಶಿ

ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಲಕ್ಷಣವಿದ್ದರೂ ಖರ್ಚುಗಳನ್ನು ನಿಯಂತ್ರಿಸಿ. ನಿಮ್ಮ ವೃತ್ತಿಜೀವನದ ಪ್ರಮುಖ ಗುರಿಗಳ ಮೇಲೆ ಮಾತ್ರ ಸಂಪೂರ್ಣ ಗಮನ ಹರಿಸಿ. ನಿಮ್ಮವರ ಮಾತುಗಳು ನಿಮಗೆ ಸ್ವಲ್ಪ ಅಸಮಾಧಾನ ತರಬಹುದು.

ಮಿಥುನ ರಾಶಿ

ನಿಮಗೆ ಸಿಕ್ಕ ಜವಾಬ್ದಾರಿಯಿಂದ ನೀವು ಬಹಳ ಖುಷಿಪಡುವಿರಿ. ಇತರರ ಗೌಪ್ಯ ವಿಚಾರಗಳನ್ನು ಬಿಚ್ಚಿಡುವುದರಲ್ಲಿ ಆಸಕ್ತಿ ತೋರುವಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ಗುರಿಗಳ ಮೇಲೆ ಹೆಚ್ಚು ಗಮನಹರಿಸಬೇಕು.

ಕರ್ಕಾಟಕ ರಾಶಿ

ನಿರಂತರ ಕೆಲಸದಿಂದ ಸ್ವಲ್ಪ ವಿಶ್ರಾಂತಿಯನ್ನು ಪಡೆದುಕೊಳ್ಳುವುದು ಉತ್ತಮ. ಅನಾವಶ್ಯಕ ವಾದ-ವಿವಾದಗಳಿಂದ ಆದಷ್ಟು ದೂರವಿರುವುದು ಒಳ್ಳೆಯದು. ಕಚೇರಿಯಲ್ಲಿ ಇಂದು ಸ್ಪರ್ಧೆಯ ವಾತಾವರಣವಿರಲಿದೆ.

ಸಿಂಹ ರಾಶಿ

ರಕ್ಷಣೆಯ ಜವಾಬ್ದಾರಿ ಹೊಂದಿರುವವರಿಗೆ ಇಂದು ಅಧಿಕ ಒತ್ತಡವಿರುತ್ತದೆ. ಮಕ್ಕಳೊಂದಿಗೆ ಪ್ರೀತಿಯಿಂದ ವರ್ತಿಸಿ ಅವರ ಮನಸ್ಸು ಗೆಲ್ಲಿರಿ. ಯಾರನ್ನೂ ಅವಲಂಬಿಸದೆ ಸ್ವಾವಲಂಬನೆಯಿಂದ ನಿಲ್ಲುವ ಹಠವಿರುತ್ತದೆ.

ಕನ್ಯಾ ರಾಶಿ

ಮಾಡಬೇಕಾದ ಕಾರ್ಯಗಳು ಯಾವುದೇ ದೊಡ್ಡ ಒತ್ತಡವಿಲ್ಲದೆ ಸುಲಭವಾಗಿ ನೆರವೇರಲಿದೆ. ರತ್ನ ವ್ಯಾಪಾರ ಮಾಡುವವರಿಗೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗಬಹುದು. ತಂಡವಾಗಿ ಕೆಲಸ ಮಾಡಿ ಯಶಸ್ಸು ಗಳಿಸುವಿರಿ.

ತುಲಾ ರಾಶಿ

ನಿಮ್ಮ ಅಸಹಕಾರದ ಧೋರಣೆಯಿಂದ ಮಕ್ಕಳಿಗೆ ಬೇಸರವಾಗಬಹುದು. ಯೋಜಿತ ಕಾರ್ಯಗಳು ಸಮಯಕ್ಕೆ ಸರಿಯಾಗಿ ಮುಗಿದು ನೆಮ್ಮದಿ ಸಿಗಲಿದೆ. ನಿಮ್ಮ ತಂದೆಯ ಮೇಲೆ ಹೆಚ್ಚಿನ ಗೌರವವಿಟ್ಟುಕೊಳ್ಳುವಿರಿ.

ವೃಶ್ಚಿಕ ರಾಶಿ

ನಿಮ್ಮ ಉದ್ವೇಗದ ಮನಸ್ಥಿತಿಯನ್ನು ಇತರರ ಮುಂದೆ ತೋರಿಸಿಕೊಳ್ಳಬೇಡಿ. ಮೇಲಾಧಿಕಾರಿಗಳಿಂದ ನಿಮ್ಮ ದೈನಂದಿನ ಕಾರ್ಯಕ್ಕೆ ತೊಂದರೆ ಎದುರಾಗಬಹುದು. ಕಷ್ಟವಾದರೂ ಸಾಲವನ್ನು ಮರುಪಾವತಿ ಮಾಡುವಿರಿ.

ಧನು ರಾಶಿ

ನಿರಂತರ ಯೋಗಾಭ್ಯಾಸದಿಂದ ನಿಮಗೆ ಇಂದು ಸ್ವಲ್ಪ ಆಯಾಸವಾಗಬಹುದು. ಹೋರಾಟದ ಬಳಿಕ ಉದ್ಯೋಗದಲ್ಲಿ ಬಡ್ತಿ ಮತ್ತು ಬದಲಾವಣೆ ಸಿಗುವುದು. ಕೋಪದಿಂದ ನಿಮ್ಮ ಸಂಗಾತಿಯಿಂದ ದೂರಾಗುವಿರಿ.

ಮಕರ ರಾಶಿ

ಕಛೇರಿಯ ವ್ಯವಹಾರದಲ್ಲಿ ನಿಮಗೆ ಮಾನಸಿಕ ಒತ್ತಡ ಎದುರಾಗಬಹುದು. ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ವ್ಯವಹರಿಸಿ. ಹಿರಿಯರಿಂದ ನಿಮಗೆ ಉತ್ತಮ ಮಾರ್ಗದರ್ಶನ ಸಿಗಲಿದೆ.

ಕುಂಭ ರಾಶಿ

ನಿಮ್ಮ ಮಾತುಗಳು ಇಂದು ಬಹಳ ಕಠೋರವಾಗಿರುವ ಸಾಧ್ಯತೆಯಿದೆ. ವಾಹನ ಚಾಲನೆ ಮಾಡುವಾಗ ಎಚ್ಚರವಿರಲಿ, ಗಾಯವಾಗುವ ಸಂಭವವಿದೆ. ನಿಮ್ಮ ಖರ್ಚುಗಳನ್ನು ನೀವೇ ಖುದ್ದಾಗಿ ನಿಯಂತ್ರಿಸಬೇಕು.

ಮೀನ ರಾಶಿ (Daily Horoscope)

ಕಳೆದ ಹೋದ ವಿಚಾರಗಳನ್ನು ಮತ್ತೆ ಮತ್ತೆ ನೆನೆದು ದುಃಖಿಸಬೇಡಿ. ನೂತನ ವಾಹನವನ್ನು ಖರೀದಿಸುವ ಆಲೋಚನೆ ನಿಮ್ಮಲ್ಲಿ ಮೂಡಲಿದೆ. ಅಶಕ್ತರಿಗೆ ನಿಮ್ಮ ಕೈಲಾದ ಉತ್ತಮ ಸಹಾಯ ಮಾಡುವಿರಿ.